ಬ್ರಹ್ಮಾವರ: ಇತಿಹಾಸ ಪ್ರಸಿದ್ಧ ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ, ಬಬ್ಬುಸ್ವಾಮಿ ಮೂಲ ಕ್ಷೇತ್ರದಲ್ಲಿ ಶನಿವಾರ ವಿಜಯದಶಮಿ ಪ್ರಯುಕ್ತ ಸಾಮೂಹಿಕ ಚಂಡಿಕಾ ಯಾಗ, ತುಲಬಾರ ಸೇವೆ, ವಿವಿಧ ತಂಡಗಳಿಂದ ಭಜನಾ ಸೇವೆ, ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
1 ಗಂಟೆಯಿಂದ ಆಕಾಶವಾಣಿ ಕಲಾವಿದ ಶ್ರೀ ತಿಮ್ಮಪ್ಪ ಕರ್ಕೇರ ಸಾಲಿಗ್ರಾಮ ಹಾಗೂ ಬಳಗದಿಂದ ಸುಗಮ ಸಂಗೀತ ಕಾರ್ಯಕ್ರಮ ಜರಗಲಿದೆ. ಸಾಮೂಹಿಕ ಚಂಡಿಕಾ ಯಾಗ ಸೇವೆಯಲ್ಲಿ ಸುಮಾರು 200 ಅಧಿಕ ಸೇವಕರ್ತರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.