ಬಿಗ್ ಬಾಸ್ ನಲ್ಲಿ ನಮ್ ಕುಂದಾಪುರ ಹುಡ್ಗ, ಧನ್ ರಾಜ್ ಸಖತ್ ಮಿಂಚಿಂಗ್

ನೀವೆಲ್ಲ ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಅನ್ನು ಪ್ರೀತಿಯಿಂದ ಹಗ್ ಮಾಡುವ ಬಿಗ್ ಬಾಸ್ ಅಭಿಮಾನಿಗಳಾಗಿರಬಹುದು. ಅಂದ ಹಾಗೆ ನೀವು ಖುಷಿಪಟ್ಟು ನೋಡುತ್ತಿರುವ ಬಿಗ್ ಬಾಸ್ ನಲ್ಲಿ  ನಮ್ಮ ಕರಾವಳಿಯ  ಯುವ ಸ್ಪರ್ಧಾಳು ಕೂಡ ಮಿಂಚುತ್ತಿದ್ದಾರೆ ಎನ್ನುವುದು ನಿಮ್ಮ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ.
ಹೌದು ಬಿಗ್ ಬಾಸ್ ನಲ್ಲಿ ಮಿಂಚುತ್ತಿರುವ  ಧನರಾಜ್ ಸಿಎಂ, ಕುಂದಾಪುರದ  ಅಪ್ಪಟ ಪ್ರತಿಭೆ,ಸದ್ಯ ಬೆಂಗಳೂರಿನಲ್ಲೇ ನೆಲೆಸಿರುವ ಧನರಾಜ್, ಅವಕಾಶಕ್ಕಾಗಿ ಹಾತೊರೆಯುತ್ತಿರುವ ನಟ, ವಾಯ್ಸ್ ಓವರ್ ಆರ್ಟಿಸ್ಟ್ ಹಾಗೂ ಡಬ್ಬಿಂಗ್ ಆರ್ಟಿಸ್ಟ್. ಹಲವು ಕಾರ್ಟೂನ್ ಗಳಿಗೆ ವಾಯ್ಸ್ ಕೊಟ್ಟಿದ್ದಾರೆ.ಅದ್ಭುತವಾಗಿ ಮಿಮಿಕ್ರಿ ಮಾಡುವ ಧನರಾಜ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರನ್ನೇ ಇಂಪ್ರೆಸ್ ಮಾಡಿದ್ದಾರೆ .ಇದೀಗ ಬಿಗ್ ಬಾಸ್ ಎಂಬ ಅತಿ ದೊಡ್ಡ ರಿಯಾಲಿಟಿ ಶೋನ ಮೂಲಕ ಪ್ರಪಂಚಕ್ಕೆ ಕಾಣಿಸಿಕೊಳ್ಳುತ್ತಿರುವ ಧನರಾಜ್, ಗ್ರಾಮೀಣ ಭಾಗದಲ್ಲೇ ಬೆಳೆದ ಕಲಾಸಾಧಕ.

ಕೆ.ಜಿ.ಎಫ್ ಗೂ ಧನ ರಾಜ್ ಧ್ವನಿ:

ಇತ್ತೀಚೆಗಷ್ಟೇ ತೆರೆಕಂಡ ಕನ್ನಡದ ಅದ್ಧೂರಿ ಚಿತ್ರ ಕೆ.ಜಿ.ಎಫ್ ನ ಪಾತ್ರವೊಂದಕ್ಕೆ ಧನ್ ರಾಜ್ ಕಂಠದಾನ ಮಾಡಿ , ಕನ್ನಡನಾಡಿನ ಗಮನ ಸೆಳೆದಿದ್ದಾರೆ.  ಆ ಮೂಲಕ ಸಿನಿಮಾಗೂ  ಲಗ್ಗೆಯಿಟ್ಟಿದ್ದಾರೆ.
ನಮ್ಮೂರವರನ್ನು ಗೆಲ್ಲಿಸಿ:
ಕರಾವಳಿಯ ಹೆಮ್ಮೆ ಕಲೆಗಳಾಧ ಕಂಬಳ, ಯಕ್ಷಗಾನದಂತಹ ವಿಷಯಗಳನ್ನು ಬಿಗ್ ಬಾಸ್ ನ ವೇದಿಕೆಯಲ್ಲಿ ಹಂಚಿಕೊಂಡು ಎಲ್ಲರ ಹೃದಯವನ್ನೂ ಗೆಲ್ಲಿಸುತ್ತಿರುವ ಧನರಾಜ್ ಗೆ ಎಲ್ಲರ ಆಶೀರ್ವಾದ ಬೇಕಿದೆ.
ನಮ್ಮ ಉಡುಪಿ ಜಿಲ್ಲೆಯ ಈ ಪ್ರತಿಭೆಯನ್ನು ಬಿಗ್ ಬಾಸ್ ನಲ್ಲಿ  ಗೆಲ್ಲಿಸಿಕೊಡುವ ಮೂಲಕ  ಪ್ರೇಕ್ಷಕರು ಈ ಪ್ರತಿಭೆಯ ಕೈಹಿಡಿಯಬಹುದು.
ಕುಂದಾಪುರದ ಪ್ರತಿಭೆಗೆ ವೋಟ್ ಮಾಡಿ : ಅಭಿಮಾನಿಗಳು
ಸಾಮಾಜಿಕ ಜಾಲತಾಣದಲ್ಲಿ  “ಧನ್ ರಾಜ್ ಅವರನ್ನು ಬಿಗ್ ಬಾಸ್ ನಲ್ಲಿ  ಗೆಲ್ಲಿಸಿ, ಕರಾವಳಿಯನ್ನೂ ಗೆಲ್ಲಿಸಿ ಎಂದು ಧನ್ ರಾಜ್ ಸ್ನೇಹಿತರು  ವಿನಂತಿಸಿಕೊಂಡಿದ್ದಾರೆ.  VOOT ಆ್ಯಪ್ ಅನ್ನು ಡೌನ್ ಲೋಡ್ ಮಾಡಿ  ಆ್ಯಪ್ ಮೂಲಕ ಧನರಾಜ್ ಸಿಎಂ ಇವರಿಗೆ ಪ್ರತಿ ದಿನ ವೋಟ್ ಮಾಡುವ ಮೂಲಕ ಅತಿ ಹೆಚ್ಚಿನ ವೋಟ್ ಮಾಡಿ ಧನ್ ರಾಜ್ ಅವರನ್ನು ಗೆಲ್ಲಿಸಿ ಎನ್ನುವುದು ಅವರ ಅಭಿಮಾನಿ ಹಾಗೂ ಸ್ನೇಹಿತರ ಕೋರಿಕೆ. ಈ ಪ್ರತಿಭೆಗೆ ನಿಮ್ಮ ಪ್ರೋತ್ಸಾಹವಿರಲಿ.