ಹೊಸ ವರ್ಷದಲ್ಲಿ ಹೊಸದಾಗಿ ಖುಷಿ ಪಡಲು “ಸೀ ಬರ್ಡ್ ರೆಸಾರ್ಟ್” ಗೆ ಬನ್ನಿ
ಉಡುಪಿ: “ಸೀ ಬರ್ಡ್ ರೆಸಾರ್ಟ್” ಅಂದರೆ ಪ್ರವಾಸಿಗರಿಗೆ ಹಾಟ್ ಸ್ಪಾಟ್, ಫ್ಯಾಮಿಲಿ ಜೊತೆ ಏಕಾಂತ ಕಳೆಯ ಬಯಸುವವರಿಗೆ ಸೀ ಬರ್ಡ್ ರೆಸಾರ್ಟ್ ಸೂಕ್ತ ತಾಣ. ಮಣಿಪಾಲದಿಂದ 5 ಕಿಲೋ ಮೀಟರ್ ಸಮೀಪದಲ್ಲಿರುವ “ಸೀ ಬರ್ಡ್ ರೆಸಾರ್ಟ್” ಬೆಳ್ಳಂಪಳ್ಳಿಯಲ್ಲಿ ಹೊಸ ವರ್ಷದ ಅಂಗವಾಗಿ ಗ್ರಾಹಕರಿಗೆ ಆಕರ್ಷಕವಾದ ‘ಐಫೆಲ್ ಟವರ್’, ಡ್ರಿಂಕ್ಸ್ , ಅನ್ ಲಿಮಿಟೆಡ್ ಫುಡ್, ನಾನ್ ಸ್ಟಾಪ್ ಮ್ಯೂಸಿಕ್, ಗೇಮ್ಸ್, ಡ್ಯಾನ್ಸ್, ಫೋಟೋ ಬೂತ್ ಹಾಗೂ ಇನ್ನಿತರ ಸೇವೆಗಳನ್ನು ಅತ್ಯಾಧುನಿಕ ರೆಸಾರ್ಟ್ ನಲ್ಲಿ ನೀಡಲಾಗುತ್ತಿದೆ. ನ್ಯೂ ಇಯರ್ […]
ಎಸೆಸೆಲ್ಸಿ ತುಳು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ವೃದ್ಧಿ
ಮಂಗಳೂರು: ತುಳುವನ್ನು ತೃತೀಯ ಭಾಷೆಯಾಗಿ ಆಯ್ದುಕೊಂಡು ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ವೃದ್ಧಿಯಾಗಿದೆ. 2018-19ನೇ ಸಾಲಿನಲ್ಲಿ ಒಟ್ಟು 34 ಶಾಲೆಗಳಿಂದ 660 ಮಂದಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಕಳೆದ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 417 ಆಗಿತ್ತು.
ಪೆಟ್ರೋಲ್, ಡೀಸೆಲ್ ದರ ಇಳಿಕೆ
ಬೆಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಕಾಣುತ್ತಿದೆ. ಹೀಗಾಗಿ ದೇಶದಲ್ಲಿ ಒಂದು ವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಇಳಿಕೆ ಕಂಡುಬರುತ್ತಿದ್ದು, ಶನಿವಾರ ಪ್ರತಿ ಲೀಟರ್ ಪೆಟ್ರೋಲ್‌ಗೆ 39 ಪೈಸೆ ಮತ್ತು ಡೀಸೆಲ್‌ಗೆ 30 ಪೈಸೆ ಇಳಿಕೆಯಾಗಿದೆ. ಚಿಲ್ಲರೆ ಮಾರಾಟ ದರ ಒಂದು ಲೀಟರ್ ಪೆಟ್ರೋಲ್ ₹ 69.82 ಮತ್ತು ಡೀಸೆಲ್ ₹ 63.67ಕ್ಕೆ ತಲುಪಿದೆ. ಡಿ.21 ರಿಂದ ಡಿ.29ರವರೆಗೆ ಲೀಟರ್ ಪೆಟ್ರೋಲ್ ದರ ₹1.24 ಮತ್ತು ಡೀಸೆಲ್ ದರ ₹1.1ರಷ್ಟು ಕಡಿಮೆಯಾಗಿದೆ.
“ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ”: ನೆರವಿಗೆ ಪ್ರಧಾನಿಗೆ ಮನವಿ
ಉಡುಪಿ: ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆಯಿಂದ ಮೀನುಗಾರಿಗೆ ತೆರಳಿದ್ದ ಬೋಟ್ ಇದುವರೆಗೂ ಪತ್ತೆಯಾಗದಿರುವುದು ಆತಂಕ ಸೃಷ್ಟಿಸಿದೆ. ಬೋಟ್ ಪತ್ತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ರಘುಪತಿ ಭಟ್ ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಗೋವಾ, ಮಹಾರಾಷ್ಟ್ರ ಸರ್ಕಾರಗಳು ಕೂಡ ಬೋಟ್ ಪತ್ತೆಗೆ ಸಹಕಾರ ನೀಡಿವೆ. ಮೀನುಗಾರರು ಇದೊಂದು ಭಯೋತ್ಪಾದಕರ ಅಥವಾ ಕಡಲ್ಗಳ್ಳರ ಕೃತ್ಯ ಎಂದು ಶಂಕಿಸಿದ್ದು, ಈ ಸಂಬಂಧ ಕೇಂದ್ರ […]
ದೇಶದಲ್ಲಿ ಎಟಿಎಂಗಳ ಸಂಖ್ಯೆ ಇಳಿಕೆ
ದೇಶದಲ್ಲಿ ಎಟಿಎಂಗಳ ಸಂಖ್ಯೆ 2017ರ ಡಿಸೆಂಬರ್‌ನಿಂದ 2018ರ ಸೆಪ್ಟೆಂಬರ್ ಅವಧಿಯಲ್ಲಿ 2.07 ಲಕ್ಷದಿಂದ 2.05ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ. ಸರ್ಕಾರಿ ಸ್ವಾಮ್ಯದ ಕೆಲವು ಬ್ಯಾಂಕ್‌ಗಳು ಶಾಖೆಗಳನ್ನು ಮೇಲ್ದರ್ಜೆಗೇರಿಸುತ್ತಿವೆ. ಇದರ ಜತೆಗೆ ಪಾಯಿಂಟ್ ಆಫ್ ಸೇಲ್, ಯುಪಿಐನಂತಹ ಡಿಜಿಟಲ್ ಪಾವತಿ ವ್ಯವಸ್ಥೆಗಳ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ಎಟಿಎಂಗಳ ಸಂಖ್ಯೆ ತಗ್ಗಿಸಲಾಗುತ್ತಿದೆ ಎಂದು 2017–18ರ ಬ್ಯಾಂಕಿಂಗ್ ಪ್ರಗತಿ ವಲಯವು ವರದಿಯನ್ನು ನೀಡಿದೆ. ಆದರೆ ನಿರ್ವಹಣಾ ವೆಚ್ಚದಲ್ಲಿ ಭಾರಿ ಏರಿಕೆ, ಹೊಸ ನೋಟು ಮಷಿನ್‌ಗಳಿಗೆ ತಗಲುವ ಹೆಚ್ಚುವರಿ ಹೊರೆಯನ್ನು ಬ್ಯಾಂಕ್‌ಗಳು […]