ಡಿ.23 :ಪೆರ್ಡೂರಿನಲ್ಲಿ ಕುಲಾಲ ಸಂಭ್ರಮ: ಬೃಹತ್ ಸಮಾವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ: ಕುಲಾಲ ಸಂಘ (ರಿ.) ಪೆರ್ಡೂರು ಉಡುಪಿ ಜಿಲ್ಲೆ ಇದರ ‘ದಶಮಾನೋತ್ಸವ ಕುಲಾಲ ಸಂಭ್ರಮ 2018’ ಬೃಹತ್ ಸಮಾವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ ಡಿ.23 ರಂದು ಆದಿತ್ಯವಾರ ಪೆರ್ಡೂರು ಬುಕ್ಕಿಗುಡ್ಡೆಯ ಕುಲಾಲ ಸಭಾಭವನದಲ್ಲಿ  ನಡೆಯಲಿರುವುದು. ದಶಮಾನೋತ್ಸವ ಕುಲಾಲ ಸಂಭ್ರಮದ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಶ್ರೀ ಕ್ಷೇತ್ರ ಮಾಣಿಲ ಆವರಣ ಗೋಡೆ ಮತ್ತು ಸಮಾವೇಶ ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ, ಸಭಾಭವನದ ನವೀಕೃತ ವೇದಿಕೆಯನ್ನು ಉಸ್ತುವಾರಿ ಸಚಿವೆ ಡಾ.ಜಯಮಾಲಾ ಉದ್ಘಾಟಿಸಲಿದ್ದಾರೆ. ಕುಂಬಾರಿಕೆಯ ಪ್ರಾತ್ಯಕ್ಷಿಕೆಯ […]

ಎಂಕುಲ್ ಫ್ರೆಂಡ್ಸ್ ಕಲಾವಿದರು(ರಿ.) ಹಿರಿಯಡ್ಕ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಕೂಟ

ಹಿರಿಯಡ್ಕ: ಎಂಕುಲ್ ಫ್ರೆಂಡ್ಸ್ ಕಲಾವಿದರು(ರಿ.) ಹಿರಿಯಡ್ಕ ಇವರ ಆಶ್ರಯದಲ್ಲಿ 4ನೇ ವರ್ಷದ ಉಡುಪಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಕೂಟವು ದಿನಾಂಕ 22-12-2018 ರಿಂದ 23-12-2018 ರ ವರೆಗೆ ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜುನ ಮೈದಾನದಲ್ಲಿ  ನಡೆಯಲಿದೆ. ಶನಿವಾರ ಪೂರ್ವಾಹ್ನ10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಉದ್ಘಾಟಿಸಲಿದ್ದು, ಕಾಪು ಶಾಸಕ ಲಾಲಾಜಿ ಆರ್ […]

ಡಿ.24 ಕುಂದಾಪುರಕ್ಕೆ ಸಂಯಮೀಂದ್ರ ಸ್ವಾಮೀಜಿ ಭೇಟಿ

ಕುಂದಾಪುರ: ಶ್ರೀ ಸಂಸ್ಥಾನ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಡಿ. 24 ರಂದು ರಾತ್ರಿ 8.30ಕ್ಕೆ ಕುಂದಾಪುರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.