ದ್ವಿತೀಯ ಟಿ-20 ಭಾರತಕ್ಕೆ ಭರ್ಜರಿ ಜಯ

ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ  ನ್ಯೂಜಿಲೆಂಡ್ ತಂಡ ಗ್ರ್ಯಾಂಡ್ಹೋಮ್ ಅರ್ಧ ಶತಕದ ನೆರವಿನಿಂದ 8 ವಿಕೆಟ್‌ ನಷ್ಟಕ್ಕೆ 158 ರನ್ ಕಲೆ ಹಾಕಿತು.
158 ರನ್ಗಳ ಗುರಿ ಬೆನ್ನತ್ತಿದ ಟೀಂ‌ ಇಂಡಿಯಾ ಆರಂಭದಿಂದಲೇ ಉತ್ತಮ ಬ್ಯಾಟಿಂಗ್‌ ನಡೆಸಿತು. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ 79 ರನ್ ಗಳ ಭರ್ಜರಿ ಜತೆಯಾಟವಾಡಿದರು. ರೋಹಿತ್ 50, ಧವನ್ 30, ಅನಂತರ ಬಂದ ಹೃಷಭ್ ಪಂತ್ ಅಜೇಯ 40  ರನ್ ಗಳಿಸುವ ಮೂಲಕ ಗೆಲುವಿ ಗುರಿ ಸುಲಭವಾಗಿಸಿದರು. ಟೀಂ‌ ಇಂಡಿಯಾ ಪರ ವಿಜಯಶಂಕರ್ 14 ಹಾಗೂ ಧೋನಿ ಅಜೇಯ 20 ರನ್ ಗಳಿಸುವ ಮೂಲಕ ಗೆಲವುವಿನ ದಡ ಸೇರಿಸಿದರು. ಅಂತಿಮವಾಗಿ ಟೀಂ ಇಂಡಿಯಾ 18.5 ಒವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು.