ಕಾರ್ಕಳ ಕಾಂಗ್ರೆಸ್ ಮುಖಂಡನ ವಿರುದ್ಧ ಸ್ಟೇಟಸ್: ಪ್ರಶ್ನಿಸಿದ್ದಕ್ಕೆ ಹಲ್ಲೆ.
ಕಾರ್ಕಳ: ಕಾಂಗ್ರೆಸ್ ಪಕ್ಷದ ಮುಖಂಡರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ವಿರುದ್ಧ ವಾಟ್ಸಾಪ್ ಸ್ಟೇಟಸ್ ಹಾಕಿ,ಅದರ ಕುರಿತು ಪ್ರಶ್ನಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ಯನ್ನೂ ನಡೆಸಿ, ಜೀವಬೆದರಿಕೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ದೀಕ್ಷಿತ್ ಶೆಟ್ಟಿ ಎಂಬುವವರು ಕಾರ್ಕಳ ಪೊಲೀಸ್ ಠಾಣೆಯಲ್ಲಿ ನಿತ್ಯಾನಂದ ಕುಲಾಲ್ ಅವರ ವಿರುದ್ದ ದೂರು ನೀಡಿದ್ದಾರೆ. ನಿತ್ಯಾನಂದ ಕುಲಾಲ್ ಮುನಿಯಾಲು ಉದಯ ಕುಮಾರ್ ಶೆಟ್ಟಿ ವಿರುದ್ದ ಅಸಭ್ಯವಾಗಿ ಮೇಸೆಜ್ ಗಳನ್ನು ರವಾನೆ ಮಾಡುತ್ತಿದ್ದು. ಈ ಬಗ್ಗೆ ತಾನು ಪ್ರಶ್ನಿಸಿದಾಗ ನಿತ್ಯಾನಂದ ಕುಲಾಲ್ ತನಗೆ ದಮ್ಕಿ […]
ಪರಶುರಾಮ ಥೀಂ ಪಾರ್ಕ್ ವಿವಾದ: ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ಮಧ್ಯೆ ಹೊಡೆದಾಟ.

ಉಡುಪಿ: ಜಿಲ್ಲೆಯಾದ್ಯಂತ ಭಾರೀ ಸದ್ದು ಮಾಡಿರುವ ಪರಶುರಾಮ ಥೀಂ ಪಾರ್ಕ್ ವಿವಾದದ ವಿಚಾರವಾಗಿ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ಮುಂದುವರೆದಿದೆ. ಈ ಸಂಬಂಧ ನಡೆದ ಜಗಳದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದು ದೂರು ದಾಖಲಾಗಿದೆ.ಕಾಂಗ್ರೆಸ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಕಾರ್ಯಕರ್ತರು ಪೋಸ್ಟ್ ಮಾಡಿದ್ದರು. ಈ ವಿಚಾರವಾಗಿ ದೊಂಡೇರಂಗಡಿ ಬಿಜೆಪಿ ಕಾರ್ಯಕರ್ತರಾದ ಉದಯ್ ನಾಯ್ಕ್, ನಿತ್ಯಾನಂದ ಕುಲಾಲ್, ರೂಪೇಶ್ ಕುಮಾರ್ ಎಂಬವರ ಮೇಲೆ ಹಲ್ಲೆ ನಡೆದಿದೆ.ಕಾಂಗ್ರೆಸ್ ನಾಯಕ ಉದಯಕುಮಾರ್ ಶೆಟ್ಟಿ ಸಹಚರರು ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದ್ದು, […]
ಚಿತ್ರಕಲೆಯಲ್ಲಿ ಮಿಂಚಿದ ಉಡುಪಿಯ ಯುವ ಕಲಾವಿದ ವೆಲ್ರೋಯ್ ಡಿಕ್ಸನ್ ಡಿಸೋಜಾ

ಉಡುಪಿ: ಕಲೆ ಎಂಬುವುದು ಅಷ್ಟು ಸುಲಭದಲ್ಲಿ ಯಾರಿಗೂ ಒಲಿಯುವುದಿಲ್ಲ. ಆದ್ರೆ ಇಲ್ಲೊಬ್ಬ ಯುವಕ ಯಾವುದೇ ಕಲಿಕೆ, ಗುರು ಇಲ್ಲದೆ, ತಾನಾಗಿಯೇ ಚಿತ್ರಕಲೆಯನ್ನು ಸಿದ್ಧಿಸಿಕೊಂಡಿದ್ದಾನೆ. ಹೌದು, ಉಡುಪಿಯ ಪಿಪಿಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ವೆಲ್ರಾಯ್ ಡಿಕ್ಸನ್ ಡಿಸೋಜಾ ಅವರೇ ಈ ಅದ್ಭುತ ಚಿತ್ರಕಲಾವಿದ. ಚಿತ್ರಕಲೆಯನ್ನು ಯಾವುದೇ ಗುರುಗಳಿಲ್ಲದೆ ತಾವೇ ಕಲಿತು, ಈಗ ತಮ್ಮ ಕಲೆಯ ಪ್ರದರ್ಶನ ಮಾಡುವ ಹಂತಕ್ಕೆ ತಲುಪಿದ್ದಾರೆ. ಕಲೆಯ ಮೇಲಿರುವ ಆಸಕ್ತಿಯೇ ಇಂತಹ ಸಾಧನೆ ಮಾಡಲು ಅವರನ್ನು ಪ್ರೇರೇಪಿಸಿದೆ. ವೆಲ್ರಾಯ್ ಡಿಕ್ಸನ್ ಅವರು ಈಗಾಗಲೇ […]
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡಕ್ಕೆ ಕಂಚಿನ ಪದಕ.

ಪ್ಯಾರಿಸ್ : 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ ದಕ್ಕಿದೆ. ಗುರುವಾರ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-1 ಅಂಕಗಳಿಂದ ಸೋಲಿಸಿ ಭಾರತ ಪುರುಷರ ಹಾಕಿ ತಂಡವು ಕಂಚಿನ ಪದಕಕ್ಕೆ ಕೊರಳೊಡ್ಡಿತು.
ಬಂಟ್ವಾಳ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ.

ಬಂಟ್ವಾಳ: ತಾಲೂಕಿನ ಬೆಂಜನಪದವುನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ. 7 ರಂದು ಬುಧವಾರ ರಾತ್ರಿ ನಡೆದಿದೆ. ಬೆಂಜನಪದವು ಕರಾವಳಿ ಸೈಟ್ ನಿವಾಸಿ ಉದಯ ಆಚಾರ್ಯ ಅವರ ಮಗ ಭವಿಷ್ಯ ಆಚಾರ್ಯ (15) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಬಡಕಬೈಲಿನ ಖಾಸಗಿ ಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯಾಗಿದ್ದ ಈತ ಕಲಿಕೆ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದನ್ನು ಮನೆಯವರು ಶಂಕಿಸಿದ್ದಾರೆ. ಅಗಸ್ಟ್ 7 ರಂದು ಬುಧವಾರ ರಾತ್ರಿ ಸುಮಾರು 7.30 ಗಂಟೆಗೆ ಸ್ನಾನ ಮಾಡಲೆಂದು ಬಚ್ಚಲು […]