ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನಕ್ಕೆ ನಟ ಉಪೇಂದ್ರ ದಂಪತಿ ಭೇಟಿ

ಉಡುಪಿ: ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನಕ್ಕೆ ರಿಯಲ್ ಸ್ಟಾರ್ ಉಪೇಂದ್ರ, ಪತ್ನಿ ಪ್ರಿಯಾಂಕ ಉಪೇಂದ್ರ ಮತ್ತು ಕುಂಟುಬದವರು ಕುಲದೇವರಾದ ಶ್ರೀಗುರುನರಸಿಂಹ ದೇವರಿಗೆ ಭಾನುವಾರ ಭೇಟಿ ನೀಡಿ ಸೇವೆ ಸಲ್ಲಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ, ಕೋಶಾಧಿಕಾರಿ ಪ್ರಸನ್ನ ತುಂಗ ಮತ್ತು ಸದಸ್ಯ ಚಂದ್ರಶೇಖರ ಉಪಾಧ್ಯಾಯ ದೇವರ ಪ್ರಸಾದ ನೀಡಿ, ಗೌರವಿಸಿದರು.