ಡಿ.15: ಯರ್ಲಪಾಡಿಯಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ
ಕಾರ್ಕಳ: ಯರ್ಲಪಾಡಿ ಗ್ರಾ.ಪಂ. ಹಾಗೂ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಹೊನಲು ಬೆಳಕಿನ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟ ಸ್ವಚ್ಛ ಯರ್ಲಪಾಡಿ ಟ್ರೋಪಿ-೨೦೧೮ ಡಿ. ೧೫ ರಂದು ಯರ್ಲಪಾಡಿ ಹಿಲ್ ವಿವ್ ಗಾರ್ಡನ್ನಲ್ಲಿ ನಡೆಯಲಿದೆ. ಈ ಬಗ್ಗೆ ಪಂಚಾಯತ್ ಪಿಡಿಒ ಪ್ರಮೀಳಾ ಅವರು ಡಿ. ೧೩ರಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಸ್ವಚ್ಛಭಾರತ- ಸ್ವಚ್ಛ ಯರ್ಲಪಾಡಿ ಅಭಿಯಾನದಡಿ ಸ್ವಚ್ಛತೆಗಾಗಿ ಕ್ರೀಡೆಯನ್ನು ಗ್ರಾಮದ ಸುಮಾರು ೬೪ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ. ಆ ಮೂಲಕ ಸಂಪನ್ಮೂಲವನ್ನು ಕ್ರೋಢಿಕರಣ ಮಾಡಿ ಪಂಚಾಯತ್ ಮೂಲ ಸೌಕರ್ಯವನ್ನು ಉತ್ತಮ […]
ವಿಶ್ವಕಪ್ ಹಾಕಿ: ಕ್ವಾರ್ಟರ್ ಫೈನಲ್ ,ಭಾರತ ತಂಡ 43 ವರ್ಷಗಳ ಕನಸು ಭಗ್ನ
ಹಾಕಿಯಲ್ಲಿ ಭಾರತ ಭವ್ಯ ಪರಂಪರೆ ಹೊಂದಿರುವ ಹೊರತಾಗಿಯೂ ವಿಶ್ವಕಪ್ನಲ್ಲಿ ಇದಕ್ಕೂ ಮೊದಲು ಸೆಮಿಫೈನಲ್ ಹಂತ ಪ್ರವೇಶಿಸಿರುವುದ್ದುದು 43 ವರ್ಷಗಳ ಹಿಂದೆ. ವಿಶ್ವಕಪ್ ಹಾಕಿ ಭಾರತ ತಂಡ 43 ವರ್ಷಗಳ ಬಳಿಕ ಪ್ರಶಸ್ತಿ ಜಯಿಸುವ ಮಹತ್ವಾಕಾಂಕ್ಷೆ ಕನಸು ಇದೀಗ ಭಗ್ನಗೊಂಡಿದೆ. ಬುಧವಾರ ರಾತ್ರಿ ಭುವನೇಶ್ವರದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಭಾರತ ತಂಡ 2-1 ಗೋಲುಗಳ ಅಂತರದಲ್ಲಿ ವಿರೋಚಿತ ಸೋಲು ಅನುಭವಿಸಿತು. ಆರಂಭದಿಂದ ಅಂತ್ಯದವರೆಗೂ ಆಖ್ರಮಣಕಾರಿ ಆಟವಾಡಿದರೂ ಭಾರತ ತಂಡಕ್ಕೆ ನೆದರ್ಲೆಂಡ್ ತಂಡದ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.
