ಸೊನ್ನೆ ಸುತ್ತಿ ಹೊಸ ದಾಖಲೆ ನಿರ್ಮಿಸಿದ ಆಶ್ಟನ್ ಟರ್ನರ್….! 

ಜೈಪುರ: 12ನೇ ಆವೃತಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ಪರ ಆಡುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಆಶ್ಟನ್ ಟರ್ನರ್‌, ಸತತ 3 ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅನಗತ್ಯ ದಾಖಲೆಯೊಂದಕ್ಕೆ ಗುರಿಯಾಗಿದ್ದಾರೆ. ಐಪಿಎಲ್ ಗೂ ಮೊದಲು ಭಾರತ ವಿರುದ್ಧ ವಿಶಾಖಪಟ್ಟಣಂನಲ್ಲಿ ನಡೆದ ಟಿ20 ಪಂದ್ಯ, ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಅಡಿಲೇಡ್‌ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲೂ ಸೊನ್ನೆಗೆ ಔಟಾಗಿದ್ದರು. ಹೀಗಾಗಿ ಸತತ 5 ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ವಿಶ್ವದ ಮೊದಲ ಆಟಗಾರ ಎನ್ನುವ ಅಪಖ್ಯಾತಿಗೆ ಟರ್ನರ್‌ ಗುರಿಯಾಗಿದ್ದಾರೆ. ಅಲ್ಲದೇ […]

ಅಪರಿಚಿತ ಮಹಿಳೆ ಶವಪತ್ತೆ: ಪತ್ತೆಗೆ ಮನವಿ

ಉಡುಪಿ: ಕುತ್ಪಾಡಿ ಪಡುಕೆರೆ ಕಡಲ ತಡಿಯಲ್ಲಿ ಕಡಲ ಕೊರೆತ ತಡೆಗೊಡೆಗೆ, ಹಾಕಿದ ಕಲ್ಲುಗಳ ಸಂದಿಯಲ್ಲಿ ಸುಮಾರು 40 ವರ್ಷ ಪ್ರಾಯದ ಅಪರಿಚಿತ ಮಹಿಳೆಯ ಶವವು ಪತ್ತೆಯಾದ ಘಟನೆ  ಮಂಗಳವಾರ  ಬೆಳಗಿನ ಜಾವ ನಡಿದೆ. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾರಸುದಾರರು ನಗರ ಠಾಣೆ ಅಥವ, ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ ಸಂಪರ್ಕಿಸ ಬಹುದು. ಶವ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಉಚಿತ ಅಂಬುಲೇನ್ಸ್ ಸೇವೆ ನೀಡಿ ಇಲಾಖೆಗೆ […]

ಲೋಕಸಭಾ ಚುನಾವಣೆ: ಬೈಂದೂರು ಕ್ಷೇತ್ರದಲ್ಲಿ ಹಲವೆಡೆ ಬಿರುಸಿನ ಮತದಾನ

ಕುಂದಾಪುರ: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಮಂಗಳವಾರ ನಡೆಯುತ್ತಿದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ಕ್ಷೇತ್ರದಲ್ಲಿ ಬೆಳಗ್ಗೆಯಿಂದ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿರುವುದು ಕಂಡುಬಂದಿದೆ. ಹೆಮ್ಮಾಡಿ, ವಂಡ್ಸೆ ಸೇರಿದಂತೆ ಕೆಲವು ಕಡೆಗಳಲ್ಲಿ ಇವಿಎಂ ಸಮಸ್ಯೆಯಿಂದ ಮತದಾನ ಅರ್ಧಗಂಟೆಗಳ ಕಾಲ ತಡವಾಗಿ ಆರಂಭಗೊಂಡಿತ್ತು. ಹೆಮ್ಮಾಡಿ ಸಖಿ ಮತಗಟ್ಟೆಯಲ್ಲಿ ಇವಿಎಂ ದೋಷದಿಂದ ಮತದಾನ ವಿಳಂಬವಾಗಿದ್ದು ಸುಮಾರು ಮುಕ್ಕಾಲು ಗಂಟೆ ತಡವಾಗಿ ಆರಂಭಗೊಂಡ ಮತದಾನ ಪ್ರಕ್ರಿಯೆಯಿಂದ ಮತದಾರರು ಇರುಸುಮುರುಸುಗೊಂಡರು. ಇನ್ನು ಮತಯಂತ್ರದ ಬಳಿ ಬೆಳಕಿನ ಕೊರತೆಯಿಂದಾಗಿ ಕೆಲವು ಚಿಹ್ನೆ ಕಾಣಿಸದೆ […]