ಬಾಲಕೋಟ್ ಮೇಲಿನ ವಾಯು ದಾಳಿಯಿಂದ ಕಾಂಗ್ರೆಸ್ ಗೆ ನೋವಾಗಿದೆ: ಪ್ರಧಾನಿ ಮೋದಿ
ಚಿತ್ರದುರ್ಗ: ಬಾಲಕೋಟ್ ಮೇಲಿನ ವಾಯು ದಾಳಿಯಿಂದ ಪಾಕಿಸ್ತಾನಕ್ಕೆ ನೋವು ಆಗಿದೆಯೋ ಗೊತ್ತಿಲ್ಲ. ಇಲ್ಲಿಯ ಜೆಡಿಎಸ್ ಮತ್ತು ಕಾಂಗ್ರೆಸ್ ತುಂಬಾನೇ ನೋವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಚಿತ್ರ ದುರ್ಗದ ಬಿಜೆಪಿ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಐದು ವರ್ಷಗಳ ಹಿಂದೆ ನೀವು ನೀಡಿದ್ದ ಅಧಿಕಾರದಿಂದ ದೇಶದೆಲ್ಲೆಡೆ ಹಿಂದೂಸ್ತಾನದ ಘೋಷಣೆಗಳು ಕೇಳುತ್ತಿವೆ. ಈ ಮೊದಲು ನೆರೆಯ ವೈರಿ ಪಾಕಿಸ್ತಾನ ನಮಗೆ ಬೆದರಿಕೆ ಹಾಕುತ್ತಿದ್ದವು. ಅಂದಿನ ಸರ್ಕಾರಗಳು ಯಾವುದೇ ಕ್ರಮಕೈಗೊಳ್ಳುತ್ತಿರಲಿಲ್ಲ. ಇಂದು ಧಮ್ಕಿ ಹಾಕುತ್ತಿದ್ದವರ […]
ಕುಂದಾಪುರ ಮಹಿಳಾ ಸಾಂತ್ವನ ಕೇಂದ್ರದಲ್ಲಿ ನಡೆಯಿತು ಪ್ರೇಮಿಗಳ ಮದುವೆ:ಜೋಡಿಗಳನ್ನು ಒಂದು ಮಾಡಿದ ಕೇಂದ್ರ
ಕುಂದಾಪುರ: ಪರಸ್ಪರ ಪ್ರೀತಿಸುತ್ತಿದ್ದ ಕೋಟೇಶ್ವರ ಮಾರ್ಕೋಡಿನ ರಾಮ ಪೂಜಾರಿ ಅವರ ಪುತ್ರ ಶ್ರೀಕಾಂತ ಪೂಜಾರಿ ಹಾಗೂ ಗಂಗೊಳ್ಳಿಯ ನರಸಿಂಹ ಖಾರ್ವಿ ಅವರ ಪುತ್ರಿ ಶಾಲಿನಿ ಖಾರ್ವಿ ಅವರನ್ನು ಕರೆಯಿಸಿ ಪೋಷಕರ ಸಮ್ಮುಖ ಕುಂದಾಪುರದಲ್ಲಿನ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಮಂಗಳವಾರ ಮದುವೆ ಮಾಡಿಸಲಾಯಿತು. ಹಲವು ಸಮಯಗಳಿಂದ ಪ್ರೀತಿಸುತ್ತಿದ್ದ ಜೋಡಿ ಮನೆಯವರ ವಿರೋಧದ ಹಿನ್ನೆಲೆ ಕುಂದಾಪುರ ಸಾಂತ್ವನ ಕೇಂದ್ರದ ಮುಖ್ಯಸ್ಥೆ ರಾಧಾದಾಸ್ ಬಳಿ ಆಗಮಿಸಿ ಕೇಂದ್ರಕ್ಕೆ ವಿವಾಹ ಮಾಡಿಸುವಂತೆ ಮನವಿ ನೀಡಿದ್ದರು. ಅದರಂತೆಯೇ ರಾಧಾದಾಸ್ ಅವರು ಎರಡು ಮನೆಯವರ ಬಳಿ […]
ಬಿಸಿಬಿಸಿ ಪಲಾವ್, ಬೊಂಬಾಟ್ ಕೇಸರಿಬಾತ್: ಹೆಮ್ಮಾಡಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಆಹಾರ ಮೇಳ ಭಾರೀ ಗಮ್ಮತ್ತ್
ಕುಂದಾಪುರ: ಬಿಸಿಬಿಸಿ ಪಲಾವ್ ಇದೆ..ಕೇಸರಿ ಬಾತ್ ಕೂಡ ರೆಡಿ ಇದೆ..ಬನ್ನಿ ಸರ್..ಬನ್ನಿ ಮೇಡಂ! ಇಲ್ಲಿ ಬನ್ನಿ.. ಇಲ್ಲಿ ಬನ್ನಿ.. ಬರೇ ಹತ್ತು ರೂಪಾಯಿ…ಶುಚಿರುಚಿಯಾದ ರಾಗಿ ಜ್ಯೂಸ್..ಬನ್ನಿ ಸರ್..ಬನ್ನಿ ಮೇಡಂ.. ದಣಿವಾರಿಸಿಕೊಳ್ಳಿ ಅಣ್ಣ..ಕಲ್ಲಂಗಡಿ ಹಣ್ಣು ತಿನ್ನಿ..