“ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ” ಕೇಂದ್ರ-ರಾಜ್ಯ ಸರಕಾರಕ್ಕೆ ಚಾಟಿ ಬೀಸಿದ ಪೇಜಾವರ ಶ್ರೀ
ಉಡುಪಿ: ಮೀನುಗಾರರಿಗೆ ರಕ್ಷಣೆ ನೀಡುವುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆದ್ಯ ಕರ್ತವ್ಯ. ಆದ್ದರಿಂದ ಕಳೆದ 19 ದಿನಗಳಿಂದ ಕಣ್ಮರೆಯಾಗಿರುವ ಮೀನುಗಾರರ ರಕ್ಷಣೆಗೆ ಸರಕಾರ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಗ್ರಹ ಪಡಿಸಿದರು. ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಹಾಗೂ ಏಳು ಮಂದಿ ಮೀನುಗಾರರ ಕಣ್ಮರೆಯಾಗಿ 19 ದಿನಗಳು ಕಳೆದರೂ ಇನ್ನು ಪತ್ತೆಯಾಗದ ಹಿನ್ನೆಲೆಯಲ್ಲಿ ಶ್ರೀಪಾದರು ಇಂದು ಮಲ್ಪೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ […]
“ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ” ಮೀನುಗಾರರು ಮರಳಿ ಬರಲೆಂದು ನಾಗರಿಕ ಸಮಿತಿಯಿಂದ ಪ್ರಾರ್ಥನೆ
ಉಡುಪಿ: ಮಲ್ಪೆಯಿಂದ ಮಿನುಗಾರಿಕೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಹಾಗೂ ಅದರಲ್ಲಿರುವ 7 ಜನ ಮಿನುಗಾರರು ಕಾಣೆಯಾದ ಘಟನೆ ನಡೆದು 19 ದಿನಗಳು ಕಳೆದು ಹೋಗಿದೆ. ಸಂಬಂಧ ಪಟ್ಟ ಇಲಾಖೆಗಳು ಪತ್ತೆ ಕಾರ್ಯ ನಡೆಸುತ್ತಿದ್ದರೂ ಇದುವರೆಗೂ ಬೋಟು ಹಾಗೂ ಮಿನುಗಾರರ ಇರುವಿಕೆ ತಿಳಿದು ಬಂದಿಲ್ಲದ ಕಾರಣ ಮೀನುಗಾರರ ಕುಟುಂಬ ವರ್ಗದವರು ಆತಂಕದಲ್ಲಿದ್ದಾರೆ. ಆದಷ್ಟು ಬೇಗ ಮೀನುಗಾರರು ಬೋಟು ಸುರಕ್ಷಿತರಾಗಿ ಪತ್ತೆಯಾಗಲಿ ಎಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಪದಾಧಿಕಾರಿಗಳು, ಅಭಿಮಾನಿಗಳು ಉಡುಪಿ ಸೋದೆ ಮಠದ ಭೂತರಾಜರ ಗುಡಿಯಲ್ಲಿ […]
ಶಬರಿಮಲೆ ದೇಗುಲಕ್ಕೆ ಮಹಿಳಾ ಪ್ರವೇಶ ವಿರೋಧಿಸಿ ಪ್ರತಿಭಟನೆ
ಉಡುಪಿ: ಶಬರಿಮಲೆ ದೇಗುಲಕ್ಕೆ ಇಬ್ಬರು ಮಹಿಳೆಯರನ್ನು ಪ್ರವೇಶಿಸಲು ಸಹಕರಿಸಿ ಹಿಂದು ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಕೇರಳ ರಾಜ್ಯ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಶಬರಿಮಲೆ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಬಿಜೆಪಿ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ನಗರದ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಬಳಿ ಗುರುವಾರ ಪ್ರತಿಭಟನೆ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಯ್ಯಪ್ಪ ಭಕ್ತಾದಿಗಳು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕೇರಳ ಸರಕಾರ ಇಬ್ಬರು ಮಹಿಳೆಯರಿಗೆ ಶಬರಿಮಲೆ ದೇಗುಲಕ್ಕೆ ಪ್ರವೇಶಿಸಲು ಅವಕಾಶಕೊಟ್ಟಿರುವುದನ್ನು […]
ಬಿಗ್ ಬಾಸ್ ನಲ್ಲಿ ನಮ್ ಕುಂದಾಪುರ ಹುಡ್ಗ, ಧನ್ ರಾಜ್ ಸಖತ್ ಮಿಂಚಿಂಗ್
ನೀವೆಲ್ಲ ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಅನ್ನು ಪ್ರೀತಿಯಿಂದ ಹಗ್ ಮಾಡುವ ಬಿಗ್ ಬಾಸ್ ಅಭಿಮಾನಿಗಳಾಗಿರಬಹುದು. ಅಂದ ಹಾಗೆ ನೀವು ಖುಷಿಪಟ್ಟು ನೋಡುತ್ತಿರುವ ಬಿಗ್ ಬಾಸ್ ನಲ್ಲಿ ನಮ್ಮ ಕರಾವಳಿಯ ಯುವ ಸ್ಪರ್ಧಾಳು ಕೂಡ ಮಿಂಚುತ್ತಿದ್ದಾರೆ ಎನ್ನುವುದು ನಿಮ್ಮ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಹೌದು ಬಿಗ್ ಬಾಸ್ ನಲ್ಲಿ ಮಿಂಚುತ್ತಿರುವ ಧನರಾಜ್ ಸಿಎಂ, ಕುಂದಾಪುರದ ಅಪ್ಪಟ ಪ್ರತಿಭೆ,ಸದ್ಯ ಬೆಂಗಳೂರಿನಲ್ಲೇ ನೆಲೆಸಿರುವ ಧನರಾಜ್, ಅವಕಾಶಕ್ಕಾಗಿ ಹಾತೊರೆಯುತ್ತಿರುವ ನಟ, ವಾಯ್ಸ್ ಓವರ್ ಆರ್ಟಿಸ್ಟ್ ಹಾಗೂ ಡಬ್ಬಿಂಗ್ […]
ಕರಾವಳಿಯ ಈ ಯುವಕನ ಸ್ವರ ಕೇಳಿದ್ರೆ ಕಿವಿ ಇಂಪಾಗುತ್ತೆ : ಮೈ ಮನದಲ್ಲೂ ಹರಿಯುವ ರಜತ್ ಮಯ್ಯನ ಗಾನಸುಧೆ
ಈತನ ಕಂಠಸಿರಿ ಕೇಳಿದರೆ ಮೈ ಮನಸ್ಸು ತುಂಬಿಕೊಳ್ಳುತ್ತದೆ, ಇವನ ಹಾಡು ಕೇಳುತ್ತಲೇ ಹೋದಂತೆಲ್ಲ ಕಿವಿಯಲ್ಲಿ ಅದೆಂತದ್ದೋ ರೋಮಾಂಚನ, ನೀವೂ ಝಿ ಕನ್ನಡ ವಾಹಿನಿಯ ಸಂಗೀತ ಕಾರ್ಯಕ್ರಮದಲ್ಲಿ ಈತನ ಸ್ವರ ಕೇಳಿ ಆನಂದದ ಪಟ್ಟಿರುತ್ತೀರಿ, ಅಬ್ಬಾ, ಎಂಥಾ ಹಾಡ್ತಾನೆ ಈ ಹುಡುಗ ಅಂತ ಹುಬ್ಬೇರಿಸಿರುತ್ತೀರಿ. ಸುಮಧುರ ಗಾಯಕ, ಕರಾವಳಿಯ ರಜತ್ ಮಯ್ಯ ಅನ್ನೋ ಯುವಕನ ಬಗ್ಗೆಯೇ ನಾವ್ ಹೇಳ್ತಿರೋದು. “ರಜತ” ಗಾನ ಮೊಳಗುತಿದೆ: ರಜತ್ ಮಯ್ಯ ಬೆಳ್ತಂಗಡಿ ತಾಲೂಕಿನ ಉಜಿರೆಯವರು. ಉಜಿರೆಯ ರಮೇಶ್ ಮಯ್ಯ ಹಾಗೂ ಶ್ರೀಮತಿ ಲತಾ […]