೧ ರೂಪಾಯಿಯಲ್ಲಿ ಪಿ ಯು ವ್ಯಾಸಂಗ ಮಾಡುವ ಸದಾವಕಾಶ

ಪ್ರತೀ ವರ್ಷದಂತೆ ತ್ರಿಶಾ ಸಂಸ್ಥೆಯು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಒದಗಿಸುತ್ತಿದ್ದು, ಈ ಬಾರಿ ವಿನೂತನವಾಗಿ ಎಸ್.ಎಸ್. ಎಲ್. ಸಿ. ಯಲ್ಲಿ 615 ಕ್ಕಿಂತ ಹೆಚ್ಚಿನ ಅಂಕ ಗಳಿಸಿದವರಿಗೆ ಒಂದು ರೂಪಾಯಿಯ ವೆಚ್ಚದಲ್ಲಿ ಪಿ ಯು ಸಿ ಅಧ್ಯಯನ ಮಾಡುವ ಸುವರ್ಣಾವಕಾಶ ಒದಗಿಸಿದೆ. ಅದಲ್ಲದೆ 560 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಕರ್ಷಕ ವಿದ್ಯಾರ್ಥಿ ವೇತನ ಪಡೆಯುವ ಅವಕಾಶವಿದೆ.

ಕಳೆದ ಇಪ್ಪತ್ತೈದು ವರ್ಷಗಳಿಂದ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ತ್ರಿಶಾ ಸಂಸ್ಥೆ ಇತ್ತೀಚಿನ ಬದಲಾವಣೆಗಳ ಅನುಸಾರ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸಬೇಕು ಎನ್ನುವ ನಿಟ್ಟಿನಲ್ಲಿ ಉಡುಪಿಯ ಕಟಪಾಡಿ ಹಾಗೂ ಮಂಗಳೂರಿನ ಯೆಯ್ಯಾಡಿಯಲ್ಲಿ ಪದವಿಪೂರ್ವ ಕಾಲೇಜನ್ನು ಸ್ಥಾಪಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ.

ತ್ರಿಶಾ ವಿದ್ಯಾ ಪಿಯು ಕಾಲೇಜು ಕಟಪಾಡಿ ಉಡುಪಿ :
ಸಂಸ್ಥೆಯು ಕಟಪಾಡಿಯಲ್ಲಿ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು ನಡೆಸುತ್ತಿದ್ದು ಪಿ.ಸಿ.ಎಂ.ಬಿ ಮತ್ತು ಪಿ.ಸಿ.ಎಂ.ಸಿಎಸ್ ವಿಭಾಗಗಳಲ್ಲಿ ಶಿಕ್ಷಣ ನೀಡುತ್ತಿದ್ದು ಜೊತೆಗೆ ಜೆ.ಈ.ಈ, ನೀಟ್, ಸಿ.ಈ.ಟಿ ತರಬೇತಿಯನ್ನು ಭಾರತದ ಪ್ರತಿಷ್ಠಿತ ವಿಜ್ಞಾನ ಶಿಕ್ಷಣ ಸಂಸ್ಥೆಯಾದ ವೇದಾಂತು ದೀಕ್ಷಾ ಸಹಯೋಗದೊಂದಿಗೆ ನೀಡುತ್ತಿದೆ ಹಾಗೂ ವಾಣಿಜ್ಯ ವಿಭಾಗದಲ್ಲಿ ಬಿ.ಎಸ್.ಬಿ.ಎ ಮತ್ತು ಎಸ್.ಇ.ಬಿ.ಎ ಮತ್ತು ಸಿಎಸ್.ಇ.ಬಿ. ವಿಭಾಗದ ಜೊತೆಗೆ ಸಿ.ಎ ಮತ್ತು ಸಿ.ಎಸ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿ ವತಿಯಿಂದ ನೀಡುತ್ತಿದೆ.

