ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ;ಮನರಂಜನೆ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ ಎಂಟು ಸಿನಿಮಾಗಳು

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತೆ ಪ್ರಾರಂಭ ಆಗುತ್ತಿದೆ. ಈ ಬಾರಿ ಫೆಬ್ರವರಿ 21 ರಿಂದ ಚಿತ್ರೋತ್ಸವ ಪ್ರಾರಂಭ ಆಗುತ್ತಿದೆ. ಮನರಂಜನೆ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ ಎಂಟು ಸಿನಿಮಾಗಳು ಸ್ಥಾನ ಪಡೆದಿವೆ. ಯಶ್ ಅಭಿನಯದ ಕೆಜಿಎಫ್ ಶಿವರಾಜ್ ಕುಮಾರ್ ಅಭಿನಯದ ಟಗರು ಸತೀಶ್ ನೀನಾಸಂ ಅವರ ಅಯೋಗ್ಯ ಶಿವರಾಜ್ ಕುಮಾರ್ ಮತ್ತು ಸುದೀಪ್ ಜೋಡಿಯ ದಿ ವಿಲನ್ ಶರಣ್ ಅಭಿನಯದ ರಾಂಬೋ 2 ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ‘ಗುಳ್ಟು’ ರಾಜು ಕನ್ನಡ ಮೀಡಿಯಂ ಈ ಚಿತ್ರಗಳು […]

ಸಿದ್ಧಗಂಗಾ ಮಠದ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಕ್ತಿಪೂರ್ಣ ಶೃದ್ಧಾಂಜಲಿ ಸಮರ್ಪಣೆ.

ಉಡುಪಿ, ಜ.24: ಶಿವಕ್ಯರಾದ ಸಿದ್ಧಗಂಗಾ ಮಠದ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ, ಮೌನ ಪ್ರಾರ್ಥನೆ, ಪುಷ್ಪ ಸಮರ್ಪಣೆ, ನುಡಿ ನಮನಗಳ ಮೂಲಕ ಶೃದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಅವರ ಆಯೋಜನೆಯಲ್ಲಿ ನಗರದ ಕವಿ ಮುದ್ದಣ ಮಾರ್ಗದಲ್ಲಿರುವ ಶೋಕ ಮಾತಾ ಚರ್ಚಿನ ಆಶ್ರಯದಲ್ಲಿ ಗುರುವಾರ ನಡೆಯಿತು. ಚರ್ಚಿನ ಧರ್ಮ ಗುರುಗಳಾದ  ಅತೀ ವಂದನೀಯ ಫಾ.ವಲೇರಿಯನ್ ಮೆಂಡೊನ್ಸಾ ಅವರು, ಡಾ.ಶಿವಕುಮಾರ ಸ್ವಾಮೀಜಿವರು 111 ವರ್ಷಗಳ ತಮ್ಮ ಜೀವಿತಾವದಿಯಲ್ಲಿ ಕೈಗೊಂಡ ತ್ರಿವಿಧ ದಾಸೋಹಗಳ ಬಗ್ಗೆ ಉಲ್ಲೇಖಿಸಿ ನುಡಿ […]

ಕಲೆ, ಸಂಸ್ಕೃತಿ , ಕ್ರೀಡೆಗಳಲ್ಲಿ ತೊಡಗಿಕೊಳ್ಳುವ, ಆಸ್ವಾದಿಸಲು ಸಮಯ ಇಲ್ಲದಾಗಿದೆ: ಪ್ರಕಾಶ್ಚಂದ್ರ ಶೆಟ್ಟಿ

