ಹುಳಿಮಾವು ಗ್ರಾಮಸ್ಥರು ಹಾಗೂ H.C.B(ಹುಳಿಮಾವು ಕ್ರಿಕೆಟ್ ಬಾಯ್ಸ್)ವತಿಯಿಂದ ಸತತ 5 ನೇ ಬಾರಿಗೆ ರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ಪಂದ್ಯಾಕೂಟವನ್ನು ಏರ್ಪಡಿಸಿದ್ದು, ಇದೇ ಬರುವ 23 ಹಾಗೂ 24 ಮಾರ್ಚ್ (ಶನಿವಾರ,ರವಿವಾರ)ಎರಡು ದಿನಗಳ ಹಗಲಿನ ದಾಂಡು ಚೆಂಡಿನ ಸಮರ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ, ಹುಳಿಮಾವಿನ ಇಸ್ಲಾಮಿಯ ಕಾಲೇಜು ಮೈದಾನದಲ್ಲಿ ನಡೆಯಲಿದ್ದು ರಾಷ್ಟ್ರದ ವಿವಿಧೆಡೆಯಿಂದ 16 ತಂಡಗಳು ಈಗಾಗಲೇ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು, ರೋಚಕ ಹಣಾಹಣಿಗಳಿಗೆ ಇಸ್ಲಾಮಿಯಾ ಕಾಲೇಜು ಮೈದಾನ ಸಾಕ್ಷಿಯಾಗಲಿದೆ.
ಪಂದ್ಯಾಕೂಟದ ವಿಜೇತ ತಂಡ 1,50,000 ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ತಂಡ 75,000 ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆಯಲಿದ್ದು,ಸರಣಿ ಶ್ರೇಷ್ಠ ಇನ್ನಿತರ ವೈಯಕ್ತಿಕ ಆಕರ್ಷಕ ಬಹುಮಾನವನ್ನು,ಗಣ್ಯಾತಿಗಣ್ಯರ ಸಮ್ಮುಖದಲ್ಲಿ ನೀಡಿ ಪುರಸ್ಕರಿಸಲಿದ್ದಾರೆ.
ಈ ಪಂದ್ಯಾಕೂಟದ ನೇರ ಪ್ರಸಾರವನ್ನು ಗಿರೀಶ್ ರಾವ್ ನೇತೃತ್ವದ “ಕ್ರಿಕ್ ಸೇ” ಬಿತ್ತರಿಸಲಿದ್ದು,ವೀಕ್ಷಕ ವಿವರಣೆ ವಿಭಾಗದಲ್ಲಿ ರಾಜ್ಯದ ಶ್ರೇಷ್ಠ ವೀಕ್ಷಕ ವಿವರಣೆಕಾರರಾದ ಶಿವನಾರಾಯಣ್ ಐತಾಳ್ ಕೋಟ ಹಾಗೂ ಪ್ರಶಾಂತ್ ಅಂಬಲಪಾಡಿ ಹಾಗೂ ತೀರ್ಪುಗಾರರ ಸ್ಥಾನವನ್ನು ಜೈ ಕರ್ನಾಟಕದ ದಂತಕಥೆ ಸಹೋದರರು ಅನುಭವಿ ಅಂಪಾಯರ್ ಗಳಾದ ನಾಗೇಶ್ ಸಿಂಗ್ ಹಾಗೂ ಭಗವಾನ್ ಸಿಂಗ್ ವಹಿಸಲಿದ್ದಾರೆಂದು ಪಂದ್ಯಾಕೂಟದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
– ಕೋಟ ರಾಮಕೃಷ್ಣ ಆಚಾರ್ಯ