ಶ್ರೀ ರಾಮಾಶ್ರಮ ಪದವಿ ಪೂರ್ವ ಕಾಲೇಜು ಯೆಯ್ಯಾಡಿ ( ತ್ರಿಶಾ ಸಂಸ್ಥೆಯ ನೂತನ ಆಡಳಿತದೊಂದಿಗೆ):
ಮಂಗಳೂರಿನ ಯೆಯ್ಯಾಡಿಯಲ್ಲಿ ಶ್ರೀ ರಾಮಾಶ್ರಮ ಪದವಿ ಪೂರ್ವ ಕಾಲೇಜನ್ನು ನಡೆಸುತ್ತಿದ್ದು ವಾಣಿಜ್ಯ ವಿಭಾಗದಲ್ಲಿ ಬಿ.ಎಸ್.ಬಿ.ಎ ಮತ್ತು ಎಸ್.ಇ.ಬಿ.ಎ ವಿಭಾಗದ ಜೊತೆಗೆ ವೃತ್ತಿಪರ ಕೋರ್ಸ್ ಗಳಾದ ಸಿ.ಎ ಮತ್ತು ಸಿ.ಎಸ್ ತರಬೇತಿಯನ್ನು ಹಾಗೂ ವಿಶೇಷವಾಗಿ ಐ.ಪಿ.ಎಂ. ಎ.ಟಿ (IPMAT) ಮತ್ತು ಸಿ.ಎಲ್.ಎ.ಟಿ (CLAT) ತರಬೇತಿಯನ್ನು ನೀಡುತ್ತಿದ್ದು ವಿದ್ಯಾರ್ಥಿಗಳ ನೆಚ್ಚಿನ ಸಂಸ್ಥೆಯಾಗಿ ಬೆಳೆದಿದೆ.

ವಿಶೇಷವೆಂಬಂತೆ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದ ಯಾವ ವಿಷಯ ಜ್ಞಾನದಿಂದಲೂ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಬಿ.ಎಸ್.ಬಿ.ಎ ವಿಭಾಗದಲ್ಲಿ ಅರ್ಥಶಾಸ್ತ್ರ, (ಎಕನಾಮಿಕ್ಸ್) ವಿಷಯವನ್ನು ಮತ್ತು ಎಸ್.ಈ.ಬಿ.ಎ ವಿಭಾಗದಲ್ಲಿ ಗಣಿತ (ಬೇಸಿಕ್ ಮ್ಯಾಥ್ಸ್) ವಿಷಯವನ್ನು ಹೆಚ್ಚುವರಿಯಾಗಿ ಉಚಿತವಾಗಿ ಕಲಿಸಲಾಗುವುದು.

ವೈಶಿಷ್ಟ್ಯಗಳು:
• ನುರಿತ ಹಾಗೂ ಅನುಭವಿ ಅಧ್ಯಾಪಕ ವೃಂದ
• ಫಲಿತಾಂಶ ಆಧಾರಿತ ತರಬೇತಿಗಳು
• ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯದ (ಹಾಸ್ಟೆಲ್) ವ್ಯವಸ್ಥೆ
• ವಾಹನದ ವ್ಯವಸ್ಥೆ
• ಸುಸಜ್ಜಿತ ಕೊಠಡಿಗಳು ಹಾಗೂ ಆಟದ ಮೈದಾನದ ವ್ಯವಸ್ಥೆ.

ಬದಲಾಗುತ್ತಿರುವ ಸ್ಪಾರ್ಧತ್ಮಕ ಜಗತ್ತಿನಲ್ಲಿ ಪಿಯುಸಿ ಮಟ್ಟದಲ್ಲಿಯೇ ವ್ಯವಹಾರ ಕ್ಷೇತ್ರಕ್ಕೆ, ಉದ್ಯೋಗ ಕ್ಷೇತ್ರಕ್ಕೆ ಹಾಗೂ ವಿವಿಧ ವೃತ್ತಿಪರ ಕೋರ್ಸಗಳನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳನ್ನು ವಿವಿಧ ವಿಧಾನಗಳ ಮೂಲಕ ತಯಾರು ಗೊಳಿಸಲಾಗುತ್ತಿದೆ.
ಕೇವಲ ಪಠ್ಯದ ವಿಷಯಗಳು ಮಾತ್ರ ಅಲ್ಲದೆ ಕ್ರೀಡೆ ಮತ್ತು ಇನ್ನಿತರ ಪಠ್ಯೇತರ ವಿಚಾರಗಳಿಗೂ ಪ್ರಾಮುಖ್ಯತೆ ನೀಡುತ್ತಿದ್ದು ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯನ್ನು ಗುರಿಯಾಗಿಸಿಕೊಂಡು ಸಂಸ್ಥೆಯು ಕಾರ್ಯನಿರ್ವಹಿವುದು ಸಂಸ್ಥೆಯ ಉದ್ದೇಶವಾಗಿದ್ದು ಪ್ರಸ್ತುತ ಶೈಕ್ಷಣಿಕ ಸಾಲಿನ ತರಗತಿಗಳಿಗೆ ಪ್ರವೇಶಾತಿ ಆರಂಭವಾಗಿದೆ. ಆಸಕ್ತರು ಕಾಲೇಜು ಕಛೇರಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.