ಉಚ್ಚಾಟನೆ, ವಜಾ ಮಾಡಿರುವುದು ಸ್ವೀಕಾರ, ಸ್ವಾಗತಾರ್ಹ: ರಘುಪತಿ ಭಟ್ಟರಿಗೆ ನೀಡುವೆ ಸದಾ ಸಹಕಾರ – ಮಹೇಶ್ ಠಾಕೂರ್

ಉಡುಪಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸುತ್ತಿರುವ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಜೊತೆ ಗುರುತಿಸಿಕೊಂಡಿರುವ ಬಿಜೆಪಿ ನಾಲ್ವರು ಕಾರ್ಯಕರ್ತರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಅವರ ಆದೇಶಕ್ಕೆ ಬಿಜೆಪಿ ಕಾರ್ಯಕರ್ತ ಮಹೇಶ್ ಠಾಕೂರ್ ಪ್ರತಿಕ್ರಿಯೆ ನೀಡಿದ್ದಾರೆ. ಉಚ್ಚಾಟನೆ, ವಜಾ ಮಾಡಿರುವುದು ಸ್ವೀಕಾರ, ಸ್ವಾಗತಾರ್ಹ. ರಘುಪತಿ ಭಟ್ಟರಿಗೆ ನೀಡುವೆ ಸದಾ ಸಹಕಾರ ಎಂದು ಹೇಳಿದ್ದಾರೆ. ಕಳೆದ 23 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯನಾಗಿ […]

ಮಂಗಳೂರು: ತಾಯಿ ಮತ್ತು ಮಗು ನಾಪತ್ತೆ.

ಮಂಗಳೂರು: ಮಂಗಳೂರು ಬೈಕಂಪಾಡಿಯಲ್ಲಿ ತಾಯಿ ಹಾಗೂ ಮಗು ನಾಪತ್ತೆಯಾಗಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕಂಪಾಡಿ ಮೀನಕಳಿಯ ನಿವಾಸಿ ಶ್ವೇತಾ(31) ಹಾಗೂ ಮಗಳು ಇಶಿಕಾ(6) ನಾಪತ್ತೆಯಾದವರು. ಮೇ. 29 ಮಧ್ಯಾಹ್ನ 3 ಗಂಟೆ ಹೊತ್ತಿಗೆ ತಾಯಿ ಮನೆಯಿಂದ ಗಂಡನ ಮನೆ ಕುಳೂರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ತಾಯಿ ಮಗಳು ಪತ್ತೆಯಾಗಿಲ್ಲ. ಈಗಾಗಲೇ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾರಿಗಾದರೂ ತಾಯಿ ಮಗಳ ಬಗ್ಗೆ ಮಾಹಿತಿ ಸಿಕ್ಕಿದರೆ ಕೂಡಲೇ ಪಣಂಬೂರು ಪೊಲೀಸರನ್ನು […]

ಕೇರಳಕ್ಕೆ ಮುಂಗಾರು ಆಗಮನ; ಮೇ.31 ಅಥವಾ ಜೂ.1ರಂದು ಕರ್ನಾಟಕಕ್ಕೆ ಆಗಮಿಸುವ ಸಾಧ್ಯತೆ.

ಬೆಂಗಳೂರು: ಕೇರಳಕ್ಕೆ ಇಂದು ​ಮುಂಗಾರು ಮಳೆ ಪ್ರವೇಶಿಸಲಿದೆ. ಮೇ 31 ಅಥವಾ ಜೂ 1ರಂದು ಕರ್ನಾಟಕಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮೂನ್ಸೂಚನೆ ಕೊಟ್ಟಿದೆ. ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪದಿಂದ ಮೇ 19ರಿಂದ ಮಾನ್ಸೂನ್​ ಆರಂಭವಾಗಿತ್ತು. ಪೂರಕ ವಾತಾವರಣ ಇರುವುದು, ಮಾರುತಗಳು ಪ್ರಬಲವಾಗಿರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ವ್ಯಾಪಿಸಿರುವ ಮಾನ್ಸೂನ್​ ಕೇರಳದ ಸಮೀಪದಲ್ಲಿದೆ. ಇಂದು ಕೇರಳದ ಕರಾವಳಿಗೆ ಆಗಮಿಸಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ಜೂನ್​ನಿಂದ ಸೆಪ್ಟೆಂಬರ್​ವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಬೀಳುವ […]

ರಾಜ್ಯದಲ್ಲಿ ‘ಲಿಕ್ವಿಡ್ ನೈಟ್ರೋಜನ್’ ಬಳಸುವುದು ನಿಷೇಧ: ರಾಜ್ಯ ಸರ್ಕಾರ ಆದೇಶ.

ಬೆಂಗಳೂರು: ರಾಜ್ಯದಲ್ಲಿ ಆಹಾರ ಪದಾರ್ಥಗಳ ವಿತರಣೆಯಲ್ಲಿ ‘ಲಿಕ್ವಿಡ್ ನೈಟ್ರೋಜನ್’ ಬಳಸುವುದು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಸ್ಮೋಕಿಂಗ್ ಬಿಸ್ಕತ್ ಅಥವಾ ಡೆಸರ್ಟ್ಸ್ ಹಾಗೂ ಇತರೆ ತಿನಿಸುಗಳನ್ನು ಸೇವನೆಗಾಗಿ ಗ್ರಾಹಕರಿಗೆ ಒದಗಿಸುವ ಸಂದರ್ಭದಲ್ಲಿ ಲಿಕ್ವಿಡ್ ನೈಟ್ರೋಜನ್ (ದ್ರವ ಸಾರಜನಕ) ಬಳಸುವುದನ್ನು ನಿರ್ಬಂಧಿಸಲಾಗಿದೆ.ಸಾರ್ವಜನಿಕರ ಹಿತದೃಷ್ಟಿಯಿಂದ ಇದೀಗ ಮತ್ತೊಮ್ಮೆ ಪ್ರಕಟಣೆ ನೀಡಲಾಗಿದೆ. ಈ ಕುರಿತು ಮೇ 3ರಂದು ಆದೇಶಿಸಲಾಗಿದ್ದು, ಅಗತ್ಯ ಪ್ರಕಟಣೆಯನ್ನು ಹೊರಡಿಸಲಾಗಿತ್ತು. ಆದೇಶವನ್ನು ಉಲ್ಲಂಘಿಸಿದಲ್ಲಿ ಆಹಾರ ತಯಾರಕರ ವಿರುದ್ಧ 7 ವರ್ಷ ಜೀವಾವಧಿ ಶಿಕ್ಷೆ ಹಾಗೂ […]