ಲಿಂಬು ಶರಬತ್ ಕುಡಿಯಿರಿ..ಕೇವಲ ಹತ್ತು ರೂಪಾಯಿ ಕೊಟ್ಟು.. ಆಹಾ…ಆಹಾರ ಮೇಳ ಸೋಮವಾರ ಹೆಮ್ಮಾಡಿ ಪ್ರಾಥಮಿಕ ಶಾಲಾ ಆವರಣ ಒಳ ಪ್ರವೇಶಿಸುತ್ತಿದ್ದಂತೆ ವಿದ್ಯಾರ್ಥಿಗಳ ಬಾಯಿಯಿಂದ ಕೇಳಿಬಂದ ಮಾತುಗಳಿವು! ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ, ವ್ಯಾಪಾರ ಕೌಶಲ್ಯವನ್ನು ಬೆಳೆಸುವ ಸದುದ್ದೇಶದಿಂದ ಹೆಮ್ಮಾಡಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಆಹಾರ ಮೇಳ […]
ಬಜರಂಗ ದಳ ಮುಖಂಡರಿಗೆ ಗಡಿಪಾರು ಆದೇಶ: ಖಂಡನೆ
ಉಡುಪಿ: ಬಜರಂಗ ದಳದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಚಾಲಕ್ ರಘು ಸಕಲೇಶಪುರ ಅವರಿಗೆ ರಾಜ್ಯ ಸರಕಾರ ಗಡಿಪಾರು ಆದೇಶ ಹೊರಡಿಸಿರುವುದು ಖಂಡನೀಯ ಎಂದು ಬಜರಂಗ ದಳದ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್. ತಿಳಿಸಿದ್ದಾರೆ. ಚುನಾವಣೆ ಸಂದರ್ಭ ನಮ್ಮ ಸಂಘಟನೆಯ ಕಾರ್ಯಕರ್ತರು ದೇಶದ ರಕ್ಷಣೆಗಾಗಿ ತಮ್ಮ ಸೇವೆಯಲ್ಲಿ ತೊಡಗಿದ್ದಾರೆ. ಭಾರತವನ್ನು ಜಗದ್ಗುರು ಮಾಡುವ ನಾಯಕತ್ವಕ್ಕೆ ಬೆಂಬಲ ಕೊಡುತ್ತಾ, ರಾಷ್ಟ್ರೀಯತೇ ಮತ್ತು ಧರ್ಮ ವನ್ನು ಕಾಯುವ ನಾಯಕತ್ವ ವನ್ನು ಬೆಂಬಲಿಸುವ ಕಾರ್ಯವನ್ನು ಬಜರಂಗದ ಕಾರ್ಯಕರ್ತರು ಮಾಡುತ್ತಿದ್ದಾರೆ. ಆದರೆ ಇದನ್ನು […]
ರಾಹುಲ್ ಗಾಂಧಿಗೆ ಮುಜಗರ ತಂದೊಡ್ಡಿದ ಜಾಹಿರಾತು ಚಿತ್ರ
ನವದೆಹಲಿ: ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಡುಗಡೆಗೊಳಿಸಿದ ಜಾಹೀರಾತೊಂದು ಇದೀಗ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಗೆ ಮುಜುಗರ ತಂದೊಡ್ಡುವಂತಾಗಿದೆ. ಕಾಂಗ್ರೆಸ್ ಪಕ್ಷದ ‘ನ್ಯಾಯ್ ಯೋಜನೆ’ಯ ಪ್ರಚಾರದ ಜಾಹೀರಾತಿನಲ್ಲಿ ರಾಹುಲ್ ವಯೋವೃದ್ದೆಯನ್ನು ತಬ್ಬಿಕೊಂಡು ಸಂತೈಸುತ್ತಿರುವ ಚಿತ್ರವಿದೆ. ಆದರೆ ವೃದ್ಧೆಯನ್ನು ಹಿಡಿದುಕೊಂಡು ರಾಹುಲ್‌ಗೆ ಮೂರು ಕೈ ಇರುವ ರೀತಿ ಪೋಟೋ ತೆಗೆಯಲಾಗಿದೆ. ಇದು ಮೂಲ ಫೋಟೋವನ್ನು ಜಾಹೀರಾತಿಗೆ ಬಳಸುವ ವೇಳೆ ಮಾಡಿದ ಎಡವಟ್ಟಾಗಿದೆ. ರಾಹುಲ್ ಗಾಂಧಿ ಜತೆಗೆ ಮತ್ತೊಬ್ಬ ವ್ಯಕ್ತಿ ಕೂಡಾ ಸಂತೈಸುತ್ತಿದ್ದು ಆದರೆ ಜಾಹೀರಾತಿಗೆ ಆ ಫೋಟೋ ಬಳಸುವಾಗ ಮತ್ತೊಬ್ಬ […]