ಉಡುಪಿ: ಈ 88 ರ ಹರೆಯದಲ್ಲೂ ನಿಮ್ಮ ಲವಲವಿಕೆ ,ಉತ್ಸಾಹದ ಜೀವನ ಕಂಡು ನನಗೆ ಅಚ್ಚರಿಯಾಗಿದೆ. ನಿಮ್ಮ ಮಾರ್ಗದರ್ಶನ ದೇಶಕ್ಕೆ ಅಗತ್ಯವಿದೆ, ನಿಮ್ಮ ತಪಸ್ಸು ಸೇವೆ, ಸಾಧನೆಗಳು ಹಾಗೂ 80 ವರ್ಷದ ಯಶಸ್ವಿ ಸನ್ಯಾಸಿ ಬದುಕು ಅಭಿನಂದನೀಯವಾಗಿದೆ, ಈ ಕ್ಷೇತ್ರಕ್ಕೆ ಬಂದು ತಮ್ಮನ್ನು ಕಂಡು ಕೃಷ್ಣನ ದರ್ಶನ ಮಾಡುವ ಯೋಗ ಲಭಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ, ನಾನೂ ಭಗವಂತನ ಭಕ್ತನಾಗಿದ್ದೇನೆ .ನನಗೂ ಶ್ರದ್ಧೆ ಇದೆ.ಆದರೆ ರಾಷ್ಟ್ರಪತಿಯ ಸ್ಥಾನದಲ್ಲಿ ಕುಳಿತು ನನಗೆ ಕೆಲವು ನಿರ್ಭಂಧಗಳಿರುವುದರಿಂದ ಅವುಗಳಿಗೆ ಒಳಪಟ್ಟು ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹೇಳಿದರು.
ಗುರುವಾರ ಮಠದ ಮುಂಭಾಗದಲ್ಲಿ ದಿವಾನ ರಘುರಾಮಾಚಾರ್ಯ ಮಾಲಾರ್ಪಣೆಗೈದು ರಾಷ್ಟ್ರಪತಿಯವರನ್ನು ಮಠಕ್ಕೆ ಸ್ವಾಗತಿಸಿದರು. ಶ್ರೀಗಳ ಕಾರ್ಯದರ್ಶ ವಿಷ್ಣುಮೂರ್ತಿ ಆಚಾರ್ಯ ,ಎಸ್ ವಿ ಭಟ್ ಡಿ ಪಿ ಅನಂತ್ ಜೊತೆಗಿದ್ದರು.
ಅದ್ಧೂರಿ ಸ್ವಾಗತ: ಕೇಶವ ಆಚಾರ್ಯ ವಾಸುದೇವ ಭಟ್ ವೇದಘೋಷ ಪೂರ್ಣಕುಂಭ ಹಿಡಿದು ಮಠದ ಒಳಗೆ ಬರಮಾಡಿಕೊಂಡರು. ಶ್ರೀಗಳು ಮಠದ ಪಟ್ಟದ ದೇವರು ರಾಮವಿಠಲ ದೇವರಿಗೆ ಆರತಿ ಬೆಳಗಿದರು. ಮಧ್ವಾಚಾರ್ಯರು ಕೃಷ್ಣಮಠದ ಇತಿಹಾಸ ಪೂಜಾ ಪದ್ಧತಿ, ಮಧ್ವರ ಸಂದೇಶಗಳನ್ನು ವಿವರಿಸಿದರು.
ಯಕ್ಷಗಾನ ಕಿರೀಟ ಧಾರಣೆ ,ಅಟ್ಟೆ ಪ್ರಭಾವಳಿ ಉಡುಗೊರೆ : ರಾಷ್ಟ್ರಪತಿ ಗಳಿಗೆ ಶ್ರೀಗಳು ಶಾಲು ,ಹಾರ ತೊಡಿಸಿ ಯಕ್ಷಗಾನದ ಕೇದಗೆ ಮುಂಡಾಸು ,ತಲೆಗೆ ತೊಡಿಸಿ( ವಿಶ್ವಪ್ರಸನ್ನತೀರ್ಥರು) ದೇವರ ಸಾಂಪ್ರದಾಯಿಕ ಅಟ್ಟೆ ಪ್ರಭಾವಳಿ ಸ್ವರಚಿತ ಕೃತಿಗಳ ಸಹಿತ ಫಲಪುಷ್ಪ ನೀಡಿ ಅನುಗ್ರಹಿಸಿದರು.ಅವರ ಪತ್ನಿಯನ್ನೂ ಶ್ರೀಗಳು ಉಡುಗೊರೆ ನೀಡಿ ಹರಸಿದರು. ಕರ್ನಾಟಕ ನಾಗಾ ಲ್ಯಾಂಡ್ ರಾಜ್ಯಪಾಲರುಗಳಿಗೂ ಯಕ್ಷಗಾನದ ಕಿರೀಟ ತೊಡಿಸಿ ಉಡುಗೊರೆ ನೀಡಿ ಅಭಿನಂದಿಸಿದರು. ವಿದ್ಯಾ ಧೀಶ ತೀರ್ಥ ಶ್ರೀಪದರು ಉಪಸ್ಥಿತರಿದ್ದರು.
ಉಸ್ತುವಾರಿ ಸಚಿವೆ ಜಯಮಾಲಾ , ಶಾಸಕ ರಘುಪತಿ ಭಟ್, ಪರಿಷತ್ ವಿಪಕ್ಷ ನಾಯಕ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ರತ್ನಕುಮಾರ್, ಭುವನೇಂದ್ರ ಕಿದಿಯೂರ್, ಡಾ ಜಿ ಶಂಕರ್, ಡಾ ಎಚ್ವೆಸ್ ಬಲ್ಲಾಳ್, ಎಂ ಬಿ ಪುರಾಣಿಕ್, ಹರಿಕೃಷ್ಣ ಪುನರೂರು ,ಗಣೇಶ್ ರಾವ್, ಡಾ ಜಿ ಎಸ್ ಚಂದ್ರಶೇಖರ್ ,ಪ್ರದೀಪ್ ಕಲ್ಕೂರ ,ವಿಲಾಸ್ ನಾಯಕ್ , ಮೊದಲಾದವರು ಉಪಸ್ಥಿರಿದ್ದರು. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ,ಪೋಲಿಸ್ ಎಸ್ ಪಿ ನಿಂಬರಗಿ ವ್ಯವಸ್ಥೆಯಲ್ಲಿ ಸಹಕರಿಸಿದರು.