ಜೈಪುರ: 12ನೇ ಆವೃತಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಆಶ್ಟನ್ ಟರ್ನರ್, ಸತತ 3 ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅನಗತ್ಯ ದಾಖಲೆಯೊಂದಕ್ಕೆ ಗುರಿಯಾಗಿದ್ದಾರೆ.
ಐಪಿಎಲ್ ಗೂ ಮೊದಲು ಭಾರತ ವಿರುದ್ಧ ವಿಶಾಖಪಟ್ಟಣಂನಲ್ಲಿ ನಡೆದ ಟಿ20 ಪಂದ್ಯ, ಬಿಗ್‌ಬ್ಯಾಶ್ ಲೀಗ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲೂ ಸೊನ್ನೆಗೆ ಔಟಾಗಿದ್ದರು.
ಹೀಗಾಗಿ ಸತತ 5 ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ವಿಶ್ವದ ಮೊದಲ ಆಟಗಾರ ಎನ್ನುವ ಅಪಖ್ಯಾತಿಗೆ ಟರ್ನರ್ ಗುರಿಯಾಗಿದ್ದಾರೆ. ಅಲ್ಲದೇ ಐಪಿಎಲ್ ನ ಮೂರು ಪಂದ್ಯ ಸಹಿತ 4 ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದಾರೆ.