“ ಬೆಂಗಳೂರು-ಕಾರವಾರ ರೈಲಿಗೆ ಏಕರೂಪ ವೇಳಾಪಟ್ಟಿ ವ್ಯವಸ್ಥೆಗೆ ಕ್ರಮ”

ಕುಂದಾಪುರ: ಬೆಂಗಳೂರು-ಕಾರಾವರ ರೈಲು ಕರಾವಳಿ ನಿಲ್ದಾಣಗಳಲ್ಲಿ ಏಕರೂಪ ವೇಳಾಪಟ್ಟಿಯಂತೆ ಸಂಚರಿಸುವ ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಕೊಂಕಣ ರೈಲ್ವೆ ಆಡಳಿತ ನಿರ್ದೇಶಕ ಹಾಗೂ ಮುಖ್ಯಸ್ಥ ಸಂಜಯ್ ಗುಪ್ತಾ ಹೇಳಿದ್ದಾರೆ.

  ಕುಂದಾಪುರದ ಮೂಡ್ಲಕಟ್ಟೆ ರೈಲ್ವೆ ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ಕುಂದಾಪುರ ರೈಲು ಪ್ರಯಾಣಿಕರ ಸಮಿತಿ ಪ್ರತಿನಿಧಿಗಳಿಗೆ ಅವರು ಮಾಹಿತಿ ನೀಡಿದರು.

 ಏಕರೂಪ ವೇಳಾಪಟ್ಟಿ ಬಗ್ಗೆ ಯೋಚನೆ:

ಪ್ರಸ್ತುತ ವಾರದ ೩ ದಿನಗಳಲ್ಲಿ ಬೆಂಗಳೂರಿನಿಂದ ಹೊರಡುವ ಕಾರವಾರ ರೈಲು ಮೈಸೂರು ಮಾರ್ಗವಾಗಿ ಬೆಳಿಗ್ಗೆ ೮.೧೫ ಕ್ಕೆ ಮಂಗಳೂರು ಸೆಂಟ್ರಲ್, ೧೦.೩೭ ಕ್ಕೆ ಉಡುಪಿಗೆ ಹಾಗೂ ೧೧.೦೭ ಕ್ಕೆ ಕುಂದಾಪುರ ನಿಲ್ದಾಣಕ್ಕೆ ಆಗಮಿಸುತ್ತಿದೆ. ಉಳಿದ ದಿನಗಳಲ್ಲಿ ಕುಣಿಗಲ್‌ಮಾರ್ಗವಾಗಿ ಬೆಳಿಗ್ಗೆ ೬ ಕ್ಕೆ ಮಂಗಳೂರಿಗೆ, ೭.೫೦ ಕ್ಕೆ ಉಡುಪಿಗೆ ಹಾಗೂ ೮.೨೧ ಕ್ಕೆ ಕುಂದಾಪುರಕ್ಕೆ ಆಗಮಿಸುತ್ತಿದೆ. ಏಕರೂಪ ವೇಳಾಪಟ್ಟಿ ಅನುಷ್ಠಾನಗೊಂಡಲ್ಲಿ ವಾರದ ೭ ದಿನಗಳಲ್ಲಿಯೂ ಬೆಳಿಗ್ಗೆ ೬ ಕ್ಕೆ ಮಂಗಳೂರು, ೭.೫೦ಕ್ಕೆ ಉಡುಪಿ ಹಾಗೂ ೮.೨೧ ಕ್ಕೆ ಕುಂದಾಪುರಕ್ಕೆ ಆಗಿಮಿಸುವುದರಿಂದ ಪ್ರಯಾಣಿಕರಿಗೆ ಯಾವುದೆ ಗೊಂದಲ ಉಂಟಾಗುವುದಿಲ್ಲ ಎನ್ನುವ ಅಂಶಗಳ ಕುರಿತು ಸಭೆಯಲ್ಲಿ ವಿಚಾರ ವಿನಿಯಮ ನಡೆಸಲಾಯಿತು.