ಕುಂದಾಪುರ ಮೂಡ್ಲಕಟ್ಟೆ ಸಮೀಪದ ಸಟ್ವಾಡಿಯ ಮನೆಯೊಂದರಲ್ಲಿ ಕಳವು ಪ್ರಕರಣ: ಆರೋಪಿಗಳ ಬಂಧನ

ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಸಮೀಪದ ಸಟ್ವಾಡಿಯ ಮನೆಯೊಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಬಂಧಿಸುವಲ್ಲಿ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಉಪ್ಪುಂದ ಶಾಲೆಬಾಗಿಲು ನಿವಾಸಿಗಳಾದ ಶ್ರೀಧರ(32) ಹಾಗೂ ಪತ್ನಿ ಸ್ವಾತಿ(26) ಬಂಧಿತ ಆರೋಪಿಗಳು. ಸಟ್ವಾಡಿ ನಿವಾಸಿ ದಿನಾಕರ್ ಶೆಟ್ಟಿ ಮತ್ತು ಮನೆಯವರು ಭಾನುವಾರ ರಾತ್ರಿ ಕೋಟೇಶ್ವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ವೇಳೆಯಲ್ಲಿ ಕಳ್ಳತನ ನಡೆದಿತ್ತು. ಮನೆಯ ಎದುರಿನ ಬಾಗಿಲು ಒಡೆದು ಒಳಪ್ರವೇಶಿಸಿದ ಕಳ್ಳರು ಕವಾಟಿನಲ್ಲಿದ್ದ 1 ವಜ್ರದ ಕರಿಮಣಿ […]

ಪದವೀಧರ ಯುವಕನ ಹೈನ್ಯೋದ್ಯಮ, ಬದುಕೀಗ ಘಮ ಘಮ: ಉಡುಪಿಯ ಯುವ ಕೃಷಿಕನ ಸಕ್ಸಸ್ ಸ್ಟೋರಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ  ಪದವಿ ಮುಗಿದ ಬಳಿಕ ಯುವಕರು  ಉದ್ಯೋಗ ಅರಸಿ ಮಹಾನಗರಿಯತ್ತ ಮುಖ ಮಾಡೋದು ಸಾಮಾನ್ಯ ,ಆದರೆ ಇಲ್ಲೊಬ್ಬ ಯುವಕ, ಹೈನುಗಾರಿಕೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಕನಸಿನಿಂದ ಹಸುಗಳ ಆರೈಕೆಯಲ್ಲಿಯೇ ತೊಡಗಿಕೊಂಡು ಬದುಕಿಗೊಂದು ದಾರಿ ಕಂಡುಕೊಂಡಿದ್ದಾರೆ. ಈ ಯುವಕನ ಕತೆ ಕೇಳಿ: ಹೈನುಗಾರಿಕೆಯೇ ನನ್ನ ಬದುಕಿಗೆ ದಾರಿಯಾಗಬಲ್ಲದು  ಎನ್ನುವ ಸತ್ಯ ಅರಿವಾಗುತ್ತಿದ್ದಂತೆಯೇ    ಈ ಯುವಕ ಹೈನುಗಾರಿಕೆ ಶುರುಮಾಡಿಯೇ ಬಿಡುತ್ತಾರೆ. ಹೈನುಗಾರಿಕೆ ಕನಸನ್ನು ನನಸು ಮಾಡಿದ ಯುವಕನೇ ಉಡುಪಿ ಜಿಲ್ಲೆಯ ಬಾರಾಳಿ  ಗ್ರಾಮದ ಪ್ರತೀಶ್ ಶೆಟ್ಟಿ . ಕೆಲಸದಲ್ಲಿ […]

ಮಂಗನ ಕಾಯಿಲೆ ಭೀತಿ ಇಂದ್ರಾಳಿ ಮುಖ್ಯಪ್ರಾಣನಲ್ಲಿ ವಿಶೇಷ ಪ್ರಾರ್ಥನೆ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಮಂಗನಕಾಯಿಲೆ ಭೀತಿ ಆವರಿಸಿದ ಹಿನ್ನಲೆಯಲ್ಲಿ ಜನರಿಗೆ ಹಾಗೂ ಮಂಗಗಳಿಗೆ   ರಕ್ಷಣೆ ನೀಡುವಂತೆ ಕೋರಿ ಉಡುಪಿ ಜಿಲ್ಲಾ ನಾಗರೀಕ ಸಮಿತಿ ಮುಖ್ಯಪ್ರಾಣನ ಮೊರೆ ಹೋಗಿದೆ. ಇಂದ್ರಾಳಿಯ ಪ್ರಸಿದ್ದ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಇಂದು ಮಂಗನ ಕಾಯಿಲೆ ಯಾರಿಗೂ ಬಾಧಿಸದಿರಲಿ ಹಾಗೂ ಕಾಯಿಲೆ ದೂರವಾಗುವಂತೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು , ಬಡಗಬೆಟ್ಟು ಕ್ರೆಡಿಟ್ ಕೋ_ ಅಪರೇಟಿವ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ನಗರಸಭಾ […]

