ಹಿರ್ಗಾನದಲ್ಲಿ ಮತ್ತೊಂದು ಮಂಗ ನಿಗೂಢ ಸಾವು, ಹೆಚ್ಚಿದ ಮಂಗನ ಕಾಯಿಲೆ ಭೀತಿ
ಕುಂದಾಪುರ: ಜಿಲ್ಲೆಯ ಗಡಿಭಾಗ ಬೈಂದೂರು ಸಮೀಪದ ಶಿರೂರಿನಲ್ಲಿ ೨ ಮಂಗಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ಮಂಗಗಳ ನಿಗೂಢ ಸಾವಿನ ಸುದ್ದಿಯ ಬೆನ್ನಲ್ಲೇ ಇದೀಗ ೨ ಮಂಗಗಳು ನಿಗೂಢವಾಗಿ ಮೃತಪಟ್ಟಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಮರಣೋತ್ತರ ಪರೀಕ್ಷೆಗಾಗಿ ಮಾದರಿ: ಶಿರೂರಿನಲ್ಲಿ ಸಾವನ್ನಪ್ಪಿರುವ ಒಂದು ಮಂಗ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇನ್ನೊಂದು ಮಂಗ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಈಗಾಗಲೆ ಹೊಸಂಗಡಿಯಲ್ಲಿ ೨, ಸಿದ್ಧಾಪುರದಲ್ಲಿ ೧, ಕಾರ್ಕಳ ಹಿರ್ಗಾನದಲ್ಲಿ ೧ ಮಂಗ ಮೃತಪಟ್ಟಿದ್ದು ಸಾವಿನ ಸಂಖ್ಯೆ ಒಟ್ಟು […]
ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಜೇಸುದಾಸ್ ಹುಟ್ಟುಹಬ್ಬ ಆಚರಣೆ :ಭಕ್ತಿ-ರಾಗದಲ್ಲಿ ಮುಳುಗೆದ್ದ ಜೇಸುದಾಸ್ ಅಭಿಮಾನಿಗಳು
ಕುಂದಾಪುರ: ಶಾಸ್ತ್ರೀಯ ಸಂಗೀತಗಾರ, ದಕ್ಷಿಣ ಭಾರತದ ಸುಪ್ರಸಿದ್ದ ಗಾಯಕ, ಪದ್ಮಭೂಷಣ ಡಾ. ಕೆ.ಜೆ ಯೇಸುದಾಸ್ ಗುರುವಾರ ತಮ್ಮ ೭೯ನೇ ಹುಟ್ಟುಹಬ್ಬವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ದೇವಿಗೆ ಚಂಡಿಕಾ ಹೋಮ ನೆರವೇರಿಸುವುದರ ಮೂಲಕ ಆಚರಿಸಿಕೊಂಡರು. ಬುಧವಾರ ಸಂಜೆ ತಮ್ಮ ಕುಟುಂಬಿಕರೊಂದಿಗೆ ಕೊಲ್ಲೂರಿಗೆ ಆಗಮಿಸಿದ ಅವರು ಗುರುವಾರ ಬೆಳಗ್ಗೆ ದೇವರ ದರ್ಶನ ಪಡೆದರು. ವರ್ಷಂಪ್ರತಿ ಕೊಲ್ಲೂರಿನಲ್ಲಿ ಜೇಸುದಾಸ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ಹಿನ್ನೆಲೆಯಲ್ಲಿ ಕೇರಳ, ಕರ್ನಾಟಕ, ಮಹರಾಷ್ಟ್ರ ಹಾಗೂ ಇತರ ರಾಜ್ಯಗಳ ಜೇಸುದಾಸ್ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದು, […]