ಜ.16 ಅಂಜಾರು ಶ್ರೀ ದೇವಿಯ ವಾರ್ಷಿಕ ಮಹೋತ್ಸವ

ಹಿರಿಯಡ್ಕ: ಅಂಜಾರು ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜನವರಿ 16ರಂದು ಶ್ರೀ ದೇವಿಯ ವಾರ್ಷಿಕ ಮಹೋತ್ಸವ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆಯು ಶ್ರೀ ರಾಜರಾಜೇಶ್ವರಿ ಅಮ್ಮನ ಸನ್ನಿಧಾನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಜ.14ರಿಂದ 23ರ ವರೆಗೆ ಆಗಲುಸೇವೆ, ನೇಮೋತ್ಸವ

ಉಡುಪಿ: ಶ್ರೀ ಬ್ರಹ್ಮ ಬೈದರ್ಕಳ ಗರಡಿ 80ನೇ ಬಡಗಬೆಟ್ಟು,ಪರ್ಕಳ ಇದರ ಆಗಲೂ ಸೇವೆ ಹಾಗೂ ನೇಮೋತ್ಸವ ಜ. 14ರಂದು ಪ್ರಾರಂಭಗೊಂಡಿದ್ದು, ಜ. 23ರ ವರೆಗೆ ನಡೆಯಲಿದೆ. ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಹೂ ಸಿಂಗಾರ, ಹಸಿರು ವಾಣಿ ಗರಡಿಗೆ ಸಮರ್ಪಣೆ, 9 ಗಂಟೆಗೆ ಗಣಹೋಮ, ಸಂಜೆ 7ಗಂಟೆಗೆ ಅನ್ನ ನೈವೇದ್ಯದ ಆಗಲು ಸೇವೆ. ಶನಿವಾರ ಸಂಜೆ 6 ಗಂಟೆಗೆ ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ, ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಆದಿತ್ಯವಾರ ಬೆಳಿಗ್ಗೆ 9ರಿಂದ ಮಾಯಂದಾಲೆ ಕೋಲ […]

ಜ.16 ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ ಬ್ರಹ್ಮರಥೋತ್ಸವ

ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಬ್ರಹ್ಮರಥೋತ್ಸವ ಕಾರ್ಯಕ್ರಮ ಜ.16ರಂದು ಬೆಳಗ್ಗೆ ಉತ್ಸವಾದಿ ಕಾರ್ಯಕ್ರಮಗಳು, ಬೆಳಗ್ಗೆ 10.20ಕ್ಕೆ ರಥಾರೋಹಣ, ಅಪರಾಹ್ನ ಅನ್ನಸಂತರ್ಪಣೆ, ಸಂಜೆ 6.30ಕ್ಕೆ ರಥಾವರೋಹಣ ನಡೆಯಲಿದೆ. ಜ.17ರಂದು ಬೆಳಗ್ಗೆ 8ಕ್ಕೆ ಪ್ರಬೋಧೋತ್ಸವ, ಸಂಜೆ ಓಕುಳಿ ಸೇವೆ, ರಜತ ಪಲ್ಲಕ್ಕಿ ಉತ್ಸವ, ಕೋಟ ಹಂದೆ ಮಹಾಗಣಪತಿ ದೇವಸ್ಥಾನದಲ್ಲಿ ಅವಭೃಥ ಸ್ನಾನ, ವಸಂತಾರಾಧನೆ, ಪುರಮೆರವಣಿಗೆ, ಜ.18ರಂದು ಸಂಪ್ರೋಕ್ಷಣೆ ನಡೆಯಲಿದೆ ಎಂದು ದೇಗುಲದ ಮುಖ್ಯಸ್ಥರು ತಿಳಿಸಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಕರ ಸಂಕ್ರಮಣ ಸಂಭ್ರಮ

ಉಡುಪಿ: ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ‌ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸೋಮವಾರ ಮಕರ ಸಂಕ್ರಾಂತಿಯಂದು ಬ್ರಹ್ಮರಥ ಸಹಿತ ಮೂರು ತೇರುಗಳ ಉತ್ಸವ ವೈಭವದಿಂದ ಜರಗಿತು. ಪೇಜಾವರ ಹಿರಿಯ, ಕಿರಿಯ, ಕೃಷ್ಣಾಪುರ, ಅದಮಾರು ಹಿರಿಯ, ಕಿರಿಯ, ಕಾಣಿಯೂರು, ಸೋದೆ, ಭಂಡಾರಕೇರಿ, ಸುಬ್ರಹ್ಮಣ್ಯ, ಬನ್ನಂಜೆ ಮಠದ ಸ್ವಾಮೀಜಿಯವರು ಪಾಲ್ಗೊಂಡಿದ್ದರು.

ಶಬರಿಮಲೆ ಪಾವಿತ್ರ್ಯತೆ ಕಾಪಾಡುವಂತೆ ಆಗ್ರಹಿಸಿ: ಸಾಲಿಗ್ರಾಮದಿಂದ -ಕೋಟದ ವರೆಗೆ ಅಯ್ಯಪ್ಪ ಜ್ಯೋತಿ ಪ್ರಜ್ವಲನೆ

ಕೋಟ: ವಿವಿಧ ಸಂಘಸಂಸ್ಥೆಗಳು ಹಾಗೂ ಅಯ್ಯಪ್ಪ ಭಕ್ತರ ನೇತೃತ್ವದಲ್ಲಿ ನ.14ರಂದು ಶಬರಿಮಲೆ ಯಲ್ಲಿ ಮಕರಜ್ಯೋತಿ ಬೆಳಗುವ ಸಮಯಕ್ಕೆ ಸರಿಯಾಗಿ ಕೋಟ ಅಮೃತೇಶ್ವರಿ ದೇವಸ್ಥಾನದಿಂದ ಸಾಲಿಗ್ರಾಮ ಆಂಜನೇಯ ದೇವಸ್ಥಾನದ ವರೆಗೆ  ಅಯ್ಯಪ್ಪ ಜ್ಯೋತಿ ಪ್ರಜ್ವಲನೆ ನಡೆಯಿತು. ಮಹಿಳೆಯರು, ಮಕ್ಕಳು, ಪುರುಷರು ಸೇರಿದಂತೆ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು .ಈ ಸಂದರ್ಭ ರಸ್ತೆಯಲ್ಲಿ ಸುಮಾರು 3.ಕಿ.ಮೀ ದೂರ ಅಯ್ಯಪ್ಪ ಸ್ವಾಮಿಯ ನಾಮಪಠಿಸುತ್ತ ಕೈಯಲ್ಲಿ ಕರ್ಪೂರದ ದೀಪವನ್ನು ಹಿಡಿದು  ಭಕ್ತರು ವಿಶೇಷ ಮಾನವ ಸರಪಳಿ ರಚಿಸಿದರು. ಹಿಂದೂ ದೇಗುಲಗಳ ಮೇಲೆ ಸಮಾನತೆ ಹೆಸರಲ್ಲಿ […]