ಮಂಗಳೂರು:ಮಗುವಿನ ವಕ್ರದಂತ ಮತ್ತು ಮುಖಾಂಗ ನ್ಯೂನತಾ ಸಮಸ್ಯೆಗಳನ್ನು ತಡೆಯುವಲ್ಲಿ ತಾಯಿಯ ಪಾತ್ರ -ಅರಿವು ಮತ್ತು ಜಾಗ್ರತಾ ಮಾಹಿತಿ ಕಾರ್ಯಗಾರ ನಗರದ ಮುಕ್ಕದ ಶ್ರೀನಿವಾಸ್ ದಂತ ಮಹಾವಿದ್ಯಾಲಯದಲ್ಲಿ ವಕ್ರದಂತ ಮತ್ತು ಮುಖಾಂಗ ನ್ಯೂನತಾ ಚಿಕಿತ್ಸಾ ವಿಭಾಗ ಮತ್ತು ಮಂಗಳೂರು ವಕ್ರ ದಂತ ಚಿಕಿತ್ಸಕರ ಸಂಘ ಸಹಯೋಗದಲ್ಲಿ ನಡೆಯಿತು.
ಸಂಸ್ಥೆಯ ಡೀನ್ ಮತ್ತು ಪ್ರಿನ್ಸಿಪಾಲ್ ಡಾ. ಕೆ. ರೇಷ್ಮಾ ಪೈ ಉದ್ಘಾಟಿಸಿದರು. ವಕ್ರದಂತ ಚಿಕಿತ್ಸಕರ ಸಂಘದ ಸಂಚಾಲಕ ಡಾ.ಮಿಥುನ್ ನಾಯಕ್ ಶುಭ ಹಾರೈಸಿದರು. 70ಕ್ಕೂ ಅಧಿಕ ತಾಯಂದಿರು ಭಾಗವಹಿಸಿದ್ದರು. ವಿಭಾಗದ ಮುಖ್ಯಸ್ಥ ಡಾ. ಪ್ರವೀಣ್ ಶೆಟ್ಟಿ ವಕ್ರದಂತ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ತಾಯಂದಿರ ಪಾತ್ರದ ಬಗ್ಗೆ ಮಾಹಿತಿ ನೀಡಿದರು.ಡಾ. ಸಿದ್ದಾರ್ಥ ರಾಘವ್ ವಂದಿಸಿದರು.ಡಾ. ರೆನಿಲ್ಡಾ ಮತ್ತು ಡಾ.ಸುಶ್ಮಿತಾ ನಿರೂಪಿಸಿದರು.

















