ಡಿ.23 :ಪೆರ್ಡೂರಿನಲ್ಲಿ ಕುಲಾಲ ಸಂಭ್ರಮ: ಬೃಹತ್ ಸಮಾವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ: ಕುಲಾಲ ಸಂಘ (ರಿ.) ಪೆರ್ಡೂರು ಉಡುಪಿ ಜಿಲ್ಲೆ ಇದರ ‘ದಶಮಾನೋತ್ಸವ ಕುಲಾಲ ಸಂಭ್ರಮ 2018’ ಬೃಹತ್ ಸಮಾವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ ಡಿ.23 ರಂದು ಆದಿತ್ಯವಾರ ಪೆರ್ಡೂರು ಬುಕ್ಕಿಗುಡ್ಡೆಯ ಕುಲಾಲ ಸಭಾಭವನದಲ್ಲಿ  ನಡೆಯಲಿರುವುದು.
ದಶಮಾನೋತ್ಸವ ಕುಲಾಲ ಸಂಭ್ರಮದ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಶ್ರೀ ಕ್ಷೇತ್ರ ಮಾಣಿಲ ಆವರಣ ಗೋಡೆ ಮತ್ತು ಸಮಾವೇಶ ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ, ಸಭಾಭವನದ ನವೀಕೃತ ವೇದಿಕೆಯನ್ನು ಉಸ್ತುವಾರಿ ಸಚಿವೆ ಡಾ.ಜಯಮಾಲಾ ಉದ್ಘಾಟಿಸಲಿದ್ದಾರೆ. ಕುಂಬಾರಿಕೆಯ ಪ್ರಾತ್ಯಕ್ಷಿಕೆಯ ಉದ್ಘಾಟನೆಯನ್ನು ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷ ಐತು ಕುಲಾಲ್ ಕನ್ಯಾನ ಇವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮ ಕುಲಾಲ್ ಪಕ್ ಕಾಲು ಇವರು ವಹಿಸಲಿದ್ದಾರೆ. ಕುಲಾಲ ಸಮಾಜ ವಸ್ತುಸ್ಥಿತಿ ದಿಕ್ಸೂಚಿ ಭಾಷಣವನ್ನು  ಶಿವಕುಮಾರ್ ಚೌಡ ಇವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶೋಭಾ ಕರಂದ್ಲಾಜೆ, ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪಚಂದ್ರ ಶೆಟ್ಟಿ, ಬೋಜೇಗೌಡ, ಪ್ರಮೋದ್ ಮಧ್ವರಾಜ್, ಉದಯ್ ಶೆಟ್ಟಿ ಮುನಿಯಾಲು, ಕಸ್ತೂರಿ ಪಂಜ, ಲಾಲಾಜಿ ಆರ್ ಮೆಂಡನ್, ವಿ. ಸುನಿಲ್ ಕುಮಾರ್, ಕೆ. ರಘುಪತಿ ಭಟ್, ವಿನಯ ಕುಮಾರ್ ಸೊರಕೆ, ಸುರೇಶ್ ಶೆಟ್ಟಿ ಗುರ್ಮೆ, ತೇಜಸ್ವಿ ರಾಜ್ ಮೊದಲಾದವರು ಭಾಗವಹಿಸಲಿದ್ದಾರೆ.
ಕುಲಾಲ ಸಮಾಜದ ಕಣ್ಮಣಿ ಗಳಿಗೆ ಗೌರವ ಸನ್ಮಾನ ಹಾಗೂ ಅಪರಾಹ್ನ 2:30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.