ಚಿತ್ರಕಲೆಯಲ್ಲಿ ಮಿಂಚಿದ ಉಡುಪಿಯ ಯುವ ಕಲಾವಿದ ವೆಲ್ರೋಯ್ ಡಿಕ್ಸನ್ ಡಿಸೋಜಾ

ಉಡುಪಿ: ಕಲೆ ಎಂಬುವುದು ಅಷ್ಟು ಸುಲಭದಲ್ಲಿ ಯಾರಿಗೂ ಒಲಿಯುವುದಿಲ್ಲ. ಆದ್ರೆ ಇಲ್ಲೊಬ್ಬ ಯುವಕ ಯಾವುದೇ ಕಲಿಕೆ, ಗುರು ಇಲ್ಲದೆ, ತಾನಾಗಿಯೇ ಚಿತ್ರಕಲೆಯನ್ನು ಸಿದ್ಧಿಸಿಕೊಂಡಿದ್ದಾನೆ.


ಹೌದು, ಉಡುಪಿಯ ಪಿಪಿಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ವೆಲ್ರಾಯ್ ಡಿಕ್ಸನ್ ಡಿಸೋಜಾ ಅವರೇ ಈ ಅದ್ಭುತ ಚಿತ್ರಕಲಾವಿದ. ಚಿತ್ರಕಲೆಯನ್ನು ಯಾವುದೇ ಗುರುಗಳಿಲ್ಲದೆ ತಾವೇ ಕಲಿತು, ಈಗ ತಮ್ಮ ಕಲೆಯ ಪ್ರದರ್ಶನ ಮಾಡುವ ಹಂತಕ್ಕೆ ತಲುಪಿದ್ದಾರೆ. ಕಲೆಯ ಮೇಲಿರುವ ಆಸಕ್ತಿಯೇ ಇಂತಹ ಸಾಧನೆ ಮಾಡಲು ಅವರನ್ನು ಪ್ರೇರೇಪಿಸಿದೆ‌. ವೆಲ್ರಾಯ್ ಡಿಕ್ಸನ್ ಅವರು ಈಗಾಗಲೇ ಹಲವು‌ ಗಣ್ಯರ ಚಿತ್ರಗಳನ್ನು‌ ಬಿಡಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.


ಡೈಜಿ ವಲ್ಡ್ ನಿರ್ದೇಶಕ, ಖ್ಯಾತ ನಿರೂಪಕ ವಾಲ್ಟರ್ ನಂದಳಿಕೆ, ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಹೀಗೆ ಹಲವು ಗಣ್ಯರ ಚಿತ್ರಗಳನ್ನ ಬಿಡಿಸಿದ್ದಾರೆ. ಗಣ್ಯರ ಸಮ್ಮುಖದಲ್ಲೇ ಅವರ ಚಿತ್ರಗಳನ್ನ ಬಿಡಿಸಿ ಅವರ ಕೈಗಿತ್ತಿದ್ದೂ ಇದೆ. ಹೀಗೆ ಡಿಕ್ಸನ್ ಡಿಸೋಜಾ ಅವರು ಚಿತ್ರಕಲೆಯಲ್ಲಿ ನಿರ್ದಿಷ್ಟ ಗುರು ಇಲ್ಲದೇ ಹೋದರೂ, ಗುರಿಯೊಂದಿಗೆ ಮುಂದುವರೆದಿದ್ದಾರೆ.

https://www.instagram.com/_.velroyz_artsaga._?igsh=YWczYmxxY21qeG1q