ಡಿ.25 ರಿಂದ ಕುಂದಾಪುರದಲ್ಲಿ ಕುವೆಂಪು ನಾಟಕೋತ್ಸವದ ಸಂಭ್ರಮ
ಕುಂದಾಪುರ: ಜ್ಞಾನಪೀಠ ಪ್ರಶಸ್ತಿ ವಿಜೇತ ಜನ್ಮ ದಿನೋತ್ಸವದ ಸವಿನೆನಪಿನಲ್ಲಿ ೧೮ನೇ ಕುವೆಂಪು ನಾಟಕೋತ್ಸವ ಪ್ರಪ್ರಥಮ ಬಾರಿಗೆ ಕುಂದಾಪುರದಲ್ಲಿ ಭಂಡಾರ್ಕರ್ಸ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಡಿ.೨೫ ರಿಂದ ರಂಗಕಹಳೆ ಬೆಂಗಳೂರು ಐದು ದಿನಗಳ ಕಾಲ ಡಾ. ಎಚ್ ಶಾಂತಾರಾಮ್ ಬಯಲು ರಂಗಮಂಟಪದಲ್ಲಿ ಆಯೋಜಿಸಿದೆ. ಈ ಕುರಿತು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಾಟಕೋತ್ಸವ ಸಂಚಾಲಕ ಓಹಿಲೇಶ್ ಲಕ್ಷ್ಮಣ, ಮಾತನಾಡಿ, ಕರಾವಳಿ ಕರ್ನಾಟಕದ ಇತಿಹಾಸದಲ್ಲಿ ಕುವೆಂಪು ನಾಟಕೋತ್ಸವ ನಡೆಯುತ್ತಿರುವುದು ಇದು ಮೊದಲ ಬಾರಿ. ಡಿ. […]
ಮಲ್ಪೆ:ಆಳಸಮುದ್ರದ ಮೀನುಗಾರಿಕೆಗೆ ತೆರಳಿದ ಮೀನುಗಾರರು ನಾಪತ್ತೆ
ಉಡುಪಿ:ಮಲ್ಪೆ ಬಂಧರಿನಿಂದ ಆಳಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಮರಳಿ ಬಾರದೇ ನಾಪತ್ತೆಯಾಗಿದ್ದಾರೆ. ಡಿ.13ರಂದು ರಾತ್ರಿ 11 ಗಂಟೆಗೆ ಸುವರ್ಣ ತ್ರಿಭುಜ ಎಂಬ ಮೀನುಗಾರಿಕಾ ಬೋಟಿನಲ್ಲಿ ಹೋಗಿದ್ದ ಮೀನುಗಾರರು ಈ ವರೆಗೂ ಪತ್ತೆಯಾಗಿಲ್ಲ. ಬೋಟ್ ಮಾಲಕ ಚಂದ್ರ ಶೇಖರ, ಮೀನುಗಾರರಾದ ದಾಮೋದರ, ಲಕ್ಷ್ಮಣ್, ಸತೀಶ್, ರವಿ, ಹರೀಶ್, ರಮೇಶ್, ಜೋಗಯ್ಯ ನಾಪತ್ತೆಯಾದ ಮೀನುಗಾರರು. ಡಿ.15 ರ ರಾತ್ರಿ ಒಂದು ಗಂಟೆಯವರೆಗೆ ಸಂಪರ್ಕದಲ್ಲಿದ್ದ ಮೀನುಗಾರರು ನಂತರ ಸಂಪರ್ಕ ಸಿಗಲಿಲ್ಲ ಎನ್ನಲಾಗಿದೆ. ನಾಪತ್ತೆಯಾದ ಬೋಟು ಹಾಗೂ ಎಂಟು ಮಂದಿ ಮೀನುಗಾರರಿಗೆ ಹುಡುಕಾಟ […]
ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನಕ್ಕೆ ನಟ ಉಪೇಂದ್ರ ದಂಪತಿ ಭೇಟಿ
ಉಡುಪಿ: ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನಕ್ಕೆ ರಿಯಲ್ ಸ್ಟಾರ್ ಉಪೇಂದ್ರ, ಪತ್ನಿ ಪ್ರಿಯಾಂಕ ಉಪೇಂದ್ರ ಮತ್ತು ಕುಂಟುಬದವರು ಕುಲದೇವರಾದ ಶ್ರೀಗುರುನರಸಿಂಹ ದೇವರಿಗೆ ಭಾನುವಾರ ಭೇಟಿ ನೀಡಿ ಸೇವೆ ಸಲ್ಲಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ, ಕೋಶಾಧಿಕಾರಿ ಪ್ರಸನ್ನ ತುಂಗ ಮತ್ತು ಸದಸ್ಯ ಚಂದ್ರಶೇಖರ ಉಪಾಧ್ಯಾಯ ದೇವರ ಪ್ರಸಾದ ನೀಡಿ, ಗೌರವಿಸಿದರು.
ಹಾವುಗಳೊಂದಿಗೆ ಹುಟ್ಟುಹಬ್ಬ ಆಚರಿಸಿದ ಜೋರಾವರ್
ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್ಮನ್ ಶಿಖರ್ ಧವನ್ ಅವರ ಮಗ ಜೋರಾವರ್ ಶನಿವಾರ ತನ್ನ ಐದನೇ ವರ್ಷದ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡನು. ಕೇಕ್ ಕತ್ತರಿಸುವ ಸಂದರ್ಭದಲ್ಲಿ ಜೋರಾವರ್ ಕುತ್ತಿಗೆಯಲ್ಲಿ ಹೆಬ್ಬಾವು, ತಲೆ ಮೇಲೆ ಕಪ್ಪೆ ಮತ್ತು ಸ್ಕಿಂಕ್ (ಹಲ್ಲಿ ಜಾತಿಯ ಪ್ರಾಣಿ) ಇದ್ದವು. ಪ್ರಾಣಿ, ಪಕ್ಷಿಗಳೆಂದರೆ ಅಪಾರ ಇಷ್ಟಪಡುವ ಜೋರಾವರ್ಗಾಗಿ ಆತನ ತಾಯಿ ಅಯೇಷಾ ಮುಖರ್ಜಿ ಅವರು ಈ ಜನ್ಮದಿನದ ಪಾರ್ಟಿ ಏರ್ಪಡಿಸಿದ್ದರು. ಇದರಲ್ಲಿ ಆತನ ಶಾಲೆಯ ಸ್ನೇಹಿತರು ಮತ್ತಿತರರು ಭಾಗವಹಿಸಿದ್ದರು.