Day: February 21, 2019

  • ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ

    ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ

    ಉಡುಪಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕೆಲವು ಜನರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಆರಂಭಿಸಿದ್ದಾರೆ. ಸಂಸದರು ಕ್ಷೇತ್ರದ ಕಾರ್ಯ ಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ #ShobhaGoBack ಎಂಬ ಅಭಿಯಾನವನ್ನು ಟ್ವಿಟರ್‌ನಲ್ಲಿ ಆರಂಭಿಸಲಾಗಿದೆ. ಕರ್ನಾಟಕದ ಬಿಜೆಪಿ ನಾಯಕರು ಇದಕ್ಕೆ ಯಾವ ಉತ್ತರ ನೀಡುತ್ತಾರೆ ಎಂದು ಕಾದು ನೋಡಬೇಕಿದೆ. ಜೆಡಿಎಸ್ ಸೇರುವ ಕುರಿತು ಸ್ಪಷ್ಟನೆ ಕೊಟ್ಟ ಜಯಪ್ರಕಾಶ ಹೆಗ್ಡೆ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಈ ಬಾರಿಯೂ ಶೋಭಾ…

  • ಶ್ರೀ ವೀರವಿನಾಯಕ ನಾಸಿಕ್ ಕಲಾ ತಂಡ ವತಿಯಿಂದ ಹುತಾತ್ಮ ಯೋಧರಿಗೆ ನಮನ

    ಶ್ರೀ ವೀರವಿನಾಯಕ ನಾಸಿಕ್ ಕಲಾ ತಂಡ ವತಿಯಿಂದ ಹುತಾತ್ಮ ಯೋಧರಿಗೆ ನಮನ

    ಉಡುಪಿ : ಶ್ರೀ ವೀರವಿನಾಯಕ ನಾಸಿಕ್ ಕಲಾ ತಂಡ ವತಿಯಿಂದ  ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಬಾಂಬ್ ಸ್ಫೋಟದಿಂದ ಹುತಾತ್ಮರಾದ ಕೇಂದ್ರೀಯ ಮೀಸಲು ಪಡೆಯ 42 ಜನ ವೀರ ಯೋಧರಿಗೆ ಫೆ 21 ರ ಗುರುವಾರ  ರಾತ್ರಿ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ  ದೀಪಗಳನ್ನು ಬೆಳಗಿ , ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು .

  • ಫೆ.23: ಅಡ್ವೆ ನಂದಿಕೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ

    ಫೆ.23: ಅಡ್ವೆ ನಂದಿಕೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ

    ಕೊಳಚ್ಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯುವ 27ನೇ ವರ್ಷದ ಅಡ್ವೆ ನಂದಿಕೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಫೆ. 23ರಂದು ನಡೆಯಲಿದೆ. ಫೆ. 23ರಂದು ಬೆಳಿಗ್ಗೆ ಕಂಬಳ ಉದ್ಘಾಟನೆಗೊಳ್ಳಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಮಾಜದ ಹಲವು ಗಣ್ಯರು ಭಾಗವಹಿಸಲಿದ್ದಾರೆ.

  • ಕಾರು ಢಿಕ್ಕಿ: ಇಬ್ಬರು ಮಕ್ಕಳ ಸಹಿತ ನಾಲ್ವರು ಸಜೀವ ದಹನ

    ಕಾರು ಢಿಕ್ಕಿ: ಇಬ್ಬರು ಮಕ್ಕಳ ಸಹಿತ ನಾಲ್ವರು ಸಜೀವ ದಹನ

    ಕುಂದಾಪುರ: ಕಾರೊಂದು ಚಾಲಕ ನಿಯಂತ್ರಣ ತಪ್ಪಿ ರಸ್ತೆ ಸಮೀಪದ ಶೌಚಾಲಯ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಎಂಜಿನ್ ಸ್ಪೋಟಗೊಂಡು ಕಾರಿನೊಳಗಿದ್ದ ಕುಂದಾಪುರ ಮೂಲದ ನಾಲ್ವರು ಸಜೀವ ದಹನಗೊಂಡ ಖೇದಕರ ಘಟನೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚನ್ನರಾಯ ಪಟ್ಟಣದ ಉದಯಪುರ ಎಂಬಲ್ಲಿ ಬುಧವಾರ ತಡರಾತ್ರಿ ಘಟಿಸಿದೆ. ಕುಂದಾಪುರ ತಾಲೂಕಿನ ಗುಜ್ಜಾಡಿ ಸಮೀಪದ ನಾಯಕವಾಡಿ ನಿವಾಸಿ ವಿವೇಕ ನಾಯಕ್(39), ಪತ್ನಿ ರೇಷ್ಮಾ, ಮಕ್ಕಳಾದ ವಿನಂತಿ(9) ಹಾಗೂ ವಿಘ್ನೇಶ್(5) ಸಾವನ್ನಪ್ಪಿದ ದುರ್ದೈವಿಗಳು. ವಿವೇಕ್ ನಾಯಕ್ ಮುಂಬೈ ಮೂಲದ ಗಾರ್ಮೆಂಟ್ ಕಂಪೆನಿಯೊಂದರ…

  • ಈಗಿನ ದೇವರ ಪೂಜೆಯಲ್ಲಿ ಬರೇ ತಂತ್ರ, ಮಂತ್ರ ಇಲ್ಲ: ವಿದ್ಯಾಧೀಶ ಸ್ವಾಮೀಜಿ

    ಈಗಿನ ದೇವರ ಪೂಜೆಯಲ್ಲಿ ಬರೇ ತಂತ್ರ, ಮಂತ್ರ ಇಲ್ಲ: ವಿದ್ಯಾಧೀಶ ಸ್ವಾಮೀಜಿ

    ಉಡುಪಿ: ಇಂದು ದೇವರಿಗೆ ಸಲ್ಲಿಸುವ ಪೂಜೆಯಲ್ಲಿ ತಂತ್ರ ಇದೆಯೇ ಹೊರತು ಮಂತ್ರಗಳಿಲ್ಲ. ಮಂತ್ರ ಇಲ್ಲದಿರುವ ಪೂಜೆಯನ್ನು ದೇವರು ಇಷ್ಟ ಪಡುವುದಿಲ್ಲ. ಹಾಗಾಗಿ ಮಂತ್ರಘೋಷ್ಯದೊಂದಿಗೆ ದೇವರಿಗೆ ಪೂಜೆ ಮಾಡಬೇಕು ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು. ವಿದ್ವಾಂಸ ಸೂರ್ಯಪ್ರಕಾಶ ರಾವ್‌ ರಚಿಸಿದ ಶ್ರೌತವಿಷ್ಣುಪೂಜಾವಿಧಿವರ್ಣನಂ (ತಂತ್ರಸಾರರೀತ್ಯಾ) ಗ್ರಂಥವನ್ನು ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಗುರುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಯಾವ ಮಂತ್ರದಲ್ಲಿ ದೋಷವಿಲ್ಲ, ಆ ಮಂತ್ರವನ್ನು ಪಠಣ ಮಾಡಿಕೊಂಡು ಭಗವಂತನನ್ನು ಆರಾಧಿಸಬೇಕು. ಆ ಮಾತ್ರ ಭಗವಂತನ ಅನುಗ್ರಹ ಪಡೆಯಲು…