ಉಡುಪಿ: ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿಕೊಂಡು ಪದ್ಮಾಸನ ಭಂಗಿಯಲ್ಲಿ ದೈತ್ಯಾಕಾರದ ಅಲೆಗಳಿಗೆ ಎದೆವೊಡ್ಡಿ ಕಡಲಿನಲ್ಲಿ 1.4 ಕಿ.ಮೀ. ದೂರ ಈಜುವ ಮೂಲಕ 65ರ ಹರೆಯದ ಹಿರಿಯ ಈಜುಪಟು ಗಂಗಾಧರ್ ಜಿ. ಕಡೆಕಾರ್ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಗಂಗಾಧರ್ ಅವರು 1.400 ಕಿ.ಮೀ ದೂರವನ್ನು 1.13.03 ಗಂಟೆಯಲ್ಲಿ ತಲುಪುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇದು ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾದ ಪ್ರಥಮ ದಾಖಲೆಯಾಗಿದೆ. ಗಂಗಾಧರ್ ಪಡುಕರೆಯ ಕಡಲ ಕಿನಾರೆಯಲ್ಲಿ ಈ ಸಾಹಸವನ್ನು ತೋರಿದ್ದಾರೆ.