ಹಟ್ಟಿಯಂಗಡಿ ಬಾವಿ ಕಾಮಗಾರಿ ಕಳಪೆ: ಸ್ಥಳೀಯರ ಆರೋಪ

ಕುಂದಾಪುರ: ಇಲ್ಲಿನ ಹಟ್ಟಿಯಂಗಡಿ ೧ನೇ ವಾರ್ಡ್ ಸ್ಮಶಾನದಲ್ಲಿ ತೋಡುತ್ತಿರುವ ಬಾವಿಯ ಕಳಪೆ ಕಾಮಗಾರಿಗೆ ಪರಿಸರ ನಿವಾಸಿಗಳು ತಿರುಗಿಬಿದ್ದಿದ್ದಾರೆ.

ಸ್ಥಳಕ್ಕೆ ಸಂಬಂಧ ಪಟ್ಟ ಇಲಾಖೆ ಇಂಜಿನಿಯರ್ ಕರೆಸಿ ಕಾಮಗಾರಿ ತೋರಿಸುವ ಮೂಲಕ ಸಾರ್ವಜನಿಕರು ಬದ್ದತೆ ತೋರಿಸಿದ್ದಾರೆ.

ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ಹದಿನಾಲ್ಕನೇ ಹಣಕಾಸು ಯೋಜನೆಯಲ್ಲಿ ಗ್ರಾಪಂ ಒಂದನೇ ವಾರ್ಡ್ ಸ್ಮಶಾನ ಮೂಲಭೂತ ಸೌಲಭ್ಯ ಅಭಿವೃದ್ದಿ ಹಿನ್ನೆಲೆಯಲ್ಲಿ ತೋಡುತ್ತಿರುವ ಬಾವಿಯೇ ವಿವಾದಗಳ ಕೇಂದ್ರ ಬಿಂದು. ಕಾಮಗಾರಿಯ ಎಸ್ಟಿಮೇಟ್ ಆಗದೆ ವರ್ಕ್ ಆರ್ಡರ್ ಕೂಡಾ ಇಲ್ಲದೆ ಮುಂಚಿತವಾಗಿಯೇ ಬಾವಿ ಕೆಲಸ ಮಾಡಲಾಗುತ್ತಿದೆ.

ಬಾವಿ ಒಳಗೆ ನಿರ್ಮಿಸಲಾಗುತ್ತಿರುವ ರಿಂಗ್ ಗಳಿಗೆ ಚೌಕದ ಆಧಾರವಿಲ್ಲದೆ, ಸಣ್ಣ ಸಣ್ಣ ಸರಳು ಬಳಸಿ, ಕೆರೆ ಮಣ್ಣು ಮಿಶ್ರಿತ ಮರಳು ಬಳಸಿ ನಿರ್ಮಿಸಿದ ರಿಂಗ್.

ಸ್ಥಳೀಯರ ಆರೋಪ:

ಬಾವಿಯಲ್ಲಿ ನಿರ್ಮಿಸುತ್ತಿರುವ ಸಿಮೆಂಟ್ ರಿಂಗ್‌ಗೆ ಕೆರೆ ಮಣ್ಣು ಮಿಶ್ರಿತ ಮರಳ ಸೇರಿಸಲಾಗುತ್ತಿದೆ. ಬಾವಿ ಒಳಗೆ ರಿಂಗ್ ಚೌಕ ಇಳಿಸಿ, ನಂತರ ಅದರ ಮೇಲೆ ರಿಂಗ್ ಎರೆಯಬೇಕಿದ್ದರೂ, ಚೌಕ ಇಲ್ಲದೆ ರಿಂಗ್ ನಿರ್ಮಿಸಲಾಗುತ್ತಿದೆ. ರಿಂಗ್ ಸುತ್ತಾ ಬಳಸಿದ ಕಬ್ಬಿಣದ ಸರಳುಗಳು ಕೂಡಾ ಕಡಿಮೆ ಸಾಂಧ್ರತೆ ಸರಳು ಬಳಸಲಾಗುತ್ತದೆ, ಹಟ್ಟಿಯಂಗಡಿ ಗ್ರಾಮ ಒಂದನೇ ವಾರ್ಡ್ ಸ್ಮಶಾನ ಮೂಲಭೂತ ಸೌಲಭ್ಯ ಹಿನ್ನೆಲೆಯಲ್ಲಿ ನಿರ್ಮಿಸುತ್ತಿರುವ ಬಾವಿ ಕಳಪೆ ಎಂದು ಆರೋಪಿಸಿ ಬಾವಿ ಬಳಿ ಜಮಾಯಿಸಿದರು.