ಪೊದಾರ್ ಶಾಲೆಯಲ್ಲಿ ವಾರ್ಷಿಕೋತ್ಸವ

ಉಡುಪಿ: ನಗರದ ಪ್ರತಿಷ್ಠಿತ ಪೊದಾರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ   ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ರಿಜಿಸ್ಟ್ರಾರ್ ನಾರಾಯಣ ಸಬಾಹಿತ್, ಭಾಗವಹಿಸಿ ಮಾತನಾಡಿ, ಮಕ್ಕಳು ಕಲಿಕೆಯನ್ನು ಮಾತ್ರವಲ್ಲ, ಇತರ ಜೀವನ ಕೌಶಲ್ಯಗಳನ್ನು ಕಲಿಯಬೇಕು. ಪೊದಾರ್ ಶಾಲೆಯಲ್ಲಿ ಈ ಜೀವನ ಕೌಶಲ್ಯಗಳನ್ನು ಕಲಿಸುವುದು ಸಂತೋಷದ ವಿಷಯ, ಹೆತ್ತವರು ಮಕ್ಕಳ ಬಗ್ಗೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೆ ಶಾಂತ ರೀತಿಯಿಂದ ಅವರ ಇಚ್ಛೆಗೆ ಅನುಗುಣವಾಗಿ ಬೆಳೆಸಬೇಕು ಎಂದರು.

ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್‌ ವಾರ್ಷಿಕ ವರದಿಯನ್ನು ವಾಚಿಸಿದರು . ರಾಷ್ಟ್ರಮಟ್ಟದ ಒಲಂಪಿಯಾಡ್ ಪರೀಕ್ಷೆಯಲ್ಲಿ ಭಾಗವಹಿಸಿ ವಿಜೇತೆಯಾದ ವಿದ್ಯಾರ್ಥಿನಿ   ಪ್ರಾರ್ಥನಾ.ಪಿ.ರಾವ್‌ಗೆ ೧೦,೦೦೦ ಬಹುಮಾನದ ಚೆಕ್ ವಿತರಿಸಲಾಯಿತು. ಶಾಲಾ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳಾದ ತಬ್ಶೀರ್  ಮತ್ತು ಮೀನಾಕ್ಷಿ ನಿರೂಪಿಸಿದರು. ವಿದ್ಯಾರ್ಥಿನಿಗಳಾದ ಪ್ರತ್ಯಾಶೆಟ್ಟಿ ಸ್ವಾಗತಿಸಿ, ತನು ಶೆಟ್ಟಿ ವಂದಿಸಿದರು.