ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಮೀನುಗಾರರ ನಾಪತ್ತೆಯಾಗಿ ಒಂದು ತಿಂಗಳು ಕಳೆದರೂ ಈವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯ ನೌಕಪಡೆ ಸೋನಾರ್ ತಂತ್ರಜ್ಞಾನದ ಮೂಲಕ ಶೋಧಕಾರ್ಯಾಚರಣೆ ನಡೆಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ಸೋನಾರ್ ತಂತ್ರಜ್ಞಾನ
ಸೋನಾರ್(ಎಸ್‌ಒಎನ್‌ಎಆರ್-ಸೌಂಡ್ ನೇವಿಗೇಶನ್ ಆಂಡ್ ರೇಂಜಿಂಗ್) ಎಂಬ ತಂತ್ರಜ್ಞಾನವು ನೀರಿನ ಆಳದಲ್ಲಿ ವಸ್ತುಗಳನ್ನು ಪತ್ತೆ ಹಚ್ಚುವುದು ಹಾಗೂ ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ. ನೀರಿನೊಳಗೆ ಹೆಚ್ಚು ಪರಿಣಾಮಕಾರಿಯಾಗಿ ಈ ತಂತ್ರಜ್ಞಾನ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ನೌಕಪಡೆ ಈ ತಂತ್ರಜ್ಞಾನದ ಮೊರೆ ಹೋಗಿದೆ ಎನ್ನಲಾಗಿದೆ. ನೌಕಪಡೆಯ ಹಡಗು ತ್ತು ಸಬ್‌ಮರಿನ್‌ಗಳಲ್ಲಿ ಈ ತಂತ್ರಜ್ಞಾನ ಅಳವಡಿಕೆಯಾಗಿರುತ್ತದೆ. ಸಾಗರದಾಳದಲ್ಲಿರುವ ವಸ್ತುಗಳಿಂದ ಹೊರ ಸೂಸುವ ಸಣ್ಣ ಸಣ್ಣ ಪ್ರಮಾಣದ ಶಬ್ಧ ತರಂಗಗಳನ್ನು ಗುರುತಿಸಿ ಡ್ರಾಫ್ಟ್‌ನಲ್ಲಿ ದಿಕ್ಕು ಮತ್ತು ಸ್ಥಳದ ನಕ್ಷೆ ತೋರಿಸುವಲ್ಲಿ ಈ ತಂತ್ರಜ್ಞಾನ ಹೆಚ್ಚು ಪರಿಣಾಮಕಾರಿಯಾಗಿದೆ. ಮುಳುಗಿದ ಹಡಗುಗಳ ಪತ್ತೆಗೆ ಈ ತಂತ್ರಜ್ಞಾನ ಬಹಳ ಸಹಕಾರಿಯಾಗಿದೆ ಎನ್ನುತ್ತಾರೆ ತಂತ್ರಜ್ಞರು.