ಬೀಜಾಡಿ ಸರ್ವೀಸ್ ರಸ್ತೆ ಕಾಮಗಾರಿ ವಿಳಂಬ: ಜಿಲ್ಲಾಧಿಕಾರಿ ಭೇಟಿ: ಗುತ್ತಿಗೆ ಕಂಪೆನಿ ಅಧಿಕಾರಿಗಳಿಗೆ ಎಚ್ಚರಿಕೆ
ಕುಂದಾಪುರ: ಕಳೆದ ಹಲವು ದಿನಗಳಿಂದ ಬೀಜಾಡಿ ಸರ್ವೀಸ್ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳದ ಗುತ್ತಿಗೆ ಕಂಪೆನಿ ವಿರುದ್ದ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರ ದೂರಿನ ಮೇರೆಗೆ ನವಯುಗ ಕಂಪನಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಬಂದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಬೀಜಾಡಿ ಸರ್ವೀಸ್ ರಸ್ತೆ ಯೂ ಟನ್‌ನಿಂದ ಬೀಜಾಡಿ ವೈ ಜಂಕ್ಷನ್ ತಿರುವು ತನಕ ಕಾಲ್ನಡಿಗೆಯಲ್ಲಿ ತೆರಳಿ ಸ್ವತಃ ಪರಿಶೀಲನೆ ನಡೆಸಿ ಕಂಪನಿ […]
ರಾಜ್ಯದ ಹಾಸ್ಟೆಲ್‍ಗಳ ಸ್ಥಿತಿಗತಿ ಕುರಿತ ವರದಿ ಸಿದ್ದ- ಡಾ. ವನಿತಾ ತೊರವಿ
ಉಡುಪಿ: ರಾಜ್ಯದಲ್ಲಿರುವ ವಿವಿಧ ಇಲಾಖೆಗಳ ವಸತಿ ನಿಲಯಗಳ ಸ್ಥಿತಿಗತಿ ಕುರಿತಂತೆ, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಖುದ್ದು ಭೇಟಿ ನೀಡಿ ವರದಿಯನ್ನು ಸಿದ್ದಪಡಿಸಿದ್ದು, ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ವನಿತಾ ತೊರವಿ ಹೇಳಿದ್ದಾರೆ. ಅವರು ಶನಿವಾರ, ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲೆ, ಮಹಿಳಾ […]
ವಿದೇಶಿ ಪ್ರಜೆಯನ್ನು ಬಿಡದ ಮಂಗನ ಕಾಯಿಲೆ, ಫ್ರಾನ್ಸ್ ಮಹಿಳೆಗೆ ಮಂಗನ ಕಾಯಿಲೆ: ಕೆಎಂಸಿಗೆ ದಾಖಲು
ಉಡುಪಿ: ಮಂಗನ ಕಾಯಿಲೆ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ಜನರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸುತ್ತಿದೆ. ಈ ಮಧ್ಯೆ ಫ್ರಾನ್ಸ್ ದೇಶದ ಮಹಿಳೆಯೊಬ್ಬರಲ್ಲಿ ಕೆಎಫ್ ಡಿ ವೈರಸ್ ಪತ್ತೆಯಾಗಿದ್ದು, ಇಂದು ಮಂಗನ ಕಾಯಿಲೆ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಫ್ರಾನ್ಸ್ ನಿಂದ ಬಂದಿರುವ 33ರ ಹರೆಯದ ಈ ಮಹಿಳೆ ತನ್ನ ಗಂಡನೊಂದಿಗೆ ಉತ್ತರ ಕನ್ನಡ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಧಾರ್ಮಿಕ ಕ್ಷೇತ್ರದ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಬಂದಿದ್ದ ಆಕೆ ಬಳಿಕ ಅಲ್ಲಿಂದ ಉತ್ತರ […]
ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಆರಾಧನೆ ಮತ್ತು ಪುರಂದರ ದಾಸರ ಆರಾಧನೆ
ಉಡುಪಿ: ಶ್ರೀ ಉತ್ತರಾದಿ ಮಠದಲ್ಲಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಆರಾಧನೆ ಮತ್ತು ಪುರಂದರ ದಾಸರ ಆರಾಧನೆಯ ಉದ್ಘಾಟನೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಮಾತನಾಡಿ, 4 ಶತಮಾನಗಳ ಹಿಂದೆ ವಿದ್ಯಾಧೀಶ ತೀರ್ಥರು ಉಡುಪಿಯಲ್ಲಿ ಚಾತುರ್ಮಾಸ್ಯ ವೃತ ಆಚರಿಸಿ ನ್ಯಾಯಸುಧಾ ಗ್ರಂಥಕ್ಕೆ ವಾಕ್ಯಾರ್ಥ ಚಂದ್ರಿಕಾ ಎಂಬ ಟಿಪ್ಪಣಿ ರಚಿಸಿ ವಿದ್ವತ್ ಸಮಾಜಕ್ಕೆ ಶ್ರೇಷ್ಠ ಕೊಡುಗೆಯನ್ನು ನೀಡಿದ್ದಾರೆ ಎಂದರು. ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಸಭಾ ಕಾರ್ಯಕ್ರಮ […]
ಆಹಾರದ ಸೇವನೆಗೂ ಒಂದ್ ಕ್ರಮ ಉಂಟು: ಆಹಾರ ಕ್ರಮದ ಬಗ್ಗೆ ಡಾ.ಹರ್ಷಾ ಕಾಮತ್ ಟಿಪ್ಸ್
ಆಹಾರ ಸೇವನೆಯ ಬಗ್ಗೆ ನಾವು ಈ ಬ್ಯುಸಿ ದಿನಗಳಲ್ಲಿ ಅಷ್ಟೊಂದು ಯೋಚಿಸುವುದೇ ಇಲ್ಲ. ಸಿಕ್ಕಿದನ್ನೆಲ್ಲಾ ತಿಂದು ಬಿಡುತ್ತೇವೆ. ಒಟ್ಟಾರೆ ಆಹಾರ ಹೊಟ್ಟೆಗೆ ಹೋದ್ರೆ ಆಯ್ತು ಎನ್ನುವ ಮನಃಸ್ಥಿತಿ ನಮ್ಮದು. ಆದರೆ ಆಹಾರ ಸೇವನೆಗೂ ಒಂದಷ್ಟು ಕ್ರಮಗಳಿವೆ. ನಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ಯಾವ ಆಹಾರ ತಿನ್ನಬೇಕು, ತಿನ್ನಬಾರದು ಎನ್ನುವ ಬಗ್ಗೆ ಕಾರ್ಕಳದ ಡಾ. ಹರ್ಷಾ ಕಾಮತ್ ಇಲ್ಲಿ ಒಂದಷ್ಟು ಸಲಹೆ ನೀಡಿದ್ದಾರೆ. ————————————————————————————————— ಒಂದೊಂದು ರೀತಿಯ ಆಹಾರಕ್ಕೂ ಒಂದೊಂದು ರೀತಿಯ ಗುಣಗಳಿವೆ. ಒಂದು ಆಹಾರ ನಮ್ಮ ದೇಹ ಪ್ರಕೃತಿಗೆ […]