ಜ.14ರಿಂದ 23ರ ವರೆಗೆ ಆಗಲುಸೇವೆ, ನೇಮೋತ್ಸವ

ಉಡುಪಿ: ಶ್ರೀ ಬ್ರಹ್ಮ ಬೈದರ್ಕಳ ಗರಡಿ 80ನೇ ಬಡಗಬೆಟ್ಟು,ಪರ್ಕಳ ಇದರ ಆಗಲೂ ಸೇವೆ ಹಾಗೂ ನೇಮೋತ್ಸವ ಜ. 14ರಂದು ಪ್ರಾರಂಭಗೊಂಡಿದ್ದು, ಜ. 23ರ ವರೆಗೆ ನಡೆಯಲಿದೆ.
ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಹೂ ಸಿಂಗಾರ, ಹಸಿರು ವಾಣಿ ಗರಡಿಗೆ ಸಮರ್ಪಣೆ, 9 ಗಂಟೆಗೆ ಗಣಹೋಮ, ಸಂಜೆ 7ಗಂಟೆಗೆ ಅನ್ನ ನೈವೇದ್ಯದ ಆಗಲು ಸೇವೆ. ಶನಿವಾರ ಸಂಜೆ 6 ಗಂಟೆಗೆ ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ, ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಆದಿತ್ಯವಾರ ಬೆಳಿಗ್ಗೆ 9ರಿಂದ ಮಾಯಂದಾಲೆ ಕೋಲ ಹಾಗೂ ಬುಧವಾರ ರಾತ್ರಿ 8 ಗಂಟೆಗೆ ಮಾರಿ ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.