ವಿಶ್ವಕಪ್‌ ಹಾಕಿ: ಕ್ವಾರ್ಟರ್‌ ಫೈನಲ್‌ ,ಭಾರತ ತಂಡ 43 ವರ್ಷಗಳ ಕನಸು ಭಗ್ನ

ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ನೆದರ್‌ಲೆಂಡ್‌ ವಿರುದ್ಧ ಭಾರತ ತಂಡ 2-1 ಗೋಲುಗಳ ಅಂತರದಲ್ಲಿ ವಿರೋಚಿತ ಸೋಲು

ಹಾಕಿಯಲ್ಲಿ ಭಾರತ ಭವ್ಯ ಪರಂಪರೆ ಹೊಂದಿರುವ ಹೊರತಾಗಿಯೂ ವಿಶ್ವಕಪ್‌ನಲ್ಲಿ ಇದಕ್ಕೂ ಮೊದಲು ಸೆಮಿಫೈನಲ್‌ ಹಂತ ಪ್ರವೇಶಿಸಿರುವುದ್ದುದು 43 ವರ್ಷಗಳ ಹಿಂದೆ. ವಿಶ್ವಕಪ್‌ ಹಾಕಿ ಭಾರತ ತಂಡ  43 ವರ್ಷಗಳ ಬಳಿಕ ಪ್ರಶಸ್ತಿ ಜಯಿಸುವ ಮಹತ್ವಾಕಾಂಕ್ಷೆ ಕನಸು ಇದೀಗ ಭಗ್ನಗೊಂಡಿದೆ.

ಬುಧವಾರ ರಾತ್ರಿ ಭುವನೇಶ್ವರದಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ನೆದರ್‌ಲೆಂಡ್‌ ವಿರುದ್ಧ ಭಾರತ ತಂಡ 2-1 ಗೋಲುಗಳ ಅಂತರದಲ್ಲಿ ವಿರೋಚಿತ ಸೋಲು ಅನುಭವಿಸಿತು. 

ಆರಂಭದಿಂದ ಅಂತ್ಯದವರೆಗೂ ಆಖ್ರಮಣಕಾರಿ ಆಟವಾಡಿದರೂ ಭಾರತ ತಂಡಕ್ಕೆ ನೆದರ್‌ಲೆಂಡ್‌ ತಂಡದ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.