ಶ್ರೀಕೃಷ್ಣಮಠದಲ್ಲಿ ಎಡೆಸ್ನಾನ ಪದ್ಧತಿಗೆ ಬ್ರೇಕ್ :ವಿದ್ಯಾಧೀಶ ಸ್ವಾಮೀಜಿಯವರ ಮಹತ್ವದ ನಿರ್ಧಾರ
ಉಡುಪಿ: ಚಂಪಾ ಷಷ್ಠಿಯ ಪ್ರಯುಕ್ತ ಇಲ್ಲಿನ ಶ್ರೀಕೃಷ್ಣಮಠದ ಸುಬ್ರಹ್ಮಣ್ಯ ಗುಡಿಯ ಆವರಣದಲ್ಲಿ ಮಡೆಸ್ನಾನದ ಬದಲಾಗಿ ನೆರವೇರಿಸಿಕೊಂಡು ಬರಲಾಗುತ್ತಿದ್ದ ಎಡೆಸ್ನಾನ ಪದ್ಧತಿಗೆ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ತೆರೆ ಎಳೆದಿದ್ದಾರೆ. ಇಲ್ಲಿನ ಸುಬ್ರಹ್ಮಣ್ಯ ಗುಡಿ ಹಾಗೂ ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಮುಚ್ಲುಕೋಡು ಸುಬ್ರಹ್ಮಣ್ಯ ಮಠದಲ್ಲಿ ಕೆಲ ವರ್ಷಗಳ ಹಿಂದೆ ಮಡೆಸ್ನಾನ ಪದ್ಧತಿಯನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ತಿನ್ನುವ ಅನ್ನದ ಮೇಲೆ ಉರುಳು ಸೇವೆ ಕೆಲವರಿಗೆ ಇಷ್ಟವಿಲ್ಲದ ಕಾರಣದಿಂದ ಹಾಗೂ ಈ ಪದ್ದತಿ ವಿವಾದದ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳ […]
ಮುಚ್ಲುಗೋಡು: ಷಷ್ಠಿ ಮಹೋತ್ಸವದ ಸಂಭ್ರಮ
ಉಡುಪಿ: ಪಂಚಾ ಷಷ್ಠಿಯ ಪ್ರಯುಕ್ತ ಉಡುಪಿಯ ಮುಚ್ಲುಗೋಡು ಹಾಗು ಸಗ್ರಿ ಸುಬ್ರಹ್ಮಣ್ಯ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿತು.ಬೆಳಗ್ಗೆಯೇ ಆಗಮಿಸಿದ ಭಕ್ತರು ದೇವರಿಗೆ ಹಣ್ಣುಕಾಯಿ ಅರ್ಪಿಸಿದರು. ಹರಕೆಯನ್ನು ಹೊತ್ತಿದ್ದ ಕೆಲ ಭಕ್ತರು ದೇವರಿಗೆ ಅರ್ಪಿಸಿದ ನೈವೇಧ್ಯದ ಎಲೆಯಲ್ಲಿ ಉರುಳು ಸೇವೆ ಮಾಡಿ, ತಮ್ಮ ಹರಕೆಯನ್ನು ದೇವರಿಗೆ ಸಮರ್ಪಿಸಿದರು.ಪ್ರತಿ ವರ್ಷದಂತೆ ದೇವಸ್ಥಾನದ ಆವರಣದಲ್ಲಿ ಜರುಗುವ ಜಾತ್ರೆಗೆ ನೂರಾರು ಭಕ್ತರು ಆಗಮಿಸಿ, ವಿವಿಧ ತಿನಿಸು, ಮಿಠಾಯಿಗಳನ್ನು ಖರೀದಿಸಿದರು. ಸಂಜೆ ವೇಳೆ ನಡೆಯುವ ರಥೋತ್ಸವದಲ್ಲಿ ನೂರಾರು ಜನರು ಪಾಲ್ಗೊಂಡರು.
ಉಡುಪಿ ಜಿಲ್ಲೆ: 258 ಕೋಟಿ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಆರಂಭ
ಉಡುಪಿ: ಜಿಲ್ಲೆಯ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ವಾಣಿಜ್ಯ ಬ್ಯಾಂಕ್ಗಳಲ್ಲಿ ಪಡೆದಿರುವ 258 ಕೋಟಿ ರೂ. ಗಳ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಆರಂಭಗೊಂಡಿದ್ದು, ಈಗಾಗಲೇ ಕಾರ್ಕಳ ತಾಲೂಕಿನ 15 ರೈತರು ಪ್ರಯೋಜನ ಪಡೆದಿದ್ದಾರೆ. ರೈತರು ತಮ್ಮ ಹೆಸರುಗಳನ್ನು ನೊಂದಾಯಿಸಲು ಇಂದಿನಿಂದ 2019 ರ ಜನವರಿ 10 ರ ವರೆಗೆ ಕಾಲಾವಕಾಶ ಇದೆ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದ್ದಾರೆ. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಯೋಜನೆಯ […]