ಉಡುಪಿ:ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣಗುಡ್ಡೆಯಲ್ಲಿ ಸ್ವರ್ಣ ತ್ರಿಶೂಲ ಸಮರ್ಪಣೆ

ಉಡುಪಿ: ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರ್ಣಿಕ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ನೇತೃತ್ವದಲ್ಲಿ ಬಹು ವಿಜೃಂಭಣೆಯಿಂದ ಸಂಪನ್ನಗೊಳ್ಳುತ್ತಿದೆ. ದುರ್ಗಾಷ್ಟಮಿಯ ಪರ್ವ ಕಾಲದಲ್ಲಿ ಶ್ರೀ ಕ್ಷೇತ್ರಕ್ಕೆ ಹರಕೆಯ ರೂಪದಲ್ಲಿ ಭಕ್ತರು ಚಿನ್ನದ ತ್ರಿಶೂಲವನ್ನು ಸಮರ್ಪಿಸಿದರು.. ಜೋಡಿ ಚಂಡಿಕಾಯಾಗದಲ್ಲಿ ಒಂದು ಯಾಗವು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಮತ್ತು ನಾಗರಾಜ ದಂಪತಿಗಳಿಂದ ಸಮರ್ಪಿತವಾಯಿತು ಮತ್ತೊಂದು ಚಂಡಿಕಾಯಾಗ ಶ್ರೀ ರಾಜೇಂದ್ರ ಪ್ರಸಾದ್ ಮತ್ತು ಶ್ರೀಮತಿ […]

ಉಡುಪಿ ಮಿಷನ್ ಆಸ್ಪತ್ರೆಯ ನೂತನ ಎಲ್‌ಎಂಎಚ್ ಕ್ಯಾಂಟೀನ್ ಉದ್ಘಾಟನೆ

ಉಡುಪಿ: ಉಡುಪಿಯ ಲೋಂಬಾರ್ಡ್ ಮೆಮೋರಿಯಲ್ ಹಾಸ್ಪಿಟಲ್(ಮಿಷನ್ ಆಸ್ಪತ್ರೆ) ಆವರಣದಲ್ಲಿ ನೂತನವಾಗಿ ಆರಂಭಿಸಲಾದ ಎಲ್‌ಎಂಎಚ್ ಕ್ಯಾಂಟೀನ್(ಡಾಕ್ಟರ್ಸ್‌ ಕಿಚನ್) ಗುರುವಾರ ಉದ್ಘಾಟನೆಗೊಂಡಿತು. ಡಾಕ್ಟರ್ಸ್ ಕಿಚನ್ ಉದ್ಘಾಟಿಸಿ ಮಾತನಾಡಿದ ಸಿಎಸ್‌ಐ- ಕೆಎಸ್‌ಡಿಯ ಬಿಷಪ್ ಹೇಮಚಂದ್ರ ಕುಮಾರ್ ಅವರು, ದೇವರ ಆಶೀರ್ವಾದ ಹಾಗೂ ಪರಿಶ್ರಮ ಇದ್ದರೆ ಯಾವುದೇ ಕಾರ್ಯ ಯಶಸ್ವಿಯಾಗುತ್ತದೆ. ಕಂಡ ಕನಸನ್ನು ನನಸು ಮಾಡಬೇಕಾದರೆ ಸಾಧಿಸುವ ಛಲ ಹಾಗೂ ದೃಢ ವಿಶ್ವಾಸ ಅಗತ್ಯ. ಸುಸಜ್ಜಿತ ಹಾಗೂ ಶುಚಿತ್ವದಿಂದ ಕೂಡಿರುವ ಈ ಕ್ಯಾಂಟಿನ್ ಉತ್ತಮ ಆಹಾರ ಒದಗಿಸಲಿ ಎಂದು ಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ […]

