ಬೆಂಗಳೂರು: ರಾಜ್ಯದಲ್ಲಿ ಆಹಾರ ಪದಾರ್ಥಗಳ ವಿತರಣೆಯಲ್ಲಿ ‘ಲಿಕ್ವಿಡ್ ನೈಟ್ರೋಜನ್’ ಬಳಸುವುದು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಸ್ಮೋಕಿಂಗ್ ಬಿಸ್ಕತ್ ಅಥವಾ ಡೆಸರ್ಟ್ಸ್ ಹಾಗೂ ಇತರೆ ತಿನಿಸುಗಳನ್ನು ಸೇವನೆಗಾಗಿ ಗ್ರಾಹಕರಿಗೆ ಒದಗಿಸುವ ಸಂದರ್ಭದಲ್ಲಿ ಲಿಕ್ವಿಡ್ ನೈಟ್ರೋಜನ್ (ದ್ರವ ಸಾರಜನಕ) ಬಳಸುವುದನ್ನು ನಿರ್ಬಂಧಿಸಲಾಗಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಇದೀಗ ಮತ್ತೊಮ್ಮೆ ಪ್ರಕಟಣೆ ನೀಡಲಾಗಿದೆ. ಈ ಕುರಿತು ಮೇ 3ರಂದು ಆದೇಶಿಸಲಾಗಿದ್ದು, ಅಗತ್ಯ ಪ್ರಕಟಣೆಯನ್ನು ಹೊರಡಿಸಲಾಗಿತ್ತು. ಆದೇಶವನ್ನು ಉಲ್ಲಂಘಿಸಿದಲ್ಲಿ ಆಹಾರ ತಯಾರಕರ ವಿರುದ್ಧ 7 ವರ್ಷ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ರೂಪಾಯಿಗಳ ವರೆಗೆ ದಂಡ ವಿಧಿಸಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.
ಲಿಕ್ವಿಡ್ ನೈಟ್ರೋಜನ್ ಪಾನ್ ತಿಂದು 12 ವರ್ಷದ ಬಾಲಕಿಯ ಹೊಟ್ಟೆಯಲ್ಲಿ ರಂದ್ರವಾಗಿತ್ತು. ಈ ಜನರಲ್ಲಿ ಆತಂಕ ಸೃಷ್ಟಿಸಿದ್ದು ಇದರ ಬೆನ್ನಲ್ಲೇ ಲಿಕ್ವಿಡ್ ನೈಟ್ರೋಜನ್ ಪಾನ್ ನಿಷೇಧಕ್ಕೆ ಹೋಟೆಲ್ ಅಸೋಸಿಯೇಷನ್ ಮುಂದಾಗಿತ್ತು.
ಜೊತೆಗೆ ಎಲ್ಲಾ ಹೋಟೆಲ್ ಹಾಗೂ ಪಾನ್ ಬೀಡಾ ಅಂಗಡಿಗಳಿಗೂ ಹೋಟೆಲ್ ಅಸೋಸಿಯೇಷನ್ ಆದೇಶ ನೀಡಿದೆ. ಈ ಆದೇಶ ಮೀರಿಯೂ ಒಂದು ವೇಳೆ ಲಿಕ್ವಿಡ್ ನೈಟ್ರೋಜನ್ ಪಾನ್ ಮಾರಿದ್ದೇ ಆದರೆ ಅಂತಹ ಹೋಟೆಲ್ ಅಥವಾ ಪಾನ್ ಬೀಡಾ ದಂಡ ಆಥವಾ ಪರವಾನಿಗೆ ರದ್ದು ಮಾಡಲು ನಿರ್ಧರಿಸಲಾಗಿದೆ.
 
								 
															





 
															 
															 
															











