ಕೋಟ ಜೋಡಿ ಕೊಲೆ ಪ್ರಕರಣ:ಬಿಜೆಪಿ ಮುಖಂಡ ರಾಘವೇಂದ್ರ ಕಾಂಚನ್ ಸೇರಿದಂತೆ ನಾಲ್ವರ ಬಂಧನ

ಕುಂದಾಪುರ:  ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಕೋಟ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜಿ.ಪಂ ಸದಸ್ಯ, ಬಿಜೆಪಿ ಮುಖಂಡ ರಾಘವೇಂದ್ರ ಕಾಂಚನ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ  ತನಿಖಾಧಿಕಾರಿಗಳ ತಂಡ ಕೋಟ ಜಿ.ಪಂ ಸದಸ್ಯ  ರಾಘವೇಂದ್ರ ಕಾಂಚನ್  ( 38) ಅವರನ್ನು ವಿಚಾರಣೆಗಾಗಿ ಬುಧವಾರ ರಾತ್ರಿ ವಶಕ್ಕೆ ಪಡೆದುಕೊಂಡು ಸುದೀರ್ಘ ವಿಚಾರಣೆ ನಡೆಸಿ ಶುಕ್ರವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆಂಬ ಮಾಹಿತಿ ಬಲ್ಲಮೂಲಗಳಿಂದ‌ ತಿಳಿದುಬಂದಿದೆ.  ಇನ್ನುಳಿದ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಹೊಸನಗರದಲ್ಲಿ […]

ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಯಕ್ಷಗಾನ ಕಲಾ ಮಂಡಳಿ ಉದ್ಘಾಟನೆ

ಕಾರ್ಕಳ: ಶ್ರೀ ವೆಂಕಟರಮಣ ಮಹಿಳಾ ಯಕ್ಷಗಾನ ಕಲಾ ಮಂಡಳಿ ಉದ್ಘಾಟನೆ ಫೆ. ೧ರಂದು ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಇರುವ ಶ್ರೀನಿವಾಸ ಕಲಾ ಮಂದಿರದಲ್ಲಿ ಜರುಗಿತು. ಸಮಾರಂಭದ ಉದ್ಘಾಟನೆಯನ್ನು  ಮಾಳ ಸುಮತಿ ಶೆಣೈ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಮಾಳ ದೇವದಾಸ್ ಶೆಣೈ, ಉದ್ಯಮಿ ಜ್ಯೋತಿ ಪೈ ಭಾಗವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಧರ್ಮದರ್ಶಿ ಜಯರಾಮ್ ಪ್ರಭು ಮಾತಾನಾಡಿ, ೧೮ನೇ ಶತಮಾನದಿಂದಲೂ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಯಕ್ಷಗಾನದ ನಂಟು ಇದೆ. ಆ […]