ಅಗಲಿದ ಐ.ಪಿ.ಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರಿಗೆ ಶೃದ್ಧಾಂಜಲಿ ಸಮರ್ಪಣೆ.

ಉಡುಪಿ: ಅಗಲಿದ ಪೊಲೀಸ್ ಇಲಾಖೆಯ ದಿಟ್ಟ ಪ್ರಾಮಾಣಿಕ ಐ.ಪಿ.ಎಸ್ ಅಧಿಕಾರಿ ಮಧುಕರ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಆಯೋಜನೆಯಲ್ಲಿ ಮಾರುತಿ ವಿಥಿಕಾದಲ್ಲಿರುವ ಸಮಿತಿಯ ಕಛೇರಿ ವಠಾರದಲ್ಲಿ ಶನಿವಾರ ಸಂಜೆ ನಡೆಯಿತು. ಮಧುಕರ್ ಶೆಟ್ಟಿ ಅವರ ಭಾವಚಿತ್ರಕ್ಕೆ ನುಡಿ ನಮನ ಸಲ್ಲಿಸಿ ಮಾತನಾಡಿದ ಬಡಗುಬೆಟ್ಟು ಸಹಕಾರಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಜಯಕರ್ ಶೆಟ್ಟಿ ಇಂದ್ರಾಳಿ, ಒರ್ವ ಪ್ರಾಮಾಣಿಕ ದಕ್ಷ ಭ್ರಷ್ಟಚಾರಿಗಳಿಗೆ ಕಂಟಕರಾದ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರ ಅಗಲಿಕೆ ರಾಜ್ಯ ತುಂಬಲಾರದ […]

ಯಕ್ಷಗಾನ ಎನ್ನುವುದು ಮಿಮಿಕ್ರಿ, ಸರ್ಕಸ್ ಅಲ್ಲ: ಗೋಪಾಲರಾವ್

ಉಡುಪಿ: ಯಕ್ಷಗಾನ ಎನ್ನುವುದು ಮಿಮಿಕ್ರಿ ಅಥವಾ ಸರ್ಕಸ್ ಅಲ್ಲ. ಅದು ನಮ್ಮ ಹಿರಿಯರು ಬಿಟ್ಟು ಹೋದ ದೊಡ್ಡ ಆಸ್ತಿ. ಅದನ್ನು ನಾವು ಅನುಭವಿಸುತ್ತಿದ್ದೇವೆ ಎಂದು ಹಿರಿಯ ಯಕ್ಷಗಾನ ಕಲಾವಿದ ಹಿರಿಯಡಕ ಗೋಪಾಲರಾವ್ ಹೇಳಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಯಕ್ಷಗಾನ ಕೇಂದ್ರ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಹಾಗೂ ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ ನ ಸಂಯುಕ್ತ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ […]

ಹಿರಿಯಡ್ಕ ಸರಕಾರಿ ಪ್ರ.ದರ್ಜೆ ಕಾಲೇಜು:ಡಿ.30 ರಂದು ಸದಸ್ಯರ ಸಭೆ     

ಉಡುಪಿ: ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಮತ್ತು ದಶಮಾನೋತ್ಸವ ಸಮಾರಂಭ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಕ್ರೀಡೋತ್ಸವವನ್ನು ನಡೆಸುವ ಬಗ್ಗೆ ಡಿ. 30 ರಂದು ಪೂರ್ವಾಹ್ನ 9:30ಕ್ಕೆ ಹಿರಿಯಡ್ಕ ಸರಕಾರಿ ಪ್ರ.ದರ್ಜೆ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರ ಸಭೆ ನಡೆಯಲಿದೆ. ಎಲ್ಲಾ ಸದಸ್ಯರು ಭಾಗವಹಿಸುವಂತೆ ಪ್ರಕಟನೆ ತಿಳಿಸಿದೆ.

ಖಡಕ್ ಐಪಿಎಸ್ ​​ಅಧಿಕಾರಿ ಮಧುಕರ್​ ಶೆಟ್ಟಿ ಇನ್ನಿಲ್ಲ

ಬೆಂಗಳೂರು: ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಒಂದು ವಾರದಿಂದ ಹೆಚ್1​ಎನ್1 ಖಾಯಿಲೆಯಿಂದ ಬಳಲುತ್ತಿದ್ದ  ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ (47) ಅವರು ಚಿಕಿತ್ಸೆ ಫಲಕಾರಿಯಾಗದೆ  ಶುಕ್ರವಾರ ರಾತ್ರಿ  9 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಖ್ಯಾತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಪುತ್ರ ,1999ರ ಬ್ಯಾಚ್‌ ಐಪಿಎಸ್ ಅಧಿಕಾರಿಯಾಗಿರುವ ಮಧುಕರ್ ಶೆಟ್ಟಿ, ಕರ್ನಾಟಕದ ಉಡುಪಿ ಜಿಲ್ಲೆಯವರು. ಅವರು ಹೊಸದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಮತ್ತು ನ್ಯೂಯಾರ್ಕ್ ನ ಯೂನಿವರ್ಸಿಟಿಯಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದರು […]