“ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ” ಮೀನುಗಾರರು ಮರಳಿ ಬರಲೆಂದು ನಾಗರಿಕ ಸಮಿತಿಯಿಂದ ಪ್ರಾರ್ಥನೆ

ಉಡುಪಿ: ಮಲ್ಪೆಯಿಂದ ಮಿನುಗಾರಿಕೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಹಾಗೂ ಅದರಲ್ಲಿರುವ 7 ಜನ ಮಿನುಗಾರರು ಕಾಣೆಯಾದ ಘಟನೆ ನಡೆದು 19 ದಿನಗಳು ಕಳೆದು ಹೋಗಿದೆ. ಸಂಬಂಧ ಪಟ್ಟ ಇಲಾಖೆಗಳು ಪತ್ತೆ ಕಾರ್ಯ ನಡೆಸುತ್ತಿದ್ದರೂ ಇದುವರೆಗೂ ಬೋಟು ಹಾಗೂ ಮಿನುಗಾರರ  ಇರುವಿಕೆ ತಿಳಿದು ಬಂದಿಲ್ಲದ ಕಾರಣ ಮೀನುಗಾರರ ಕುಟುಂಬ ವರ್ಗದವರು ಆತಂಕದಲ್ಲಿದ್ದಾರೆ. ಆದಷ್ಟು ಬೇಗ ಮೀನುಗಾರರು  ಬೋಟು ಸುರಕ್ಷಿತರಾಗಿ ಪತ್ತೆಯಾಗಲಿ ಎಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಪದಾಧಿಕಾರಿಗಳು, ಅಭಿಮಾನಿಗಳು ಉಡುಪಿ ಸೋದೆ ಮಠದ ಭೂತರಾಜರ  ಗುಡಿಯಲ್ಲಿ ಶ್ರೀದೇವರಲ್ಲಿ ಪ್ರಾರ್ಥನೆಯನ್ನು ಗುರುವಾರ ಸಂಜೆ ಸಲ್ಲಿಸಿದರು.
       ಪ್ರಾರ್ಥನಾ ವಿಧಿ ವಿಧಾನಗಳನ್ನು ವೆಂಕಟೇಶ ಆಚಾರ್ಯ, ಸೋದೆ ಮಠದ ಉಸ್ತುವಾರಿ ಮಧ್ವೇಶ ತಂತ್ರಿ, ಅವರು ನಡೆಸಿ ಕೊಟ್ಟರು. ನಾಗರಿಕ ಸಮಿತಿಯ ಸಂಕಲ್ಪದೊಂದಿಗೆ ನಡೆದ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯ ತಾರಾನಾಥ್ ಮೇಸ್ತ ಶಿರೂರು, ಉದ್ಯಮಿ ಮುರಳಿಧರ್ ಬಲ್ಲಾಳ್, ಸುಧಾಕರ, ಡೇವಿಡ್, ರಾಘವೇಂದ್ರ ಪ್ರಭು ಕರ್ವಾಲು, ಬಸಂತ್ ಮಲ್ಪೆ, ಐಸಿರಿ ಸುರೇಂದ್ರ ಕುಕ್ಯಾನ್, ಬೋರ್ಕರ್, ಪುತ್ರಾಯ, ಸವಿತಾ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.