ಶ್ರೀ ವೀರವಿನಾಯಕ ನಾಸಿಕ್ ಕಲಾ ತಂಡ ವತಿಯಿಂದ ಹುತಾತ್ಮ ಯೋಧರಿಗೆ ನಮನ

ಉಡುಪಿ : ಶ್ರೀ ವೀರವಿನಾಯಕ ನಾಸಿಕ್ ಕಲಾ ತಂಡ ವತಿಯಿಂದ  ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಬಾಂಬ್ ಸ್ಫೋಟದಿಂದ ಹುತಾತ್ಮರಾದ ಕೇಂದ್ರೀಯ ಮೀಸಲು ಪಡೆಯ 42 ಜನ ವೀರ ಯೋಧರಿಗೆ ಫೆ 21 ರ ಗುರುವಾರ  ರಾತ್ರಿ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ  ದೀಪಗಳನ್ನು ಬೆಳಗಿ , ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು .