ಬ್ಯಾನರ್ ಕಟ್ಟುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಯುವಕ ಮೃತ್ಯು.

ಮಡಿಕೇರಿ: ಕ್ರಿಕೆಟ್ ಪಂದ್ಯಾವಳಿಯ ಬ್ಯಾನರ್ ಕಟ್ಟುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಮೂರ್ನಾಡು ಪಟ್ಟಣದಲ್ಲಿ ರಾತ್ರಿ ನಡೆದಿದೆ. ಮೂರ್ನಾಡು ನಿವಾಸಿ ಆರಿಫ್ (34) ಮೃತಪಟ್ಟ ಯುವಕ.ಮೂರ್ನಾಡಿನಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯೊಂದಕ್ಕೆ ಸಂಬಂಧಿಸಿ ಆರಿಫ್ ಸೇರಿದಂತೆ ಸಂಘಟಕ ಯುವಕರು ಶುಕ್ರವಾರ ರಾತ್ರಿ ಬ್ಯಾನರ್ ಕಟ್ಟುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಬ್ಯಾನರ್ ಕಟ್ಟುತ್ತಿದ್ದ ವೇಳೆ ಆರಿಫ್ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯ ಸ್ಪರ್ಶಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ಜೊತೆಯಲ್ಲಿದ್ದ ಯುವಕರು ಅಪಾಯದಿಂದ […]

ಕೊಂಕಣ್ ಸ್ಪೋರ್ಟ್ಸ್ ಹಾಗೂ ಕಲ್ಚರಲ್ ಅಸೋಸಿಯೇಷನ್ (ರಿ) ಕೋಟೇಶ್ವರದ ವತಿಯಿಂದ ಜಿಎಸ್‌ಬಿ ಸಮಾಜ ಬಾಂಧವರಿಗೆ 40 ಗಜಗಳ ಕ್ರಿಕೆಟ್ ಪಂದ್ಯಾಟ

ಕುಂದಾಪುರ: ಕೊಂಕಣ್ ಸ್ಪೋರ್ಟ್ಸ್ ಹಾಗೂ ಕಲ್ಚರಲ್ ಅಸೋಸಿಯೇಷನ್ (ರಿ) ಕೋಟೇಶ್ವರದ ವತಿಯಿಂದ ಜಿಎಸ್‌ಬಿ ಸಮಾಜ ಬಾಂಧವರಿಗೆ 40 ಗಜಗಳ ಕ್ರಿಕೆಟ್ ಪಂದ್ಯಾಟ ರೋಯ್ಸ್ ಯುಪಿವಿಸಿ ಡೋರ್ಸ್ & ವಿಂಡೋಸ್ ಕೊಂಕಣ್ ಎಕ್ಸಪ್ರೆಸ್ ಪ್ರೀಮಿಯರ್ ಲೀಗ್ 2024 ಕೋಟೇಶ್ವರ ಕೆಪಿಎಸ್ ಶಾಲಾ ಮೈದಾನದಲ್ಲಿ ಇಂದು ಆರಂಭಗೊಂಡಿತು. ಎರಡು ದಿನಗಳ ಈ ಕ್ರಿಕೆಟ್‌‌ ಪಂದ್ಯಕೂಟದಲ್ಲಿ ಉಭಯ ಜಿಲ್ಲೆಗಳ 12 ತಂಡಗಳಲ್ಲಿ 120 ಆಟಗಾರರು ಲೀಗ್ ಮಾದರಿಯ ಪಂದ್ಯಾಟದಲ್ಲಿ ಆಡಲಿದ್ದಾರೆ. ದೀಪ ಪ್ರಜ್ವಲನೆಯೊಂದಿಗೆ ನಡೆದ ಸರಳ ಉದ್ಘಾಟನಾ ಸಮಾರಂಭದಲ್ಲಿ ಬಸ್ರೂರು ಶ್ರೀ […]

ಕುಂಜಾರುಗಿರಿ ಶ್ರೀ ಪರಶುರಾಮ ದೇವಸ್ಥಾನದಲ್ಲಿ ರಥೋತ್ಸವ ಹಾಗೂ ಜಯಂತ್ಯುತ್ಸವ.

ಉಡುಪಿ: ಕುಂಜಾರುಗಿರಿ ಶ್ರೀ ಪರಶುರಾಮ ದೇವಸ್ಥಾನದಲ್ಲಿ ಅಕ್ಷಯ ತೃತೀಯ ಹಾಗೂ ಪರಶುರಾಮ ಜಯಂತಿಯಂದು ರಥೋತ್ಸವ ಹಾಗೂ ಜಯಂತ್ಯುತ್ಸವವು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಬಣೆಯಿಂದ ಜರುಗಿತು. ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿ, ಪಾಡಿಗಾರು ಶ್ರೀ ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ಭಜನಾ ಮಂಡಳಿಗಳ ಭಜನಾ ಕಾರ್ಯಕ್ರಮದೊಂದಿಗೆ ಅನ್ನಸಂತರ್ಪಣೆಯು ನಡೆಯಿತು.

ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನ.

ಉಡುಪಿ: ಬಂಟಕಲ್ಲಿನ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 11ನೇ ಪ್ರಾಜೆಕ್ಟ್ ಸ್ಪರ್ಧೆ ಮತ್ತು ಪ್ರದರ್ಶನ 10 ಮೇ 2024ರಂದು ಸಂಸ್ಥೆಯ ಆವರಣದಲ್ಲಿ ನಡೆಯಿತು. ಕಾಲೇಜಿನ ಪಠ್ಯೇತರ ಘಟಕ, ಐಎಸ್‍ಟಿಇ ಘಟಕವು ಸಂಸ್ಥೆಯ ಇನ್ಸ್ಟ್‍ಟ್ಯೂಟ್ ಇನ್ನೋವೇಶನ್ ಕೌನ್ಸಿಲ್‍ನ ಸಹಯೋಗದೊಂದಿಗೆ ಅಂತಿಮ ವರ್ಷದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನವು ಆಯಾ ವಿಭಾಗಗಳಲ್ಲಿ ನಡೆಯಿತು. ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಾವು ಈ ನಾಲ್ಕು ವರ್ಷದಲ್ಲಿ ಅಭ್ಯಾಸ ಮಾಡಿದ ವಿಷಯಗಳನ್ನು ಅಂತಿಮ ವರ್ಷದಲ್ಲಿ ತಮ್ಮ ಯೋಚನೆ ಮತ್ತು ಯೋಜನೆಯನ್ನು ರೂಪಿಸಲು ಈ ಪ್ರಾಜೆಕ್ಟ್ ಸ್ಪರ್ಧೆಯು ಒಂದು […]

ಉಡುಪಿ ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠ: 2 ಕೋ ರೂ. ವೆಚ್ಚದಲ್ಲಿ ನೂತನ ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ

ಉಡುಪಿ: ಉಡುಪಿ ಕವಿ ಮುದ್ದಣ ಮಾರ್ಗದಲ್ಲಿರುವ ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠದ ಮೊದಲ ಮಹಡಿಯಲ್ಲಿ ಸುಮಾರು 2 ಕೋ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ದಿ.ಉಮಾ ಕೃಷ್ಣ ರಾವ್ ಅವರ ಸ್ಮರಣಾರ್ಥ ಅವರ ಪುತ್ರ ಮುಂಬಯಿ ಉದ್ಯಮಿ ಕೆ.ಕೆ. ಆವರ್ಸೇಕರ್ ನಿರ್ಮಿಸಿಕೊಟ್ಟ ಬಾಲ ಭೋಜನಾಲಯ ಮತ್ತು ಧ್ಯಾನ ಮಂದಿರ ಲೋಕಾರ್ಪಣೆ ಮೇ.10ರಂದು ಜರುಗಿತು. ಮಂದಿರ ಮಠದ ಮ್ಯಾನೇಜಿಂಗ್ ಟ್ರಸ್ಟಿಕೆ.ಕೆ. ಆವರ್ಸೇಕರ್ ಮುಂಬಯಿ ಉದ್ಘಾಟಿಸಿದರು. ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿಕೆ. ಮೋಹನಚಂದ್ರನ್ ನಂಬಿಯಾರ್, ಶಾಸಕ ಯಶ್ ಪಾಲ್ ಎ. […]