ಫೆ.14: ಶ್ರೀಕ್ಷೇತ್ರ ಮಂದಾರ್ತಿಯ ಮನ್ಮಹಾರಥೋತ್ಸವ

ಉಡುಪಿ: ಶ್ರೀಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮನ್ಮಹಾರಥೋತ್ಸವ ಇದೇ 13ರಿಂದ 15ರ ವರೆಗೆ ದೇಗುಲದ ಆವರಣದಲ್ಲಿ ನಡೆಯಲಿದೆ. ಫೆ.13ರಂದು ಕುಂಭ ಸಂಕ್ರಮಣ ಮತ್ತು ಕೆಂಡಸೇವೆ, ಫೆ. 14ರಂದು ಮನ್ಮಹಾರಥೋತ್ಸವ ಹಾಗೂ ಫೆ. 15ರಂದು `ದೀಪೋತ್ಸವ’ ಕಾರ್ಯಕ್ರಮ ನೆರವೇರಲಿದೆ. ದೇವಸ್ಥಾನದ ಹಿನ್ನೆಲೆ: ಆವಂತಿಯ ರಾಜ ದೇವವರ್ಮನು ರಾಜ್ಯಭ್ರಷ್ಠನಾಗಿ ವೇಷ ಮರೆಸಿಕೊಂಡು ಸಹ್ಯಾದ್ರಿ ಪರ್ವತದಲ್ಲಿ ತಿರುಗುವಾಗ ಕಾಡ್ಗಿಚ್ಚಿನಲ್ಲಿ ಬೆಂದು ಹೋಗುತ್ತಿರುವ ಐದು ಸರ್ಪಗಳನ್ನು ಉಳಿಸಿ, ಅವುಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಪಶ್ಚಿಮಾಭಿಮುಖವಾಗಿ ಹೋಗುತ್ತಿರುವಾಗ ಆ ಸರ್ಪಗಳು ಒಂದೊಂದಾಗಿ ಹುತ್ತದಲ್ಲಿ […]

ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಸಹೋದರ, ಪ್ರಹ್ಲಾದ್ ಮೋದಿ ಭೇಟಿ

 ಉಡುಪಿ: ಭಾರತವನ್ನು ವಿಶ್ವವೇ ಗುರುತಿಸುವಂತೆ ಮಾಡಿದ್ದು ಎನ್ ಡಿಎ ಸರ್ಕಾರದ ದೊಡ್ಡ ಸಾಧನೆ. ಸ್ವಾತಂತ್ರ್ಯಾನಂತರ ಇದು ಸಾಧ್ಯವಾಗಿರಲಿಲ್ಲ. ಕಳೆದ ಐದು ವರ್ಷಗಳಿಂದ ಎನ್ ಡಿಎ ಸರ್ಕಾರ ಉತ್ತಮ ಕೆಲಸ ಮಾಡಿದೆ. ಅಲ್ಲದೆ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಜನರಿಗೆ ಖುಷಿ ಇದೆ. ಹಾಗಾಗಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಎಂದು ಜನತೆ ಬಯಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಹೇಳಿದರು. ಅವರು ಇಂದು ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆರ್ಥಿಕ ನೀತಿಯನ್ನು […]

ಪೊದಾರ್ ಶಾಲೆಯಲ್ಲಿ ವಾರ್ಷಿಕೋತ್ಸವ

ಉಡುಪಿ: ನಗರದ ಪ್ರತಿಷ್ಠಿತ ಪೊದಾರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ   ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ರಿಜಿಸ್ಟ್ರಾರ್ ನಾರಾಯಣ ಸಬಾಹಿತ್, ಭಾಗವಹಿಸಿ ಮಾತನಾಡಿ, ಮಕ್ಕಳು ಕಲಿಕೆಯನ್ನು ಮಾತ್ರವಲ್ಲ, ಇತರ ಜೀವನ ಕೌಶಲ್ಯಗಳನ್ನು ಕಲಿಯಬೇಕು. ಪೊದಾರ್ ಶಾಲೆಯಲ್ಲಿ ಈ ಜೀವನ ಕೌಶಲ್ಯಗಳನ್ನು ಕಲಿಸುವುದು ಸಂತೋಷದ ವಿಷಯ, ಹೆತ್ತವರು ಮಕ್ಕಳ ಬಗ್ಗೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೆ ಶಾಂತ ರೀತಿಯಿಂದ ಅವರ ಇಚ್ಛೆಗೆ ಅನುಗುಣವಾಗಿ ಬೆಳೆಸಬೇಕು ಎಂದರು. ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್‌ ವಾರ್ಷಿಕ ವರದಿಯನ್ನು […]

ಹಟ್ಟಿಯಂಗಡಿ ಬಾವಿ ಕಾಮಗಾರಿ ಕಳಪೆ: ಸ್ಥಳೀಯರ ಆರೋಪ

ಕುಂದಾಪುರ: ಇಲ್ಲಿನ ಹಟ್ಟಿಯಂಗಡಿ ೧ನೇ ವಾರ್ಡ್ ಸ್ಮಶಾನದಲ್ಲಿ ತೋಡುತ್ತಿರುವ ಬಾವಿಯ ಕಳಪೆ ಕಾಮಗಾರಿಗೆ ಪರಿಸರ ನಿವಾಸಿಗಳು ತಿರುಗಿಬಿದ್ದಿದ್ದಾರೆ. ಸ್ಥಳಕ್ಕೆ ಸಂಬಂಧ ಪಟ್ಟ ಇಲಾಖೆ ಇಂಜಿನಿಯರ್ ಕರೆಸಿ ಕಾಮಗಾರಿ ತೋರಿಸುವ ಮೂಲಕ ಸಾರ್ವಜನಿಕರು ಬದ್ದತೆ ತೋರಿಸಿದ್ದಾರೆ. ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ಹದಿನಾಲ್ಕನೇ ಹಣಕಾಸು ಯೋಜನೆಯಲ್ಲಿ ಗ್ರಾಪಂ ಒಂದನೇ ವಾರ್ಡ್ ಸ್ಮಶಾನ ಮೂಲಭೂತ ಸೌಲಭ್ಯ ಅಭಿವೃದ್ದಿ ಹಿನ್ನೆಲೆಯಲ್ಲಿ ತೋಡುತ್ತಿರುವ ಬಾವಿಯೇ ವಿವಾದಗಳ ಕೇಂದ್ರ ಬಿಂದು. ಕಾಮಗಾರಿಯ ಎಸ್ಟಿಮೇಟ್ ಆಗದೆ ವರ್ಕ್ ಆರ್ಡರ್ ಕೂಡಾ ಇಲ್ಲದೆ ಮುಂಚಿತವಾಗಿಯೇ ಬಾವಿ ಕೆಲಸ ಮಾಡಲಾಗುತ್ತಿದೆ. […]