ನಮ್ಮಲ್ಲಿ ಭಿನ್ನಮತ ಇಲ್ಲ: ಒಗ್ಗಟ್ಟಾಗಿ ಬಿಜೆಪಿ ರಥ ಎಳೆಯುತ್ತೇವೆ- ಸಂಸದೆ ಶೋಭಾ 

ಉಡುಪಿ:ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಟಿಕೆಟ್ ಗೆ ಆಕಾಂಕ್ಷೆ ಪಡೋದು ತಪ್ಪಲ್ಲ.‌ ಟಿಕೆಟ್ ಘೋಷಣೆಯಾದ ಬಳಿಕ ಅಭ್ಯರ್ಥಿ ಪರ ದುಡಿಯುತ್ತಾರೆ ಎಂದು ಸಂಸದೆ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಉಡುಪಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಬಿಜೆಪಿ ವರಿಷ್ಠರು ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ. ಪಕ್ಷದ ರಾಷ್ಟ್ರೀಯ, ರಾಜ್ಯ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ಅವಕಾಶ ನೀಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾವು ಒಗ್ಗಟ್ಟಾಗಿ […]

ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ: ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಕಣಕ್ಕೆ; ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆ.

ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆ ಮಾಡಲಿದ್ದು, ಜೆಡಿಎಸ್ ಬಿ ಫಾರಂ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ – ಜೆಡಿಎಸ್ ಸೀಟು ಹಂಚಿಕೆ ಒಪ್ಪಂದಂತೆ ಉಡುಪಿ – ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ ಪಾಲಾಗಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಯಾರು ಸ್ಪರ್ಧಿಸಲಿದ್ದಾರೆ ಎಂಬುವುದು ಭಾರೀ ಕುತೂಹಲ ಸೃಷ್ಟಿಸಿತ್ತು. ಆದರೆ ಇಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಪ್ರಮೋದ್ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಚಿಹ್ನೆಯಡಿ ಸ್ಪರ್ಧಿಸುವುದು ಖಚಿತಗೊಳ್ಳುತ್ತಿದ್ದಂತೆ ಗೊಂದಲಗಳಿಗೆ ತೆರೆಬಿದ್ದಿದೆ. […]

ನಂಗಂತೂ ಎಕ್ಸಾಮ್ ಈಝೀ ಆಯ್ತ್ ಮರೈತಿ! :ಎಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನ ಖುಷ್ ಆದ ಕುಂದಾಪ್ರ ವಿದ್ಯಾರ್ಥಿಗಳು

ಎಕ್ಸಾಮ್ ಎಷ್ಟ್ ಈಝೀ ಆಯ್ತಲಾ. ನಾನು ಓದ್ಕಂಡಿದ್ದೆ ಬಂದಿತ್ ಮರೈತಿ. ನಾನ್ ಸಿಲೆಬಸ್ಸ್ ಹೊರಗಿನ್ ಪ್ರಶ್ನೆ ಕೇಳ್ತ್ರಂತ ಹೆದ್ರಿಕಿಯಲ್ ಇದ್ದಿದೆ ಮರಯಾ. ನಾನ್ ಎರಡುವರೆ ಗಂಟೆಯೊಳ್ಗ್ ಪರೀಕ್ಷೆ ಮುಗ್ಸಿದೆ. ಅದೆಲ್ಲಾ ಹೊಯ್ಲಿ ನೀನ್ ನಾಲ್ಕನೆ ಪ್ರಶ್ನೆಗ್ ಏನ್ ಬರ್ದೆ. ನಾನ್ ನಿಂಗೆ ಹೇಳಿಲ್ಯ ಅದೇ ಪ್ರಶ್ನೆ ಕೊಡ್ತಾರಂತ. ೨೦೧೮-೧೯ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯ ಮೊದಲ ದಿನವಾದ ಗುರುವಾರ ಕನ್ನಡ ಪರೀಕ್ಷೆ ಬರೆದು ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿಗಳ ಬಾಯಿಯಿಂದ ಕೇಳಿಬಂದ ಮಾತುಗಳಿವು. ಕುಂದಾಪುರದ ಬೋರ್ಡ್ ಹೈಸ್ಕೂಲ್‌ನಲ್ಲಿ ಎಸೆಸ್ಸೆಲ್ಸಿ ಪರೀಕ್ಷೆ […]

ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ:  ಶೋಭಾಗೆ ಒಲಿದ ಅದೃಷ್ಟ: ಹೆಗ್ಡೆ ಸ್ಪರ್ಧೆಯಿಂದ ಔಟ್

ಉಡುಪಿ: ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ ಕೊನೆಗೂ ಬಿಜೆಪಿ ಅಭ್ಯರ್ಥಿ ಘೋಷಣೆ ಆಗಿದ್ದು, ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನೇ ಎರಡನೇ ಅವಧಿಗೆ ಕಣಕ್ಕಿಳಿಲಿಸಿದೆ. ಪರ ವಿರೋಧದ ನಡುವೆಯೂ ಬಿಜೆಪಿ ವರಿಷ್ಠರು ಮತ್ತೊಮ್ಮೆ ಶೋಭಾ ಅವರನ್ನು ಕಣಕ್ಕಿಳಿಸಿ ಅಚ್ಚರಿ ಮೂಡಿಸಿದ್ದಾರೆ. ವರಿಷ್ಠರ ಈ ನಿರ್ಧಾರದಿಂದ ಪ್ರಬಲ ಆಕಾಂಕ್ಷಿಗಳಾಗಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹಾಗೂ ಬಿಜೆಪಿ‌ ಮುಖಂಡ ಯಶ್ ಪಾಲ್ ಸುವರ್ಣ ಅವರಿಗೆ ಹಿನ್ನಡೆಯಾಗಿದೆ. ಹೈಕಮಾಂಡ್ ಗಮನಸೆಳೆದು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ […]

ಹುಳಿಮಾವು ಕಪ್-2019:ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ

ಹುಳಿಮಾವು ಗ್ರಾಮಸ್ಥರು ಹಾಗೂ H.C.B(ಹುಳಿಮಾವು ಕ್ರಿಕೆಟ್ ಬಾಯ್ಸ್)ವತಿಯಿಂದ ಸತತ 5 ನೇ ಬಾರಿಗೆ ರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ಪಂದ್ಯಾಕೂಟವನ್ನು ಏರ್ಪಡಿಸಿದ್ದು, ಇದೇ ಬರುವ 23 ಹಾಗೂ 24 ಮಾರ್ಚ್ (ಶನಿವಾರ,ರವಿವಾರ)ಎರಡು ದಿನಗಳ ಹಗಲಿನ ದಾಂಡು ಚೆಂಡಿನ ಸಮರ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ, ಹುಳಿಮಾವಿನ ಇಸ್ಲಾಮಿಯ ಕಾಲೇಜು ಮೈದಾನದಲ್ಲಿ ನಡೆಯಲಿದ್ದು ರಾಷ್ಟ್ರದ ವಿವಿಧೆಡೆಯಿಂದ 16 ತಂಡಗಳು ಈಗಾಗಲೇ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು, ರೋಚಕ ಹಣಾಹಣಿಗಳಿಗೆ ಇಸ್ಲಾಮಿಯಾ ಕಾಲೇಜು ಮೈದಾನ ಸಾಕ್ಷಿಯಾಗಲಿದೆ. ಪಂದ್ಯಾಕೂಟದ ವಿಜೇತ ತಂಡ 1,50,000 ನಗದು ಹಾಗೂ […]