Day: February 8, 2019
-
ಫೆ.9: ಜಪ್ಪಿನಮೊಗರು ‘ಜಯ-ವಿಜಯ’ ಜೋಡುಕರೆ ಕಂಬಳ
ಮಂಗಳೂರು: ಜಪ್ಪಿನಮೊಗರು ಜಯ-ವಿಜಯ ಜೋಡುಕರೆ ಕಂಬಳ ಫೆ. 9ರಂದು ನಡೆಯಲಿದೆ. ಅಂದು ಬೆಳಿಗ್ಗೆ 8.30ಕ್ಕೆ ಕಂಬಳ ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಕಂಬಳ ಉದ್ಘಾಟನೆಗೊಳ್ಳಲಿದೆ.
-
ಕೋಟ ಜೋಡಿ ಕೊಲೆ ಪ್ರಕರಣ: ಜಿ.ಪಂ ಸದಸ್ಯ ಸೇರಿದಂತೆ ಆರು ಮಂದಿ ಅರೆಸ್ಟ್
ಕುಂದಾಪುರ: ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಕೋಟ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರಿ ಸೇರಿದಂತೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಪ್ರಮುಖ ಎಂಟು ಆರೋಪಿಗಳ ಪೈಕಿ ಆರು ಜನರನ್ನು ಬಂಧಿಸಿರುವ ಉಡುಪಿ ಎಸ್‌ಪಿ ಹಾಗೂ ಡಿಸಿಐಬಿ ಪೊಲೀಸರು ಶುಕ್ರವಾರ ಸಂಜೆ ಆರೋಪಿಗಳನ್ನು ಕುಂದಾಪುರ ಹೆಚ್ಚುವರಿ ಜೆಎಮ್‌ಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಧೀಶ ಶ್ರೀಕಾಂತ್ ಹೆಚ್ಚಿನ ವಿಚಾರಣೆಗಾಗಿ ಫೆ.೧೫ರ ತನಕ ಅಂದರೆ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.…
-
ಕೊಟೇಶ್ವರ ಅಪಘಾತ:ಬೈಕ್ ಸವಾರ ಸಾವು
ಕುಂದಾಪುರ : ಇಲ್ಲಿಗೆ ಸಮೀಪದ ಕೊಟೇಶ್ವರ ಗ್ರಾಮದ, ಅರಳುಗುಡ್ಡೆ ರಸ್ತೆಯ ಶ್ರೀ ಹೈಗುಳಿ ಬೊಬ್ಬರ್ಯ ದೈವಸ್ಥಾನದ ತಿರುವಿನ ರಸ್ತೆಯಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್‌ಸವಾರ ಸತೀಶ್‌ಎನ್ನುವವರು ಮೃತ ಪಟ್ಟಿರುವ ಘಟನೆ ವರದಿಯಾಗಿದೆ. ತಮ್ಮ ಕೆಎ೨೦ ಎಕ್ಸ್೧೫೨೮ ಬೈಕ್‌ನ್ನು ಕೊಟೇಶ್ವರ ಕಡೆಯಿಂದ ಹಳೆ ಅಳಿವೆ ಕಡೆಗೆ ಸವಾರಿ ಮಾಡಿಕೊಂಡು ಬಂದು ತಿರುವಿನ ರಸ್ತೆಯಲ್ಲಿ, ನಿರ್ಲಕ್ಷತನದಿಂದ ಬ್ರೇಕ್‌ಹಾಕಿದ ಕಾರಣ ಬೈಕ್‌ಸ್ಕಿಡ್‌ಆಗಿ ವಾಹನ ಸಮೇತ ರಸ್ತೆಯಲ್ಲಿ ಬಿದ್ದು ಅವರ ದೇಹದ ಅಂಗಾಂಗಳಿಗೆ ಪೆಟ್ಟಾಗಿ ಪ್ರಜ್ಞೆ ಕಳೆದುಕೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು…
-
ಆಕ್ಟೀವಾ – ಲಾರಿ ಢಿಕ್ಕಿ:ಕೋಟೇಶ್ವರದ ಮಾರ್ಕೋಡು ಮೂಲದ ಉದ್ಯಮಿ ಸಾವು
ಕುಂದಾಪುರ : ಪುತ್ರಿಯ ನಾಮಕರಣಕ್ಕೆಂದು ಸಿಂಗಾಪುರದಿಂದ ಊರಿಗೆ ಬಂದಿದ್ದ ಕೋಟೇಶ್ವರದ ಮಾರ್ಕೋಡು ಮೂಲದ ಉದ್ಯಮಿ ವಿವೇಕಾನಂದ (42) ಇವರು ಗುರುವಾರ ರಾತ್ರಿ ನಡೆದ ಹೊಂಡಾ ಆಕ್ಟೀವಾ ಹಾಗೂ ಲಾರಿ ಡಿಕ್ಕಿಯಲ್ಲಿ ಮೃತ ಪಟ್ಟಿರುವ ಧಾರುಣ ಘಟನೆ ಸಂಭವಿಸಿದೆ. ಮಾರ್ಕೋಡು ನಿವಾಸಿ ಶಂಕರನಾರಾಯಣ ಎನ್ನುವವರ ಪುತ್ರರಾಗಿರುವ ವಿವೇಕಾನಂದ, ಸಹೋದರನೊಂದಿಗೆ ಸಿಂಗಾಪುರದಲ್ಲಿ ಹೋಟೇಲ್‌ಉದ್ಯಮಿಯಾಗಿದ್ದರು. ಶನಿವಾರ ಮನೆಯಲ್ಲಿ ನಡೆಯಲಿದ್ದ ಪುತ್ರಿಯ ನಾಮಕರಣ ಕಾರ್ಯಕ್ರಮಕ್ಕೆಂದು ಬುಧವಾರ ಊರಿಗೆ ಬಂದಿದ್ದ ಅವರು ಗುರುವಾರ ರಾತ್ರಿ ತಮ್ಮ ಆಕ್ಟೀವಾ ಹೊಂಡಾ ದ್ವಿಚಕ್ರ ವಾಹನದಲ್ಲಿ ಸಮಾರಂಭಕ್ಕೆಂದು ಸಾಮಾನು…
-
ದ್ವಿತೀಯ ಟಿ-20 ಭಾರತಕ್ಕೆ ಭರ್ಜರಿ ಜಯ
ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಗ್ರ್ಯಾಂಡ್ಹೋಮ್ ಅರ್ಧ ಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 158 ರನ್ ಕಲೆ ಹಾಕಿತು. 158 ರನ್ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭದಿಂದಲೇ ಉತ್ತಮ ಬ್ಯಾಟಿಂಗ್ ನಡೆಸಿತು. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ 79 ರನ್ ಗಳ ಭರ್ಜರಿ ಜತೆಯಾಟವಾಡಿದರು. ರೋಹಿತ್ 50, ಧವನ್ 30, ಅನಂತರ ಬಂದ ಹೃಷಭ್ ಪಂತ್ ಅಜೇಯ…