ಡ್ರೈ ಫ್ರೂಟ್ಸ್ ಲಡ್ಡು ಬಾಯಿಗೆ ಬಿದ್ರೆ, ಆಹಾ ಎಂಥಾ ರುಚಿ !

ಡ್ರೈ ಫ್ರೂಟ್ಸ್ ಲಡ್ಡು ತಿಂದರೆ ಒಮ್ಮೆ ಆ ರುಚಿಯಲ್ಲಿಯೇ ಕಳೆದು ಹೋಗುತ್ತೇವೆ.ಮನೆ ಮಂದಿಗೆಲ್ಲಾ ಇಷ್ಟವಾಗುವ ತಿಂಡಿಯಿದು. ಮಕ್ಕಳಿಗಂತೂ ಮಾಡಿಕೊಟ್ಟರೆ ಈ ಲಡ್ಡು ಅವರ ಹಾಟ್ ಫೆವರೇಟ್ ಆಗೋದು ಗ್ಯಾರಂಟಿ.  ಡ್ರೈ ಫ್ರೂಟ್ಸ್ ಲಡ್ಡು ಮಾಡೋದ್ ಹೇಗೆ ಎನ್ನುವ ಮಾಹಿತಿ ನೀಡಿದ್ದಾರೆ ಉಡುಪಿಯ ಆಶಾ ಅಶ್ವಿನ್ ಅವರು.ನೀವೂ ಮನೆಯಲ್ಲಿ ಜಸ್ಟ್ ಟ್ರೈ ಮಾಡಿ ಲಡ್ಡು ಸವಿದುಬಿಡಿ.

 

ಡ್ರೈ ಫ್ರೂಟ್ಸ್ ಲಡ್ಡು

ಬೇಕಾಗುವ ಸಾಮಗ್ರಿಗಳು
ಬಾದಾಮಿ 1/4 ಕಪ್
ಗೋಡಂಬಿ 1/4 ಕಪ್ 
ಒಣ ದ್ರಾಕ್ಷಿ 1/4 ಕಪ್ 
ಕರ್ಜೂರ 1/2 ಕಪ್ 
ತುಪ್ಪ 2 ಸ್ಪೂನ್ 
 
ಮಾಡೋದ್ ಹೇಗೆ?
ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿಯನ್ನು ಮಿಕ್ಸಿಯಲ್ಲಿ ಗ್ರೈಂಡ್ ಮಾಡಿಕೊಳ್ಳಿ, ನಂತರ ಖರ್ಜೂರವನ್ನು ಗ್ರೈಂಡ್ ಮಾಡಿಕೊಳ್ಳಿ, ಬಿಸಿಯಾದ ಬಾಣಲೆಗೆ 2 ಸ್ಪೂನ್ ತುಪ್ಪ ಹಾಕಿ ಪುಡಿಮಾಡಿದ ಗೋಡಂಬಿ, ಬಾದಾಮಿ, ದ್ರಾಕ್ಷಿಯನ್ನು ಹಾಕಿ ಹುರಿಯಿರಿ, ನಂತರ ಖರ್ಜೂರವನ್ನು ಹಾಕಿ ಹುರಿದುಕೊಳ್ಳಿ, ಖರ್ಜೂರ ಎಣ್ಣೆ ಬಿಡಲು ಪ್ರಾರಂಭಿಸಿದಾಗ ಸ್ಟಾವ್ ಆಫ್ ಮಾಡಿ, ತಣ್ಣಗಾಗಲು ಬಿಡಿ.
 ತಣ್ಣಗಾದ ನಂತರ ಉಂಡೆ ಕಟ್ಟಿದರೆ ರುಚಿಯಾದ ಆರೋಗ್ಯವಾದ ಲಡ್ಡು ಸವಿಯಲು ಸಿದ್ಧ.
ತಯಾರಿಸಲು ಬೇಕಾಗುವ ಸಮಯ: 10 ನಿಮಿಷ.
 
– ಆಶಾ ಅಶ್ವಿನ್, ಉಡುಪಿ