ಕುಂದಾಪುರ: ಇಂದಿನ ದಿನದಲ್ಲಿ ಜನರು ಒತ್ತಡದ ಜೀವನ ಸಾಗಿಸುತ್ತಿದ್ದಾರೆ. ಬಹುತೇಕರು ಬದುಕಿಗಾಗಿ ಹೋರಾಟ ಮಾಡುತ್ತಿದ್ದರೇ, ಕೆಲವರು ಅಧಿಕಾರ ಮತ್ತು ಸಂಪತ್ತಿನ ಬೆನ್ನತ್ತಿದ್ದಾರೆ. ಈ ನಡುವೆ ಕಲೆ, ಸಂಸ್ಕೃತಿ , ಕ್ರೀಡೆಗಳಲ್ಲಿ ತೊಡಗಿಕೊಳ್ಳುವ, ಆಸ್ವಾದಿಸಲು ಸಮಯ ಇಲ್ಲದಾಗಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಅವರು ಬುಧವಾರ ಬೈಂದೂರು ಶಾರದಾ ವೇದಿಕೆಯಲ್ಲಿ 19ನೇ ವರ್ಷದ ಸಂಭ್ರಮದಲ್ಲಿರುವ ಸುರಭಿ ರಿ. ಬೈಂದೂರು ಇದರ ‘ಸುರಭಿ ಜೈಸಿರಿ’ ಸಂಸ್ಕೃತಿಕ ವರ್ಷಧಾರೆಗೆ ತೆಂಗಿನ ಸಸಿಗೆ ನೀರೆರೆದು […]

ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ದಿನಾಚರಣೆ ಸಮಾರೋಪ ಸಮಾರಂಭ

ಕುಂದಾಪುರ: ವಿದ್ಯಾರ್ಥಿಗಳಲ್ಲಿನ ಕಲೆ-ಸಾಹಿತ್ಯದ ಕುರಿತಾದ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವುದೇ ಪ್ರತಿಭಾ ದಿನಾಚರಣೆಯ ಉದ್ದೇಶ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಸ್ಪರ್ಧೆ- ಬಹುಮಾನಕ್ಕೆ ಸೀಮಿತವಾಗಿರಿಸದೆ, ಕಲೆಯಲ್ಲೇ ಬದುಕನ್ನು ಕಟ್ಟಿಕೊಳ್ಳುವಂತಾಗಬೇಕು ಎಂದು ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಹೇಳಿದರು. ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ದಿನಾಚರಣೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತೀರ್ಪುಗಾರರಾದ ಭಂಡಾರ್‍ಕಾರ್ಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಡಾ. ಯಶವಂತಿ ಕೆ., ನಾವುಂದ ಸರಕಾರಿ ಪದವಿ […]

ಡ್ರೈ ಫ್ರೂಟ್ಸ್ ಲಡ್ಡು ಬಾಯಿಗೆ ಬಿದ್ರೆ, ಆಹಾ ಎಂಥಾ ರುಚಿ !

ಡ್ರೈ ಫ್ರೂಟ್ಸ್ ಲಡ್ಡು ತಿಂದರೆ ಒಮ್ಮೆ ಆ ರುಚಿಯಲ್ಲಿಯೇ ಕಳೆದು ಹೋಗುತ್ತೇವೆ.ಮನೆ ಮಂದಿಗೆಲ್ಲಾ ಇಷ್ಟವಾಗುವ ತಿಂಡಿಯಿದು. ಮಕ್ಕಳಿಗಂತೂ ಮಾಡಿಕೊಟ್ಟರೆ ಈ ಲಡ್ಡು ಅವರ ಹಾಟ್ ಫೆವರೇಟ್ ಆಗೋದು ಗ್ಯಾರಂಟಿ.  ಡ್ರೈ ಫ್ರೂಟ್ಸ್ ಲಡ್ಡು ಮಾಡೋದ್ ಹೇಗೆ ಎನ್ನುವ ಮಾಹಿತಿ ನೀಡಿದ್ದಾರೆ ಉಡುಪಿಯ ಆಶಾ ಅಶ್ವಿನ್ ಅವರು.ನೀವೂ ಮನೆಯಲ್ಲಿ ಜಸ್ಟ್ ಟ್ರೈ ಮಾಡಿ ಲಡ್ಡು ಸವಿದುಬಿಡಿ.   ಡ್ರೈ ಫ್ರೂಟ್ಸ್ ಲಡ್ಡು ಬೇಕಾಗುವ ಸಾಮಗ್ರಿಗಳು ಬಾದಾಮಿ 1/4 ಕಪ್ ಗೋಡಂಬಿ 1/4 ಕಪ್  ಒಣ ದ್ರಾಕ್ಷಿ 1/4 ಕಪ್  ಕರ್ಜೂರ 1/2 […]