ಮಲ್ಪೆ: ಇಸ್ಪೀಟು ಆಟ ಆಡುತ್ತಿರುವಾಗ ದಾಳಿ – ನಾಲ್ಕು ಮಂದಿ ಪೊಲೀಸ್ ವಶಕ್ಕೆ.

ಮಲ್ಪೆ: ಇಸ್ಪೀಟು ಆಟ ಆಡುತ್ತಿರುವಾಗ ಪೊಲೀಸರು ದಾಳಿ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿದ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಬಂದರಿನ ಒಳಗೆ ನಡೆದಿದೆ.

ಬಂಧಿಸಿದ ವ್ಯಕ್ತಿಗಳಲ್ಲಿ ಸತ್ಯನಂದನ, ಯಮುನಪ್ಪ, ರಂಜಿತ್, ರಾಮ್ ದಾಸ್ ಎಂದು ತಿಳಿದು ಬಂದಿದೆ. ಮಲ್ಪೆ ಪೊಲೀಸರು ಬಂಧಿತರ ಬಳಿ ಇದ್ದ ಸೊತ್ತುಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

ಘಟನೆ ವಿವರ:

ಮಲ್ಪೆ: ದಿನಾಂಕ 29/12/2023 ರಂದು ಗುರುನಾಥ ಬಿ ಹೆಚ್‌ , ಪೊಲೀಸ್‌ ಉಪನಿರೀಕ್ಷಕರು, ಮಲ್ಪೆ ಪೊಲೀಸ್‌ ಠಾಣೆ ಇವರಿಗೆ ಮಲ್ಪೆ ಬಂದರಿನ ಹೊಸ ದಕ್ಕೆಯ ಬಳಿ ಖಾಲಿ ಸಾರ್ವಜನಿಕ ಜಾಗದಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವುದಾಗಿ ಬಂದ ಮಾಹಿತಿಯಂತೆ ದಾಳಿ ನಡೆಸಿದ್ದು ಜುಗಾರಿ ಆಟ ಆಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಕೆಲವರನ್ನು ಹಿಡಿದು ಹೆಸರು ವಿಚಾರಿಸಲಾಗಿ 1) ಸತ್ಯನಂದನ (40), 2) ಯಮುನಪ್ಪ (24), 3) ರಂಜಿತ್(32), 4) ರಾಮದಾಸ್ (55) ಎಂದು ತಿಳಿಸಿದ್ದು, ಆಟಕ್ಕೆ ಬಳಸಿದ ಇಸ್ಪೀಟು ಎಲೆಗಳು, ಪ್ಲಾಸ್ಟಿಕ್ ಚೀಲ ಹಾಗೂ ಜೂಜಾಟಕ್ಕೆ ಬಳಸಿದ 1500/- ರೂಪಾಯಿ ಹಾಗೂ ಆರೋಪಿತರ ವಶದಲ್ಲಿ ಇದ್ದ 2660/- ರೂಪಾಯಿ ಸ್ವಾಧೀನಪಡಿಸಿಕೊಂಡಿರುವುದಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 148/2023 ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.