ಅಕ್ರಮ ಪಟಾಕಿ ದಾಸ್ತಾನು ಇಟ್ಟಿದ್ದ ಮನೆಗೆ ಪೊಲೀಸರ ದಾಳಿ; 4 ಲಕ್ಷ ರೂ. ಮೌಲ್ಯದ ಪಟಾಕಿ ವಶ

ಉಡುಪಿ: ಅಕ್ರಮವಾಗಿ ಪಟಾಕಿ ದಾಸ್ತಾನಿಟ್ಟ ಆರೋಪದಲ್ಲಿ ಮನೆಯೊಂದಕ್ಕೆ ದಾಳಿ ನಡೆಸಿದ ಬೈಂದೂರು ಪೊಲೀಸರು 4 ಲಕ್ಷ ರೂ. ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡ ಘಟನೆ ಬೈಂದೂರು ತಾಲೂಕಿನ ಉಪ್ಪುಂದದ ಕಂಚಿಕಾನ್ ಎಂಬಲ್ಲಿ ನಡೆದಿದೆ. ಉಪ್ಪುಂದದ ಕಂಚಿಕಾನ್ ಎಂಬಲ್ಲಿನ ದತ್ತಾತ್ರೇಯ ಶೇಟ್ ಎಂಬಾತ ಪಟಾಕಿ ಅಕ್ರಮ ದಾಸ್ತಾನು ಮಾಡಿಟ್ಟುಕೊಂಡ ಆರೋಪಿ. ದತ್ತಾತ್ರೇಯ ಶೇಟ್ ಈ ಹಿಂದಿನಿಂದಲೂ ದೀಪಾವಳಿ ಹಾಗೂ ಚೌತಿ ಹಬ್ಬದ ಸಂದರ್ಭ ಪಟಾಕಿ ಮಾರಾಟ ಮಾಡುತ್ತಿದ್ದರು. ಇವರು ಪಟಾಕಿ ಅಕ್ರಮ ದಾಸ್ತಾನು ಇಟ್ಟಿರುವುದರ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು […]

ಕುಂದಾಪುರ: ರೈಲು ಢಿಕ್ಕಿ ಹೊಡೆದು ಚಿರತೆ ಮೃತ್ಯು

ಉಡುಪಿ: ರೈಲು ಢಿಕ್ಕಿ ಹೊಡೆದು ಚಿರತೆಯೊಂದು ಸಾವನ್ನಪ್ಪಿದ ಘಟನೆ ನಾಡ ಗ್ರಾಮದ ಬಡಾಕೆರೆಯ ಸೌಪರ್ಣಿಕ ನದಿಗೆ ನಿರ್ಮಿಸಲಾದ ರೈಲ್ವೆ ಮೇಲ್ಸೇತುವೆಯಲ್ಲಿ ಸಂಭವಿಸಿದೆ. ರೈಲ್ವೆ ಹಳಿ‌ ದಾಟುತ್ತಿರುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಐದು ವರ್ಷ ಪ್ರಾಯದ ಗಂಡು ಚಿರತೆ ಇದಾಗಿದ್ದು, ಈ ಭಾಗದಲ್ಲಿ ಅರಣ್ಯ ಪ್ರದೇಶ ಹಾಗೂ ಗೇರು ಪ್ಲಾಂಟೇಶನ್ ಇರುವ ಕಾರಣ ಕಾಡಿನಿಂದ ಆಹಾರ ಅರಸಿಕೊಂಡು ಬಂದಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಬುಧವಾರ ಬೆಳಗ್ಗೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, […]

ಉಡುಪಿ ಮತ್ತು ಮಂಗಳೂರಿನ ಅತಿದೊಡ್ಡ ಜ್ಯುವೆಲ್ಲರಿ ಶೋರೂಮ್ ಗಳಲ್ಲಿ ವಿವಿಧ ಹುದ್ದೆಗಳಿಗೆ ತಕ್ಷಣ ಬೇಕಾಗಿದ್ದಾರೆ.

ಉಡುಪಿ: ಉಡುಪಿ ಮಣಿಪಾಲ ಮಂಗಳೂರಿನ ಅತಿ ದೊಡ್ಡ ಜ್ಯುವೆಲ್ಲರಿ ಶೋರೂಮ್ನಲ್ಲಿ ವಿವಿಧ ಹುದ್ದೆಗಳಿಗೆ ತಕ್ಷಣ ನೇಮಕಾತಿ ನಡೆಯಲಿದೆ. ಹುದ್ದೆಗಳು: 1.ಸೇಲ್ಸ್ ಎಕ್ಸಿಕ್ಯೂಟಿವ್ M/F – 20 Posts 2.ಅಕೌಂಟ್ಸ್ ಎಕ್ಸಿಕ್ಯೂಟಿವ್ – 4 Posts 3.ಸ್ಟೋರ್ ಅಸಿಸ್ಟೆಂಟ್ – 4 Post 4.ಎಲೆಕ್ಟ್ರೀಷಿಯನ್ – 4 Posts 5.ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ – 10 Posts 6.ಸೆಕ್ಯೂರಿಟಿ ಗಾರ್ಡ್ – 10 Post ಆಕರ್ಷಕ ವೇತನದೊಂದಿಗೆ ಇತರೆ ಸೌಲಭ್ಯಗಳನ್ನು ಒದಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7975861846, 7019891796, […]