“ ಬೆಂಗಳೂರು-ಕಾರವಾರ ರೈಲಿಗೆ ಏಕರೂಪ ವೇಳಾಪಟ್ಟಿ ವ್ಯವಸ್ಥೆಗೆ ಕ್ರಮ”
ಕುಂದಾಪುರ: ಬೆಂಗಳೂರು-ಕಾರಾವರ ರೈಲು ಕರಾವಳಿ ನಿಲ್ದಾಣಗಳಲ್ಲಿ ಏಕರೂಪ ವೇಳಾಪಟ್ಟಿಯಂತೆ ಸಂಚರಿಸುವ ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಕೊಂಕಣ ರೈಲ್ವೆ ಆಡಳಿತ ನಿರ್ದೇಶಕ ಹಾಗೂ ಮುಖ್ಯಸ್ಥ ಸಂಜಯ್ ಗುಪ್ತಾ ಹೇಳಿದ್ದಾರೆ. ಕುಂದಾಪುರದ ಮೂಡ್ಲಕಟ್ಟೆ ರೈಲ್ವೆ ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ಕುಂದಾಪುರ ರೈಲು ಪ್ರಯಾಣಿಕರ ಸಮಿತಿ ಪ್ರತಿನಿಧಿಗಳಿಗೆ ಅವರು ಮಾಹಿತಿ ನೀಡಿದರು. ಏಕರೂಪ ವೇಳಾಪಟ್ಟಿ ಬಗ್ಗೆ ಯೋಚನೆ: ಪ್ರಸ್ತುತ ವಾರದ ೩ ದಿನಗಳಲ್ಲಿ ಬೆಂಗಳೂರಿನಿಂದ ಹೊರಡುವ ಕಾರವಾರ ರೈಲು ಮೈಸೂರು ಮಾರ್ಗವಾಗಿ ಬೆಳಿಗ್ಗೆ ೮.೧೫ ಕ್ಕೆ ಮಂಗಳೂರು ಸೆಂಟ್ರಲ್, […]
ಅಚ್ಲಾಡಿ ಸನ್‌ಶೈನ್ ಗೆಳೆಯರ ಬಳಗ ದಶಮಾನೋತ್ಸವ: ಸಾಧಕರಿಗೆ ಸಮ್ಮಾನ
ಕುಂದಾಪುರ: ಸನ್‌ಶೈನ್ ಗೆಳೆಯರ ಬಳಗ ರಿ. ಕ್ರೀಡಾಸಂಘ ಅಚ್ಲಾಡಿ ಇದರ ದಶಮಾನೋತ್ಸವ ಸಮಾರಂಭ ಭಾನುವಾರ ಅಚ್ಲಾಡಿ ಸನ್‌ಶೈನ್ ಕ್ರೀಡಾಂಗಣದಲ್ಲಿ ನಡೆಯಿತು. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸನ್‌ಶೈನ್ ಗೆಳೆಯರ ಬಳಗವನ್ನು ನಾನು ಬಹಳ ಹತ್ತಿರದಿಂದ ಕಂಡವನು. ಇಲ್ಲಿ ಒಂದಷ್ಟು ಯುವ ಮನಸ್ಸುಗಳು ಒಟ್ಟಿಗೆ ಸೇರಿ ಜನಪರ, ಬಡವರ ಪರ ಕಾರ್ಯಕ್ರಮವನ್ನು ಸಂಘಟಿಸಿ ಇತರ ಸಂಸ್ಥೆಗಳಿಗೆ ಮಾದರಿಯಾಗಿದ್ದಾರೆ ಹಾಗೂ ಸಂಘಟನೆಗಳು ಸದಾ ಕ್ರೀಯಾಶೀಲವಾಗಿದ್ದಾಗ ಊರಿನ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದರು. ಸಂಸ್ಥೆಯ […]
ಮನಸ್ಸಿನಲ್ಲಿ ಪ್ರೀತಿ ತುಂಬಿಕೊಂಡಿದ್ದರೆ ಆರೋಗ್ಯದ ಸ್ಥಿರ : ಡಾ.ಬಿ.ಎಂ.ಹೆಗ್ಡೆ
ಕುಂದಾಪುರ: ನಾವು ಮಾಡುವ ಒಳ್ಳೆಯ ಕೆಲಸಗಳನ್ನು ಭಗವಂತ ಪ್ರತಿ ಕ್ಷಣವೂ ನೋಡುತ್ತಿರುತ್ತಾನೆ. ಬೇರೆಯವರ ಬಗ್ಗೆ ಕಾಳಜಿ ತೋರುವವರು ಯಾವಾಗಲೂ ಆರೋಗ್ಯವಂತರಾಗಿರುತ್ತಾರೆ. ಮನಸ್ಸಿನಲ್ಲಿ ಪ್ರೀತಿ ತುಂಬಿಕೊಂಡಿದ್ದರೆ ಆರೋಗ್ಯದ ಸ್ಥಿತಿ ಸ್ಥಿರವಾಗಿರುತ್ತದೆ. ಹೀಗಾಗಿ ಅಪ್ಪಣ್ಣ ಹೆಗ್ಡೆಯವರು ಈ ವಯಸ್ಸಿನಲ್ಲಿಯೂ ಆರೋಗ್ಯವಂತರಾಗಿದ್ದಾರೆ ಎಂದು ಪದ್ಮಭೂಷಣ ಡಾ.ಬಿ.ಎಂ.ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು. ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಸೋಮವಾರ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ೮೪ ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ನಡೆದ ದತ್ತಿನಿಧಿ ವಿತರಣೆ ಹಾಗೂ […]
ಶಾಲಾ ಶಿಕ್ಷಕನ ವಿರುದ್ಧ ದೂರು
ಕಾರ್ಕಳ: ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನ ಬೆನ್ನಿನ ಮೇಲೆ ಕೋಲಿನಿಂದ ಹೊಡೆದು ಗಾಯಗೊಳಿಸಿದ ಶಾಲಾ ಶಿಕ್ಷಕನ ವಿರುದ್ಧ ಆತನ ಪೋಷಕರಾದ ರೇಣುಕಾ ಅವರು ಭಾನುವಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರ್ಕಳ ತಾಲ್ಲೂಕಿನ ಕಾಂತಾವರ ಬೇಲಾಡಿಯ ಪಡಂಬೋಡಿ ನಿವಾಸಿ ರೇಣುಕಾ ಅವರ ಆರು ವರ್ಷದ ಮಗ ಅನೀಶ್ ಬೇಲಾಡಿಯ ಖಾಸಗಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದು. ಕೆಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಅನೀಶ್ ಜಂತುಹುಳದ ಔಷಧಿ ಸೇವಿಸುತ್ತಿದ್ದ ಎನ್ನಲಾಗಿದೆ. ಅನಾರೋಗ್ಯದ ಕಾರಣದಿಂದ ವಿದ್ಯಾರ್ಥಿಯು ಶನಿವಾರ ಶಾಲೆಯ ಮಧ್ಯಾಹ್ನದ ಬಿಸಿ […]
ಮೋದಿ ಮತ್ತೆ ಪ್ರಧಾನಿಯಾಗಲು ‘ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಕಾರ್ಯಕ್ರಮ
ಮಂಗಳೂರು: ‘ಟೀಮ್‌ಮೋದಿ’ ವತಿಯಿಂದ ಡಿ.29ರ ಶನಿವಾರ ರಾತ್ರಿ ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ವತಿಯಿಂದ ‘ಸಂಪೂರ್ಣ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟವನ್ನು ಮಣ್ಣಗುಡ್ಡೆ ಗುರ್ಜಿ ಸಮೀಪದ ಮೈದಾನದಲ್ಲಿ ಆಯೋಜಿಸಲಾಗಿದೆ. ಟೀಮ್ ಮೋದಿಯ ಸದಸ್ಯರಾದ ನರೇಶ್ ಶೆಣೈ ವೈಯಕ್ತಿಕ ಖರ್ಚಿನಲ್ಲಿ ಈ ಯಕ್ಷಗಾನವನ್ನು ಆಯೋಜಿಸಿದ್ದು, ಚೌಕಿ ಪೂಜೆ ಮತ್ತು ಅನ್ನ ಸಂತರ್ಪಣೆಯನ್ನು ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.