ಜಗತ್ತಿನಲ್ಲಿ ಪ್ರೀತಿ ಬಾಂಧವ್ಯ ಬೆಸೆಯಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್

ಉಡುಪಿ: ಜಗತ್ತಿನಲ್ಲಿ ಮಾನವರ ಮಧ್ಯೆ ಪ್ರೀತಿ ಬಾಂಧವ್ಯ ಇನ್ನಷ್ಟು ಬೆಸೆಯಬೇಕಾದ ಅಗತ್ಯವಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ. ಅವರು ಬುಧವಾರ ಉಡುಪಿ ಪೇಜಾವರ ಮಠ ಹಾಗೂ ಕೃಷ್ಣಮಠಕ್ಕೆ ಭೇಟಿ ನೀಡಿ ಮಾತನಾಡಿದರು. ಕೃಷ್ಣಮಠಕ್ಕೆ ಭೇಟಿ ನೀಡಲು ಬಹುದಿನಗಳಿಂದ ಯೋಚಿಸುತ್ತಿದ್ದೆ. ಇಂದು ಭೇಟಿ ನೀಡಿರುವುದು ಸಂತೋಷ ತಂದಿದೆ. ಪೇಜಾವರ ಸ್ವಾಮೀಜಿಗಳು ಚೈತನ್ಯದಿಂದ ಓಡಾಡುತ್ತಿರುವುದು ಸಂತಸ ಮೂಡಿಸಿದೆ. ಅವರ ಧಾರ್ಮಿಕ ಮತ್ತು ಸಾಮಾಜಿಕ ಕೈಂಕರ್ಯಗಳು ಇನ್ನಷ್ಟು ಮೂಡಿಬರಲಿ ಎಂದು ರಾಷ್ಟ್ರಪತಿಗಳು ಹಾರೈಸಿದರು.   ರಾಮರಾಜ್ಯವು ಆದರ್ಶ ರಾಜ್ಯವಾಗಿದ್ದು, ಪ್ರಜೆಗಳೊಂದಿಗೆ […]

ರಾಷ್ಟ್ರಪತಿ ಆಗಮನ: ಅಲ್ಲಲ್ಲಿ ರಸ್ತೆ ಬಂದ್ ನಿಂದ ಪರದಾಡಿದ ಸಾರ್ವಜನಿಕರು

ಉಡುಪಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದು ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಸಂಚರಿಸುವ ಮಾರ್ಗ ಹಾಗೂ ಸಂಪರ್ಕ ರಸ್ತೆಗಳನ್ನು ಬೆಳಗ್ಗೆ 9 ಗಂಟೆಯಿಂದಲೇ ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದ ಜನಸಾಮಾನ್ಯರು ಬಹಳ ತೊಂದರೆ ಅನುಭವಿಸಿದರು. ಪರದಾಡಿದ ಮದುಮಗ: ರಥಬೀದಿಯ ರಾಘವೇಂದ್ರ ಮಠದಲ್ಲಿ ಮೊದಲೇ ನಿಗದಿ ಮಾಡಿದ್ದ ಮದುವೆಗೆ ತೆರಳುತ್ತಿದ್ದ ಮದುವೆ ಗಂಡು ಹಾಗೂ ಆತನ ಸಂಬಂಧಿಕರನ್ನು ಪೊಲೀಸರು ತಡೆದು ನಿಲ್ಲಿಸಿದ ಘಟನೆಯೊಂದು ಕಲ್ಸಂಕದಲ್ಲಿ ಇಂದು ನಡೆದಿದೆ. ಮುಹೂರ್ತಕ್ಕೆ ತಡವಾಗುತ್ತಿದೆಯೆಂದು ಅಂಗಲಾಚಿದ ಬಳಿಕ ಮದುವೆ ಗಂಡು […]

ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭಾಶಯ

ಉಡುಪಿ: ಈ 88 ರ ಹರೆಯದಲ್ಲೂ ನಿಮ್ಮ ಲವಲವಿಕೆ ,ಉತ್ಸಾಹದ ಜೀವನ ಕಂಡು ನನಗೆ ಅಚ್ಚರಿಯಾಗಿದೆ. ನಿಮ್ಮ ಮಾರ್ಗದರ್ಶನ ದೇಶಕ್ಕೆ ಅಗತ್ಯವಿದೆ, ನಿಮ್ಮ ತಪಸ್ಸು ಸೇವೆ, ಸಾಧನೆಗಳು ಹಾಗೂ  80 ವರ್ಷದ ಯಶಸ್ವಿ ಸನ್ಯಾಸಿ ಬದುಕು ಅಭಿನಂದನೀಯವಾಗಿದೆ, ಈ ಕ್ಷೇತ್ರಕ್ಕೆ ಬಂದು ತಮ್ಮನ್ನು ಕಂಡು ಕೃಷ್ಣನ ದರ್ಶನ ಮಾಡುವ ಯೋಗ ಲಭಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ, ನಾನೂ ಭಗವಂತನ ಭಕ್ತನಾಗಿದ್ದೇನೆ .ನನಗೂ ಶ್ರದ್ಧೆ ಇದೆ.ಆದರೆ ರಾಷ್ಟ್ರಪತಿಯ ಸ್ಥಾನದಲ್ಲಿ ಕುಳಿತು ನನಗೆ ಕೆಲವು ನಿರ್ಭಂಧಗಳಿರುವುದರಿಂದ ಅವುಗಳಿಗೆ ಒಳಪಟ್ಟು ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ರಾಷ್ಟ್ರಪತಿ […]