ಜೇಸಿಐ ವತಿಯಿಂದ ರಾಘವೇಂದ್ರ ಕುಲಾಲ್ ಹೆಮ್ಮಾಡಿ‌ ಅವರಿಗೆ ಸನ್ಮಾನ

ಕುಂದಾಪುರ- ಜೆಸಿಐ ಕುಂದಾಪುರ ಸಿಟಿ ಯಾ ಆಶ್ರಯದಲ್ಲಿ ನಡೆದ ಅಧ್ಯಕ್ಷರ ವರದಿ ಕಾರ್ಯಕ್ರಮ ದಲ್ಲಿ ಜೇಸಿಐ ಕುಂದಾಪುರ ಸಿಟಿಯ ಪೂರ್ವಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು 2024ರ ಅಧ್ಯಕ್ಷರಾದ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಅವರಿಗೆ ಕುಂದಾಪುರ ಜೇಸಿ ಭವನದ ಮೊಹಮ್ಮದ್ ಅನ್ವರ್ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ರಾದ ಜೇಸಿ ಕೆ ಕಾರ್ತಿಕೇಯ ಮದ್ಯಾಸ್ತ್ಯ ವಲಯ 15ರ ನಿಯೋಜಿತ ಅಧ್ಯಕ್ಷ ಜೇಸಿ ಅಭಿಲಾಷ್ ಬಿ ಏ, ವಲಯ 15ರ ಪೂರ್ವ ವಲಯಾಧ್ಯಕ್ಷ ಜೇಸಿ ಅಲನ್ ರೋಹನ್ ವಾಜ್, ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ರಾದ ಹುಸೇನ್ ಹೈಕಾಡಿ,ಪೂರ್ವ ಅಧ್ಯಕ್ಷರಾದ ರಾಘವೇಂದ್ರ ಚರಣ್ ನಾವಡ, ಜಯಚಂದ್ರ ಶೆಟ್ಟಿ, ನಾಗೇಶ್ ನಾವಡ, ಚಂದ್ರಕಾಂತ್, ವಿಜಯ ಭಂಡಾರಿ,ಗಿರೀಶ್ ಹೆಬ್ಬಾರ್, ಡಾ ಸೋನಿ ಡಿ ಕೋಸ್ಟ. ನಿಯೋಜಿತ ಅಧ್ಯಕ್ಷ ಯೂಸುಫ್ ಸಲೀಮ್, ಲೇಡಿ ಜೇಸಿ ಅಧ್ಯಕ್ಷೆ ರೇಷ್ಮಾ ಕೋಟ್ಯಾನ್ ಯುವ ಜೇಸಿ ಛೇರ್ಮನ್ ಕಿರಣ್ ಪೂಜಾರಿ,ಸದ್ಯಸ್ಯರಾದ ಜಯಶೀಲ ಪೈ, ರಾಜು ಪೂಜಾರಿ,ಜಗದೀಶ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.