ರಕ್ಷಿತ್ ಶೆಟ್ಟಿ ಅಭಿನಯದ “ಅವನೇ ಶ್ರೀಮನ್ನಾರಾಯಣ” ಆಗಸ್ಟ್ ನಲ್ಲಿ ಬಿಡುಗಡೆ.!
ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ವಿಷಯವನ್ನು ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವನೇ ಶ್ರೀಮನ್ನಾರಾಯಣ ಸೆಟ್ ನಲ್ಲಿ ಕಂಡ ರವಿಮಾಮ ಜೊತೆಗೆ ಈ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಕಾಣಲಿದೆಯಂತೆ. ಕಿರಿಕ್ ಪಾರ್ಟಿ ಸಿನಿಮಾದ ಅನಂತರ ರಕ್ಷಿತ್ ನಟನೆಯ ಬೇರೆ ಸಿನಿಮಾ ಬಿಡುಗಡೆಯಾಗಿಲ್ಲ. ಅವನೇ ಶ್ರೀಮನ್ನಾರಾಯಣ ಸಿನಿಮಾವನ್ನು ಸಚಿನ್ […]
ಶಾಸಕರಾದ ರಘುಪತಿ ಭಟ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಚೌಕಿದಾರ್ ಸೈಕ್ಲೋತಾನ್ ಸೈಕಲ್ ಜಾಥಾ
ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಚಂಡ ಬಹುಮತದಿಂದ ಗೆಲ್ಲಿಸಿಕೊಡುವ ಸಲುಚಾಗಿ ಇಂದು ಉಡುಪಿಯಲ್ಲಿ ಶಾಸಕರಾದ ಕೆ ರಘುಪತಿ ಭಟ್ ಅವರ ನೇತೃತ್ವದಲ್ಲಿ ಉಡುಪಿ ಬಿಜೆಪಿ ಯುವಮೋರ್ಚಾ ವತಿಯಿಂದ “ಚೌಕಿದಾರ್ ಸೈಕ್ಲೋತಾನ್ ಸೈಕಲ್ ಜಾಥಾ”ವು ಯಶಸ್ವಿಯಾಗಿ ನಡೆಯಿತು. ಉಡುಪಿ ಮಲ್ಪೆಯಿಂದ ಆರಂಭಗೊಂಡು ತಾಲೂಕು ಕಚೇರಿಯಿಂದ ಬ್ರಹ್ಮಗಿರಿ- ಅಜ್ಜರಕಾಡು ಮೂಲಕ ಸಾಗಿ ಜಿಲ್ಲಾ ಬಿಜೆಪಿ ಕಚೇರಿ ಬಳಿ ಸಮಾಪಣಗೊಂಡಿತು. ಕಾರ್ಯಕ್ರಮದಲ್ಲಿ ಶಾಸಕರ ಜೊತೆಗೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಯಶ್ಪಾಲ್ ಸುವರ್ಣ ಕೂಡ ಜೊತೆಗಿದ್ದರು ಮತ್ತು ಬಿಜೆಪಿ ಯುವಮೋರ್ಚಾ […]
ಮಾಜಿ ಸಚಿವ ಪ್ರಮೋದ್ ಮೀನುಗಾರರಿಗೆ ದ್ರೋಹ ಮಾಡಿದ್ದಾರೆ: ಯಶ್ ಪಾಲ್ ಸುವರ್ಣ ಆರೋಪ
ಉಡುಪಿ: ಮೈತ್ರಿ ಅಭ್ಯರ್ಥಿಯಾಗಿರುವ ಪ್ರಮೋದ್ ಮಧ್ವರಾಜ್ ಅವರು ಹಿಂದೆ ಮೀನುಗಾರ ಸಚಿವರಾಗಿದ್ದ ಸಂದರ್ಭದಲ್ಲಿ ಅವರ ಮೇಲೆ ಮೀನುಗಾರರ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಮೀನುಗಾರರಿಗೆ ಸೌಲಭ್ಯಗಳನ್ನು ನೀಡುವ ಬದಲು ಈ ಹಿಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಜಾರಿಗೊಳಿಸಿದ್ದ ಯೋಜನೆಗಳನ್ನು ಮೀನುಗಾರರಿಂದ ಕಿತ್ತುಕೊಂಡರು. ಮೀನುಗಾರರ ಒಂದೇ ಒಂದು ಬೇಡಿಕೆಯನ್ನು ಈಡೇರಿಸದೆ ಮೀನುಗಾರರಿಗೆ ದ್ರೋಹ ಮಾಡಿದ್ದಾರೆ ಎಂದು ಉಡುಪಿ–ದ.ಕ. ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಆರೋಪಿಸಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ […]
ನವೀಕರಣಗೊಂಡಿದೆ ಶಿರೂರು ಮೂಲ ಮಠ: ರಾಮನವಮಿ ಉತ್ಸವ ಸಂಭ್ರಮ
ಹಿರಿಯಡಕ: ಉಡುಪಿಯ ಅಷ್ಟಮಠಗಳಲ್ಲಿ ಹೆಸರಾದ ಶಿರೂರು ಮಠದ ಮೂಲ ಮಠದಲ್ಲಿ ರಾಮನವಮಿ ಮಹೋತ್ಸವವು ಶಿರೂರು ಮಠದ ದ್ವಂದ್ವಮಠವಾದ ಸೋದೆ ವಾದಿರಾಜ ಮಠಾಧೀಶರಾದ ವಿಶ್ವವಲ್ಲಭತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸಂಭ್ರಮದಿಂದ ನಡೆಯಲಿದೆ. ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಏ.12 ರಂದು ಬೆಳಿಗ್ಗೆ ಗಣಹೋಮ, ಸೋದೆ ಹಾಗೂ ಶಿರೂರ ಮಠ ಸಂಸ್ಥಾನಗಳ ದೇವರ ಪೂಜೆ, ವೇದವ್ಯಾಸ ದೇವರ ಪೂಜೆ, ಪ್ರಾಣದೇವರ ಪೂಜೆ, ವಾದಿರಾಜರ ಪೂಜೆ ನಡೆಯಲಿದೆ. ಸಂಜೆ ಕಟ್ಟೆ ಪೂಜೆ, ಶ್ರೀ ಪ್ರಾಣದೇವರ ರಂಗಪೂಜೆ, ಭೂತರಾಜರ ಪೂಜೆ ನಡೆಯಲಿದೆ. 13 […]
ಕುಂದಾಪುರ: ಮತದಾನ ಕುರಿತು ಬೀದಿ ನಾಟಕ
ಉಡುಪಿ: ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾಡಳಿತ ಉಡುಪಿ ಜಿಲ್ಲೆ ಹಾಗೂ ಕುಂದಾಪುರ ಪುರಸಭೆ ಜಂಟಿಯಾಗಿ ಶುಕ್ರವಾರ ಶಾಸ್ತ್ರೀ ಸರ್ಕಲ್ ಬಸ್ ನಿಲ್ದಾಣದಲ್ಲಿ ಮತದಾನ ಅರಿವು ಕಾರ್ಯಕ್ರಮದ ಅಂಗವಾಗಿ ಬೀದಿ ನಾಟಕ ಹಮ್ಮಿಕೊಳ್ಳಲಾಯಿತು. ಪಾತ್ರದಾರಿಗಳ ಮನೋಜ್ಞ ಅಭಿನಯದಿಂದಾಗಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.