ಕಾರ್ಕಳದ ಬೈಲೂರಿನಲ್ಲಿ ಘೋರಿ ಪ್ರತ್ಯಕ್ಷ, ಶಾಂತಿ ಕದಡುವ ಯತ್ನ?
ಕಾರ್ಕಳ: ತಾಲೂಕಿನ ಬೈಲೂರು ಕೆಳಪೇಟೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಘೋರಿಯೊಂದು ಬುಧವಾರ ಬೆಳಿಗ್ಗೆ ಪ್ರತ್ಯಕ್ಷವಾಗಿದ್ದು ಘೋರಿಯನ್ನು ಸ್ಥಳೀಯ ಪಂಚಾಯತ್ ಪಿಡಿಒ ಹಾಗೂ ಕಾರ್ಕಳ ನಗರ ಠಾಣೆಯ ಪೊಲೀಸರ ನೇತ್ರತ್ವದಲ್ಲಿ ತೆರವು ಮಾಡಲಾಗಿದೆ. ಶಾಂತಿ ಕದಡುವ ಯತ್ನ:ಆರೋಪ : ಕೆಲವು ಸಮಯಗಳ ಹಿಂದೆ ಇದೇ ಜಾಗದಲ್ಲಿ ದರ್ಗಾ ಇತ್ತು. ಕಳೆದ 5 ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅದನ್ನು ತೆರವು ಮಾಡಲಾಗಿತ್ತು. ಆದರೆ ಮಂಗಳವಾರ ರಾತ್ರಿ ಮತ್ತೆ ಅಲ್ಲಿ ಘೋರಿ ತಂದು ಇಡಲಾಗಿದೆ. ಸ್ಥಳಕ್ಕೆ ಜಿ.ಪಂ. […]
ಉಡುಪಿ ಶ್ರೀ ಕೃಷ್ಣ ಮಠ: ಷಷ್ಠಿ ಪೂಜೆ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಸುಬ್ರಹ್ಮಣ್ಯ ಷಷ್ಠಿಯ ಪ್ರಯುಕ್ತ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆಯನ್ನು ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನೆರವೇರಿಸಿದರು.
ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ನೀವಿದನ್ನು ಮಾಡಲೇಬೇಕು: ಇಲ್ಲಿದೆ ಡಾ. ಹರ್ಷಾ ಕಾಮತ್ ಸಲಹೆ
ಚಳಿಗಾಲದಲ್ಲಿ ಪಾಲಿಸಬೇಕಾದ ಹಲವು ನಿಯಮಗಳು ಆಯುರ್ವೇದದಲ್ಲಿದೆ . ಇದನ್ನೇ ಋತುಚರ್ಯವೆಂದು ಕರೆಯುತ್ತಾರೆ. ನಾವು ಇದನ್ನು ಸರಿಯಾಗಿ ಪಾಲಿಸಿದರೆ ಮಾತ್ರ ಚಳಿಗಾಲದಲ್ಲಿ ಆರೋಗ್ಯದಿಂದಿರಲು ಸಾಧ್ಯ.ಕಾರ್ಕಳದ ಡಾ.ಹರ್ಷಾ ಕಾಮತ್ ಅವರು ಚಳಿಗಾಲದಲ್ಲಿ ಆರೋಗ್ಯವನ್ನು ಹೇಗಿಟ್ಟುಕೊಳ್ಳಬೇಕು? ಎನ್ನುವ ಕುರಿತು ಒಂದಷ್ಟು ಸಲಹೆ ನೀಡಿದ್ದಾರೆ. ಅವರ ಸಲಹೆ ಪ್ರಕಾರ ನಡೆದರೆ ನಿಮಗೇ ಲಾಭ. ಇಲ್ಲದಿದ್ದರೆ ನಿಮ್ಮ ಆರೋಗ್ಯಕ್ಕೆ ಲಾಸ್. ಚಳಿಗಾಲದಲ್ಲಿ ವಾತಾವರಣವು ಬಹಳ ತಂಪಾಗಿ ಶುಷ್ಕ ಹವೆಯಿಂದ ಕೂಡಿರುತ್ತದೆ.ಇದರಿಂದ ದೇಹದಲ್ಲಿ ಶುಷ್ಕತೆ ಹೆಚ್ಚಾಗಿ ಸಂದುನೋವು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಚಳಿಗಾಳಿಯಿಂದಾಗಿ ನೆಗಡಿ, ಕೆಮ್ಮು ಮುಂತಾದ […]
ಆರ್ಥಿಕ ಸಹಾಯ ನೀಡಿ ಸಹಕರಿಸಲು ಮನವಿ
ಕುಂದಾಪುರ: ಕುಂದಾಪುರ ಹಂಗ್ಲೂರು ನಿವಾಸಿ ಅಶೋಕ್ ಅವರ ಪತ್ನಿ ಸುಮನ ಅವರು ಆಸ್ಪತ್ರೆಯೊಂದರಲ್ಲಿ ದಾಖಲಾಗಿ ನ. 19 ರಂದು ತುರ್ತಾಗಿ ಸಿಸರಿನ್ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಅನಂತರ ಮೂತ್ರ ಪಿಂಡದ ತೀವ್ರ ತೊಂದರೆ ಯಿಂದ ತುರ್ತು ನಿಗಾ ವಿಭಾಗಕ್ಕೆ ದಾಖಲಾಗಿ ನ. 20ರಂದು ಲೇಪರೋಟಮ್ ಚಿಕಿತ್ಸೆಗೊಳಗಾಗಿದ್ದು, ದಿನಕ್ಕೆ ಹಲವು ಬಾರಿ ಡಯಾಲಿಸಸ್ ಗೊಳಗಾಗಬೇಕಾಗಿದೆ. ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯಲು ಸುಮಾರು 2 ಲಕ್ಷ ರೂ. ಹೆಚ್ಚಿನ ಖರ್ಚು ತಗುಲುತ್ತದೆ ಎಂಬುದಾಗಿ ತಜ್ಞ ವೈದ್ಯರು ಅಂದಾಜು ಮಾಡಿ ತಿಳಿಸಿದ್ದಾರೆ. ಅವರ ಪತಿ ಅಶೋಕ್ […]