ಬಣ್ಣದ ಜಗತ್ತಿಗೆ ಜೀವ ಕೊಟ್ಟ ಹಿರಿಯಡ್ಕ ಯುವಕ: ಚಿತ್ರಕಲೆಯೇ ಇವರಿಗೆ ಪೂರ್ತಿಯ ಸೆಲೆ

ತುಳುನಾಡಿನ ಮಣ್ಣಿನ ಕಣ ಕಣಗಳಲ್ಲೂ ಜೀವವಿದೆ, ಸೆಳೆತವಿದೆ. ಇಲ್ಲಿ ಎಲೆ ಮರೆಯ ಕಾಯಿಯಂತೆ ತಮ್ಮ ಸಾಹಸ ಮಾಡುತ್ತಿರುವ ವ್ಯಕ್ತಿಗಳೂ ಇದ್ದಾರೆ. ಇಲ್ಲೊಬ್ಬರಿದ್ದಾರೆ ನೋಡಿ, ಅವರ ಹೆಸರು ಗಣೇಶ್ ಪ್ರಭು .ಹುಟ್ಟಿ ಬೆಳೆದದ್ದು ಉಡುಪಿ ಜಿಲ್ಲೆಯ ಹಿರಿಯಡ್ಕದ ಮೈಕಳ ಮನೆತನದಲ್ಲಿ, ವಿಧ್ಯಾರ್ಥಿ ಜೀವನದಿಂದಲೇ ಪೈಂಟಿಂಗ್, ಡ್ರಾಯಿಂಗ್ ಗಳಲ್ಲಿ ಅಪಾರ ಆಸಕ್ತಿ .ಅನೇಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿ ನೂರಾರು ಪ್ರಶಸ್ತಿ ಗಳನ್ನು ಪಡೆದ ಸಾಧಕ. ಅವರ ಯಶೋಗಾಥೆ ಇಲ್ಲಿದೆ ನೋಡಿ. ಬದುಕಲ್ಲಿ ಮಂದಹಾಸ ಮೂಡಿಸಿದ ಚಿತ್ರ ಹವ್ಯಾಸ ಕಾಲೇಜು ಜೀವನದಲ್ಲಿಯೇ […]

ಕೋಟೆಯ ಊರಲ್ಲಿ ಕೋಟಿ ನೆನಪುಗಳ ಗತ ವೈಭವ : ಜ.25 ಬಾರಕೂರಿನಲ್ಲಿ ಆಳುಪೋತ್ಸವ

ಉಡುಪಿ ಜಿಲ್ಲೆಯ ಸೀತಾನದಿಯು ಹಾದು ಹೋಗುವ ಈ ಊರು ಬಾರಕೂರು. ಐತಿಹಾಸಿಕ ಪುರಾತನ ದೇವಾಲಯಗಳ, ಕೋಟೆ, ಅರಮನೆಗಳ ಬೀಡು ಎಂದು ಪ್ರಸಿದ್ದಿ ಪಡೆದಿದೆ  . ಅಳುಪಾ ರಾಜರ ರಾಜಧಾನಿ ಆಗಿದ್ದ ಬಾರಕೂರು, ತುಳುನಾಡಿನ ರಾಜಧಾನಿ ಎಂದೂ ಕರೆಯಲಾಗುತ್ತದೆ. ಪುರಾತತ್ವ ಇಲಾಖೆಯ ಸಂಶೋಧನಾ ಕಾರ್ಯದ ವೇಳೆ ಪತ್ತೆಯಾದ ತುಳು ಭಾಷೆಯ ಶಾಸನಗಳೇ ಇದಕ್ಕೆ ಬಲವಾದ ಸಾಕ್ಷಿ. ವಿಜಯನಗರದ ಅರಸರು ಹಾಗೂ ಅಳುಪಾ ಅರಸರು ನಿರ್ಮಿಸಿದ ಕೋಟೆಗಳ ಅವಶೇಷಗಳನ್ನು ಇಲ್ಲಿ ಕಾಣಬಹುದು. ಅತ್ಯಾಧುನಿಕ ತಂತ್ರಜ್ಞಾನ ಬಳಸದೇ ಅಂದಿನ ಕಾಲದ ಕಲೆ ಮತ್ತು […]